ಎಂಪಿ ಕಛೇರಿಯಲ್ಲಿ ರೈತ ಸಂಘದ ಪ್ರತಿಭಟನೆ: ಅನ್ನದಾತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಹಾಸನ : ಅನ್ನದಾತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಒತ್ತಾಯಿಸಿ, ಇನ್ನು ದೆಹಲಿಯಲ್ಲಿ ಜಗಜಿತ್ ಸಿಂಗ್ ದಲೆವಾಲ ಉಪವಾಸ ನಡೆಸಿ ೧೫ ದಿನ ಕಳೆದು ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಈ ಬಗ್ಗೆ ಯಾವ ಸಂಸದರು ಧ್ವನಿ ಎತ್ತದಿರುವ ನಿರ್ಲಕ್ಷ್ಯ ಖಂಡಿಸಿ ನಗರದ ಎಂಪಿ. ಕಛೇರಿ ಮುಂದೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟಿಸಿ ಎಂಪಿ ಕಛೇರಿಗೆ ಮನವಿ ಸಲ್ಲಿಸಿದರು.

ಇದೆ ವೇಳೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಮ್ಮ ಜಿಲ್ಲೆಯ ರೈತರುಗಳು ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷರಾದ ಜಗಜಿತ್ ಸಿಂಗ್ ದಲೈವಾ ರವರು ನವೆಂಬರ್ ೨೬ ರಿಂದ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಜಿಲ್ಲಾವಾರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮಿಂದ ಆಯ್ಕೆಯಾದ ಸಂಸತ್ ಸದಸ್ಯರು ಪ್ರಬಲ ಧ್ವನಿ ಎತ್ತುತ್ತಿಲ್ಲ. ರೈತ ಮುಖಂಡರು ಉಪವಾಸ ಸತ್ಯಗ್ರಹದ ಮೂಲಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ರೂ ಸಂಸದರು ನಿರ್ಲಕ್ಷ್ಯವಹಿಸುವಹಿಸಿರುವುದನ್ನು ಖಂಡಿಸುತ್ತೇವೆ ಎಂದರು. ರೈತರ ಸಮಸ್ಯೆಗಳಾದ ಜಿಲ್ಲೆಯ ಸಮಸ್ಯೆಗಳ ಬಗ್ಗೆಯೂ ನಮ್ಮ

ಈ ಸತ್ಯಗ್ರಹದಲ್ಲಿ ಆಗ್ರಹಿಸುತ್ತಿದ್ದೇವೆ. ಹಾಸನ ಜಿಲ್ಲೆಯ ಸಮಸ್ಯೆಗಳಾದ ಕೋಬ್ಬರಿಗೆ ಬೆಲೆ ಜೋಳದ ಬೆಲೆ, ಹಾಗೆಯೇ ಭತ್ತದ ಬೆಲೆ ಹಾಗೆಯೇ ರೈತರ ಒಕ್ಕಲಿಬ್ಬಿಸುತ್ತಿರುವ ೯೪ಸಿ ನಲ್ಲಿ ಇಲ್ಲಿವರೆಗೆ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಹಾಗೂ ಬಗರು ಹುಕುಂನಡಿಯಲ್ಲಿ ರೈತರಿಗೆ ಜಮೀನುಗಳ ಸಾಗುವಳಿ ಪತ್ರ ಕೊಡದೆ ಫಾರಂ ೫೩ ನಡೆಯಲ್ಲಿ ಮಂಜೂರು ಮಾಡದೆ ಸತಾಯಿಸುತ್ತಿರುವ ಬಗ್ಗೆ, ರೈತರಿಗೆ ಬೆಂಬಲ ಬೆಲೆ ಕೊಡದಿರುವ ಬಗೆ ಹಾಗೂ ರೈತರಿಗೆ ವಿದ್ಯುತ್ ಸಂಪರ್ಕಕ್ಕೆ ಲಕ್ಷಾಂತರ ಹಣ ವಸೂಲಿ ಮಾಡಲು ಸರ್ಕಾರ ಚಿಂತಿಸಿರುವ ಬಗ್ಗೆ ಹಾಗೂ ವಿದ್ಯುತ್ ಕಡಿತಗೊಳಿಸಿ ಕೇವಲ ಮೂರರಿಂದ ನಾಲ್ಕು ಗಂಟೆ ಸೌಕರ್ಯಗಳನ್ನು ಕೊಟ್ಟಿರುವುದಿಲ್ಲ. ರೈತರ ರಾಷ್ಟ್ರೀಯ ವಿಚಾರಗಳ ಬಗ್ಗೆ ನಮ್ಮ ಉಪವಾಸ ಸತ್ಯಾಗ್ರಹದಲ್ಲಿ ಮಳೆ ಹನಿ ಹಾಗೂ ಪರಿಹಾರವನ್ನು ಕೊಡಲು ಹಾಗೂ ನಿರಂತರವಾಗಿ ಜಿಲ್ಲೆಯ ಮೂರು ತಾಲೂಕುಗಳ ಆನೆ ಹಾವಳಿಯ ಕುರಿತಾಗಿ ವಕ್ಕರಲ್ಲ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ದೆಹಲಿ ರೈತ ಹೋರಾಟದ ರೂವಾರಿ ರಾಷ್ಟ್ರೀಯ ರೈತ ಮುಖಂಡರಾದ ಜಗಜೀತ್ ಸಿಂಗ್ ದಲೈವಾಲ ಉಪವಾಸ ೧೫ನೇ ದಿನಕ್ಕೆ ಮುಂದುವರಿದು ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿಯೂ ಸಂಸತ್ ಅಧಿವೇಶ ನಡೆಯುತ್ತಿದ್ದರು ಸಂಸತ್ ನಲ್ಲಿ ಚರ್ಚಿಸದೆ ನಿದ್ರೆ ಮಾಡುವಂತೆ ನಾಟಕ ಮಾಡುತ್ತಿರುವ ಸಂಸದರುಗಳನ್ನು ಎಚ್ಚರಿಸಲು ಇಲ್ಲಿನ ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ನಾವು ಕೇಂದ್ರ ಸರ್ಕಾರವನ್ನು ಭಿಕ್ಷೆ ಕೇಳುತ್ತಿಲ್ಲ ನಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಖಾತರಿಯಾದ ಕಾನೂನು ಕೆಳುತ್ತಿದ್ದೇವೆ. ಪ್ರಧಾನಿ ಮೋದಿಯವರು ಎರಡು ವರ್ಷಗಳ ಹಿಂದೆ ರೈತರಿಗೆ ಭರವಸೆ ನೀಡಿ ಹುಷಿಗೊಳಿಸಿದ್ದಾರೆ. ದೇಶದ ರೈತರಿಗಾಗಿ ತಮ್ಮ ಪ್ರಾಣವನ್ನ ಪಣಕಿಟ್ಟು ೧೫ ದಿನಗಳಿಂದ ಉಪವಾಸ ನಡೆಸುತ್ತಿರುವ ಜಗಜಿತ್ ಸಿಂಗ್ ದಲೆವಾಲ ಜೊತೆ ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ನಡೆಸಿ ರೈತರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸುತಿದ್ದೇವೆ ಎಂದು ಹೇಳಿದರು. ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವುದು ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು. ೬೦ ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಬೆಳೆ ವಿಮೆ ಪದ್ಧತಿ ಬದಲಾಗಬೇಕು ಪ್ರತಿ ರೈತನ ಹೊಲದ ಬೆಳೆ ವಿಮೆ ಪರಿಹಾರ ಪದ್ದತಿ ಜಾರಿಗೆ ಬರಬೇಕು ಎಂದು ದೆಹಲಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಬಿ. ಧರ್ಮರಾಜು, ಅತ್ತಿಹಳ್ಳಿ ದೇವರಾಜು, ದರ್ಶನ್, ಪವನ್, ಯೋಗನಾಂದ್, ಕೃಷ್ಣಮೂರ್ತಿ, ತೀರ್ಥಕುಮಾರ್, ಬರಡನಪುರ ನಾಗರಾಜು, ಸೂರಿ, ಧರಣಿ ಇತರರು ಉಪಸ್ಥಿತರಿದ್ದರು.

Post a Comment

Previous Post Next Post