ಹಾಸನ: ನಗರದ ಹೊಸ ಬಸ್ ನಿಲ್ದಾಣದ ಎದುರಿನ ಕೆಹೆಚ್‌ಬಿ ಬಡಾವಣೆಯ ಮನೆಯೊಂದರಲ್ಲಿ ಸುಮಾರು ೧೫ ಲಕ್ಷ ರೂ. ನಗದು ಹಾಗೂ ೭ ಲಕ್ಷ ರೂ. ಬೆಲೆ ಬಾಳುವ ೧೦೫ ಗ್ರಾಂ. ಚಿನ್ನಾಭರಣ ಕಳವು ಮಾಡಲಾಗಿದೆ.
ಬಡಾವಣೆಯ ಜೇಷ್ಠ ರೆಸಿಡೆನ್ಸಿ ಸಮೀಪದ ಸಚಿನ್ ಹೆಚ್.ಆರ್. ಬಿನ್ ರುದ್ರೇಗೌಡ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಘಟನೆ ವಿವರ: ಡಿ.೫ ರಂದು ಬೆಳಗ್ಗೆ ಸಚಿನ್ ಮತ್ತವರ ಪತ್ನಿ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ, ಸಂಜೆ ಮನೆಗೆ ಮರಳಿದರು.
ಈ ವೇಳೆ ಮನೆಯ ಮುಂದಿನ ಬಾಗಿಲು ತೆರೆದಿತ್ತು. ಆತಂಕದಿಂದ ಒಳಗೆ ಹೋಗಿ ನೋಡಿದಾಗ ಎರಡೂ ರೂ.ಗಳಲ್ಲಿದ್ದ ವಾಲ್ಡ್‌ರೂಬ್‌ಗಳೂ ತೆರೆದು ಕೊಂಡಿದ್ದವು. ಒಂದು ರೂಮಿನಲ್ಲಿ ೧೫ ಲಕ್ಷ ಹಣ ಇಡಲಾಗಿತ್ತು. ಮತ್ತೊಂದು ರೂಮಿನಲ್ಲಿ ೩೮ ಗ್ರಾಂ. ತೂಕದ ಕತ್ತಿನ ಚಿನ್ನದ ಸರ, ೩೨ ಗ್ರಾಂ. ತೂಕದ ಚಿನ್ನದ ಬಳೆ, ೧೫ ಗ್ರಾಂ. ತೂಕದ ಚಿನ್ನದ ಓಲೆ, ೫ ಗ್ರಾಂ. ತೂಕದ ಡೈಮಂಡ್ ಓಲೆ, ೧೫ ಗ್ರಾಂ.ತೂಕದ ಚಿನ್ನದ ಬಳೆ ಸೇರಿದಂತೆ ೧೦೫ ಗ್ರಾಂ. ತೂಕದ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
📌ಕಳವು ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಗೆ ಕೊಲ್ಲುವ ಬೆದರಿಕೆಅರಕಲಗೂಡು ತಾಲೂಕು ದಡದಹಳ್ಳಿ ಗ್ರಾಮದ ಪ್ರಶಾಂತ್ ಎಂಬುವರು ತಮ್ಮ ೪ ಎಕರೆ, ೯ ಗುಂಟೆ ಜಾಗದ ತೋಟದಲ್ಲಿ ಬೆಳೆದಿದ್ದ ತೆಂಗಿನ ಕಾಯಿ ಮತ್ತು ಅಡಕೆ, ಮೆಣಸು, ಕಾಫಿ ಮೊದಲಾದ ವಾಣಿಜ್ಯ ಬೆಳೆ ಬೆಳೆದಿದ್ದರು. ತೋಟದ ಮನೆಯಲ್ಲೇ ವಾಸವಾಗಿದ್ದರು. ಡಿ.೧೨ ರಂದು ಸಂಜೆ ರೂಪ ಎಂಬುವರು ಅತಿಕ್ರಮ ಪ್ರವೇಶ ಮಾಡಿ ತೋಟದ ಗೇಟ್ ಬೀಗ ಮುರಿದು ತಮ್ಮ ಪತಿ ಕುಮಾರ್, ತಂಗಿ ರೇಖಾ ಸೇರಿದಂತೆ ೧೦ ಮಂದಿ ಸೇರಿ ತೆಂಗಿನಕಾಯಿ, ೧೦ ಕ್ವಿಂಟಾಲ್ ಅಡಕೆ ಚೀಲ ಕಳವು ಮಾಡಿ ಆಟೋದಲ್ಲಿ ತುಂಬುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಆಯುಧ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪ್ರಶಾಂತ್ ಅರಕಲಗೂಡು ಠಾಣೆಗೆ ದೂರು ನೀಡಿದ್ದಾರೆ.
ಕೇವಲ ಐದಾರು ಗಂಟೆಗಳ ಅಂತರದಲ್ಲಿ ಕಳ್ಳತನ ನಡೆದಿದ್ದು, ಮನೆಯ ಮುಂಬಾಗಿಲನ್ನು ಆಯುಧರಿಂದ ಮೀಟಿ ಒಳ ನುಗ್ಗಿರುವ ಕಳ್ಳರು, ನಂತರ ಎರಡು ರೂಂ.ಗಳಲ್ಲಿದ್ದ ವಾಲ್ಡ್‌ರೂಬ್ ಒಡೆದು ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಒಟ್ಟಾರೆ ಮೌಲ್ಯ ೨೨ ಲಕ್ಷ ರೂ.ಗಳಾಗಿದ್ದು, ಹುಡುಕಿಕೊಡುವಂತೆ ನಗರ ಪೊಲೀಸ್ ಠಾಣೆಗೆ ಸಚಿನ್ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲೂಕು ಹಾಲುಮತ್ತಿಘಟ್ಟ ಗ್ರಾಮದ ಗಣೇಶ್ ಎಂಬುವರ ಮನೆಯ ಬಾಗಿಲ ಮುರಿದು ರೂಮಿನ ಬೀರುವಿನಲ್ಲಿಟ್ಟಿದ್ದ ೧.೨೨ ಲಕ್ಷ ನಗದು, ೧೮ ಸಾವಿರ ಬೆಲೆಯ ಚಿನ್ನದ ಓಲೆ ಕಳವು ಮಾಡಲಾಗಿದೆ. ಡಿ.೧೩ ರಂದು ಮಧ್ಯಾಹ್ನ ಗಣೇಶ್ ಹನುಮ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದರು. ಪತ್ನಿ ಮಂಜುಳಾ ಜಮೀನು ಬಳಿ ಹೋಗಿದ್ದರು. ಈ ವೇಳೆ ಕಳ್ಳತನ ನಡೆದಿದ್ದು, ಶ್ರವಣಬೆಳಗೊಳ ಠಾಣೆಗೆ ದೂರು ನೀಡಲಾಗಿದೆ.