ಬೇಲೂರು : ಕಾಡಾನೆಯೊಂದು ಅರಣ್ಯ ಇಲಾಖೆಯ ಇ ಟಿ ಎಫ್ ಸಿಬ್ಬಂದಿಯ ಜೀಪನ್ನು ಅಟ್ಟಾಡಿಸಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮುವ್ವಾಲ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದು ದಿನದ ಹಿಂದೆ ಓಲ್ಡ್ ಬೆಲ್ಟ್‌ನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು,ಗುಂಪಿನಿಂದ ಬೇರ್ಪಟ್ಟಿದ್ದರಿಂದ ರೊಚ್ಚಿಗೆದ್ದಿರುವ ಕಾಡಾನೆ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಬೆಳಿಗ್ಗೆಯಷ್ಟೇ ಗ್ರಾಮದ ಐವರ ಮೇಲೆ ಗುಂಪಿನಿಂದ ಬೇರ್ಪಟ್ಟ ಆನೆ ದಾಳಿ ಮಾಡಿತ್ತು.
ಇದರಿಂದಾಗಿ ಯಾವುದೇ ಅನಾಹುತವಾಗದಂತೆ ಹೆಣ್ಣಾನೆ ಬೆನ್ನುಬಿದ್ದಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಯ ಚಲನವಲನ ಗಮನಿಸಿ ಇ ಟಿ ಎಫ್ ಸಿಬ್ಬಂದಿಗೆ ಮಾಹಿತಿ ನೀಡುತ್ತಿದ್ದಾರೆ,ಈ ವೇಳೆ ಸಿಬ್ಬಂದಿಯ ಜೀಪ್ ಮೇಲೆ ದಾಳಿ ಮಾಡಿದ ಕಾಡಾನೆ ಸ್ವಲ್ಪ ದೂರದವರೆಗೂ ಅಟ್ಟಿಸಿಕೊಂಡು ಹೋಗಿದೆ ಕೂಡಲೇ ಜೀಪ್ ಹತ್ತಿದ ಸಿಬ್ಬಂದಿ ಜೀಪನ್ನು ರಿವರ್ಸ್ ತೆಗೆದುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.ಎದೆ ಝಲ್ ಎನಿಸುವ ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
Tags
ಬೇಲೂರು