ಹಾಸನ ಸೀಮೆ ನ್ಯೂಸ್: ವನಗೂರು
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಕೂಡುರಸ್ತೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಕಟ್ಟಡ ಕುಸಿಯುವ ಭೀತಿಯಲ್ಲಿದ್ದು ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ರೈತ ಸಂಘವಣಗೂರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು .
ರಾಜ್ಯ ಸರಕಾರದ ಗ್ರಾಮಾಂತರ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಿಂದ 2018- 2019ರಲ್ಲಿ ವಣಗೂರು ಕೂಡ ರಸ್ತೆಯ ಪಶು ಆಸ್ಪತ್ರೆ ನಿರ್ಮಾಣಕ್ಕೆ 36 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಕಾಮಗಾರಿಯನ್ನು ಪಶುಪಾಲನೆ ಇಲಾಖೆ ಎಂಪಿಸಿಸಿ ಎಂಬ ಸಂಸ್ಥೆಗೆ ಕಟ್ಟಡ ನಿರ್ಮಾಣ ಮಾಡಲು ಹಣ ಬಿಡುಗಡೆ ಮಾಡಿದೆ. ಈ ಸಂಸ್ಥೆಯ ಗುತ್ತಿಗೆದಾರ ಕಳಪೆ ಸಿಮೆಂಟ್, ಮರಳು, ಕಡಿಮೆ ಪ್ರಮಾಣದ ಕಬ್ಬಿಣ ಬಳಸಿ ನಿಯಮದ ವಿರುದ್ಧವಾಗಿ ಕಟ್ಟಡವನ್ನು ನಿರ್ಮಿಸಲಾಗಿದ್ದು ನಿರ್ಮಾಣಗೊಂಡಿರುವ ಕಟ್ಟಡದ ಗೋಡೆಗಳು ಬಿರುಕುಬಿಟ್ಟಿದ್ದು ಮಳೆ ನೀರಿಗೆ ಇಡೀ ಕಟ್ಟಡದಲ್ಲಿ ನೀರು ನಿಲ್ಲುತ್ತಿರುವುದರಿಂದ ಯಾವುದೇ ಸಮಯದಲ್ಲಿ ಬೀಳುವ ಸ್ಥಿತಿಯಲ್ಲಿದೆ.
ಇದನ್ನೂ ಓದಿ: ರೋಟರಿ ಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಕಳಪೆ ಕಾಮಗಾರಿ ಆಗಿರುವ ಕಟ್ಟಡಕ್ಕೆ ಹೊಸ ಬಣ್ಣ ಬಳೆದು ಉದ್ಘಾಟನೆಗೆ ಸಿದ್ದ ಮಾಡಲಾಗಿದ್ದು ಇದಲ್ಲದೆ 1990ರಲ್ಲಿ ನಿರ್ಮಿಸಿದ ಪಶು ಆಸ್ಪತ್ರೆಯ ಕೆಲವು ವಸ್ತುಗಳನ್ನು ಮತ್ತೆ ಹೊಸ ಕಟ್ಟಡದಲ್ಲಿ ಅಳವಡಿಸಲಾಗಿದೆ ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ ಇಂದು ಗ್ರಾಮಸ್ಥರು ಆರೋಪಿಸಿದರು ಸ್ಥಳೀಯ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಸುಮಾರು 30,000 ವಿದ್ಯುತ್ ಕಾಮಗಾರಿ ವಸ್ತುಗಳು ಹಾಗೂ ಸ್ಥಳೀಯ ಸಿಮೆಂಟ್ ಅಂಗಡಿಯಲ್ಲಿ ಹಣ ಬಾಕಿ ಮಾಡಿದ್ದು ಕೂಡಲೇ ತಪ್ಪಿಸಸ್ಥ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದರು
ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆಯಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ
-ಸಿಮೆಂಟ್ ಮಂಜು, ಶಾಸಕರು ಸಕಲೇಶಪುರ