ರೇವಣ್ಣ-ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ

 ಹಾಸನ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಹುಟ್ಟು ಹಬ್ಬವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಚರಿಸಿದರು.

ನಗರದ ನಿಲುವಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಇಬ್ಬರು ನಾಯಕರು ಹಾಗೂ ಅವರ ಕುಟುಂಬಗಳ ಹೆಸರಿನಲ್ಲಿ ಅರ್ಚನೆ, ವಿಶೇಷ ಪೂಜೆ ಸಲ್ಲಿಸಲಾಯಿತು. ಈವೇಳೆ ಮುಖಂಡರು, ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಈಡುಗಾಯಿ ಒಡೆದು ತಮ್ಮ ನೆಚ್ಚಿನ ನಾಯಕರ ಪರ ಜಯಘೋಷ ಮೊಳಗಿಸಿದರು.



ಈ ವೇಳೆ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜಿಲ್ಲೆಗೆ ನಮ್ಮ ನಾಯಕರಾದ ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಕೊಡುಗೆ ಅಪಾರ. ಅವರ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಅವರ ಕೊಡುಗ ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನ, ಆಶೀರ್ವಾದದೊಂದಿಗೆ ಇಬ್ಬರೂ ನಾಯಕರು ಇನ್ನೂ ಉನ್ನತ ಸ್ಥಾನಕ್ಕೆ ಏರಲಿ ಎಂದು ಆಶಿಸಿದರು. ರೇವಣ್ಣ ಅವರೂ ಜಿಲ್ಲೆಯನ್ನು ಇತರೆ ಜಿಲ್ಲೆಗಳಂತೆ ಮಾದರಿ ಮಾಡಲು ಕೃಷಿ, ಶಿಕ್ಷಣ, ನೀರಾವರಿ, ಕೈಗಾರಿಕೆ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಕೊಡುಗೆ ನೀಡಿದ್ದಾರೆ ಎಂದರು. 

ಈ ವೇಳೆ ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಮುಖಂಡರಾದ ಸಿ.ಆರ್.ಶಂಕರ್, ಸೈಯದ್ ಅಕ್ಬರ್, ಮಂಜೇಗೌಡ, ಸತೀಶ್, ಸಮೀರ್, ಬಿದರೆಕೆರೆ ಜಯರಾಂ ಇತರಿದ್ದರು. ಶಾಸಕ ಹೆಚ್.ಡಿ.ರೇವಣ್ಣನವರ ಅಭಿವೃದ್ಧಿ ಕಾರ್ಯಗಳೇ ಪಟ್ಟಣದ ಸರ್ವತೋಮುಖ ಪ್ರಗತಿಗೆ ಶ್ರೀ ರಕ್ಷೆಯಾಗಿದೆ.                          

ಹೊಳೆನರಸೀಪುರ ವರದಿ: ರೇವಣ್ಣ ಅವರ ಸ್ವಕ್ಷೇತ್ರ ಹೊಳೆನರಸೀಪುರಲ್ಲೂ ಹುಟ್ಟುಹಬ್ಬ ಆಚರಿಸಲಾಯಿತು. ತಾಲ್ಲೂಕು ಜೆಡಿಎಸ್ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ  ಮತ್ತು ತಾಯಿ-ಮಕ್ಕಳ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಪುರಸಭೆ ಅಧ್ಯಕ್ಷ ಕೆ.ಶ್ರೀಧರ್, ರೇವಣ್ಣ ಅವರ ಅಭಿವೃದ್ಧಿ ಕಾರ್ಯಗಳೇ ಪಟ್ಟಣದ ಸರ್ವತೋಮುಖ ಪ್ರಗತಿಗೆ ಶ್ರೀರಕ್ಷೆಯಾಗಿವೆ ಎಂದರು. ಇನ್ನಷ್ಟು ಜನ ಸೇವೆ ಮಾಡಲು ಭಗವಂತ ಅವರಿಗೆ ಆಯುರಾರೋಗ್ಯ ಐಶ್ವರ್ಯ ನೀಡಿ ಹರಸಲಿ ಎಂದರು. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಎಸ್.ಪುಟ್ಟಸೋಮಪ್ಪ ಮಾತನಾಡಿ,  ಅಭಿವೃದ್ಧಿ ಹರಿಕಾರರಾಗಿ, ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದ ರೇವಣ್ಣ ಅವರು, ಎಲ್ಲಾ ಕ್ಷೇತ್ರಗಳಲ್ಲೂ ನೂರಾರು ವರ್ಷ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.

ಪುರಸಭೆ ಉಪಾಧ್ಯಕ್ಷರಾದ ಸಾವಿತ್ರಮ್ಮ, ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಡಾ.ರಮೇಶ್, ಡಾ.ಲೋಕೇಶ್, ಡಾ.ನಾಗೇಂದ್ರ, ಡಾ.ಸತ್ಯ ಪ್ರಕಾಶ್, ಡಾ.ಧರ್ಮೇಶ್, ಪುರಸಭೆ ಸದಸ್ಯರಾದ ಕೆ.ಜಗನ್ನಾಥ್, ಮಧು, ವಾಸೀಂ, ಕಿರಣ್, ಹೆಚ್.ಟಿ.ಕುಮಾರಸ್ವಾಮಿ, ಸೊಪ್ಪಿನ ಶಿವಣ್ಣ, ಜವರೇಶ್, ಮಾಜಿ ಸದಸ್ಯರಾದ ಡಿಶ್ ಗೋವಿಂದ, ರಾಜಮುಡಿ ಮಂಜುನಾಥ್ ಇತರರಿದ್ದರು.

Post a Comment

Previous Post Next Post