ಸಕಲೇಶಪುರ: ಜನವರಿ 1 ರಂದು ಸಕಲೇಶಪುರದಲ್ಲಿ 7 ನೇ ವರ್ಷದ ಬೀಮ ಕೋರೆಗಾಂವ್ ವಿಜಯೋತ್ಸವವನ್ನು ಬೀಮ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ವಿಜಯ ಸ್ಥಂಭವನ್ನು ಪಟ್ಟಣದ ರಾಜ ಬೀದಿಯಲ್ಲಿ ಎಳೆಯುವ ಮೂಲಕ ಆಚರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ನಲ್ಲುಲ್ಲಿ ಈರಯ್ಯ ಹೇಳಿದರು.
ಮಂಗಳವಾರ ಪತ್ರಿಕಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಜನವರಿ 1 ರಂದು ಭೀಮ ಕೋರೆಗಾಂವ್ ಸಮಿತಿಯ ಕಳೆದ 7 ವರ್ಷಗಳಿಂದ ಭೀಮ ಕೋರೆಂಗಾವ್ ವಿಜಯೋತ್ಸವನ್ನು ಆಚರಿಸುತ್ತ ಬಂದಿರುತ್ತಿದ್ದು ಆ ಪ್ರಕಾರವಾಗಿ ಈ ವರ್ಷವೂ ವಿಜಯ ಸ್ಥಂಭದ ರಥವನ್ನು ಎಳೆಯುತ್ತಿದ್ದು ಈ ವರ್ಷವೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಸೇರುವ ನೀರಿಕ್ಷೆಯಿದ್ದು ಮೆರವಣಿಗೆ ಕಾರ್ಯಕ್ರಮ ಎಸ್. ಬಿ. ಐ ಸರ್ಕಲ್‌ನಿಂದ ಹೇಮವತಿ ಸೇತುವೆ ವರೆಗೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಕಲೇಶಪುರ ರಾಜ ಬಿದಿಗಳಲ್ಲಿ ಭೀಮ ಕೋರೆಗಾಂವ್ ರಥೋತ್ಸವ ನಡೆಯಲಿದೆ ಎಂದರು
ನಂತರ ಸಮಿತಿಯ ಕಾರ್ಯದರ್ಶಿ ಶಾಂತರಾಜು ಮಾತನಾಡಿ ವಿವಿಧ ಕಲಾತಂಡಗಳೊಂದಿಗೆ ಈ ಮೆರವಣಿಗೆ ಭವ್ಯವಾಗಿ ಜರಗಲಿದ್ದು ಪಟ್ಟಣದ ಎಸ್.ಬಿ.ಐ.ಸರ್ಕಲ್‌ನಿಂದ ಹೇಮಾವತಿ ಸೇತುವೆ ತನಕ ರಥದ ಮೆರವಣಿಗೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸುಮಾರು ಹತ್ತು ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಸಮಿತಿಯ ಸಂಯೋಜಕ ಲಕ್ಷ್ಮಣ ಕೀರ್ತಿ ಮಾತನಾಡಿ ಮೆರವಣಿಗೆ ಬರುವ ಸಂದರ್ಭದಲ್ಲಿ ಹಳೆ ಬಸ್ ಸ್ಟಾಂಡ್ ನಲ್ಲಿರುವ ಅಭೇಂಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮವಿರುತ್ತದೆ. ಸಮುದಾಯದ ಹಾಗೂ ಇತರ ವರ್ಗದ ಜನರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಕಲೇಶಪುರದ ಪ್ರಗತಿಪರರು, ದಲಿತ ಸಂಘಟನೆಗಳು, ಸ್ವಹಾಯ ಸಂಘಸಂಸ್ಥೆಗಳು ಆದಿವಾಸಿ ಅಲ್ಪಸಂಖ್ಯಾತರು, ಆಗಮಿಸಿ ಯಶಸ್ವಿ ಗೊಳಿಸಲು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಯೊಜಕ ಲಕ್ಮಣ್ ಕೀರ್ತಿ, ಕಾರ್ಯದರ್ಶಿ ಶಾಂತರಾಜ್, ಗಂಗಾಧರ ದೊಡ್ಡನಹಳ್ಳಿ ಈರಯ್ಯ, ಕಲ್ಗಣೆ ಧರ್ಮ ಮೊದಲಾದವರು ಉಪಸ್ಥಿತರಿದ್ದರು.