ಹಾಸನ: ಕಳೆದ ಹಲವಾರು ದಿನಗಳಿಂದ ಯುಜಿಡಿ ಗಲೀಜು ನೀರು ಕಟ್ಟಿನಕೆರೆ ಮಾರುಕಟ್ಟೆಯ ರಸ್ತೆ ಮೇಲೆ ಹರಿಯುತ್ತಿದ್ದರೂ ಇದುವರೆಗೂ ಸರಿಪಡಿಸದ ನಗರಸಭೆ ವಿರುದ್ಧ ಈ ಭಾಗದಲ್ಲಿ ಓಡಾಡುವ ಸಾರ್ವಜನಿಕರು ಛೀ ತೂ ವಾಸನೆ ಎಂದು ಮೂಗು ಮುಚ್ಚಿಕೊಂಡು ಓಡಾಡುತ್ತಾ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಸಾವಿರಾರು ರೂಗಳ ಬಾಡಿಗೆ ಕಟ್ಟುವ ವ್ಯಾಪಾರಸ್ತರಿಗೆ ವ್ಯಾಪಾರವಿಲ್ಲದೇ ಈ ಧುರ್ವಾಸನೆಯಲ್ಲಿ ಇರುವ ಪರಿಸ್ಥಿತಿ ಬಂದಿದೆ.
ಕಟ್ಟಿನಕೆರೆ ಮಾರ್ಕೇಟ್ ವರ್ತಕರಾದ ಬಿ.ಎಸ್. ವಿಶ್ವನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಕಟ್ಟಿನಕೆರೆ ಮಾರುಕಟ್ಟೆ ಬಳಿ ಸಿಟಿ ಬಸ್ ನಿಲ್ದಾಣ ಆದ ಮೇಲೆ ಇಲ್ಲಿನ ವರ್ತಕರಿಗೆ ಬಹಳ ತೊಂದರೆ ಆಗಿದ್ದು, ಸಿಟಿ ಬಸ್ ನಿಲ್ದಾಣದ ಯುಜಿಡಿಯನ್ನು ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಿದ್ದಾರೆ. ಎರಡು ಮೂರು ತಿಂಗಳಿಗೊಮ್ಮೆ ಇಲ್ಲಿ ಯುಜಿಡಿ ಕಟ್ಟಿಕೊಂಡು ಕಟ್ಟಿನಕೆರೆ ಮಾರುಕಟ್ಟೆ ರಸ್ತೆ ಮೇಲೆ ಹರಿಯುತ್ತಿದ್ದು, ವ್ಯಾಪಾರ ಮಾಡುವವರು ಇಲ್ಲಿಗೆ ಬರದೇ ಪ್ರತಿನಿತ್ಯ ವ್ಯಾಪಾರ ಮಾಡುವ ಅಂಗಡಿ ಮಾಲೀಕರು ನÀ್ಟ ಅನುಭವಿಸುತ್ತಿದ್ದಾರೆ. ಇಲ್ಲಿಗೆ ವ್ಯಾಪಾರ ಮಾಡುವ ಗ್ರಾಹಕರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ. ಇನ್ನು ವ್ಯಾಪಾರ ಮಾಡುವವರ ಸಂಖ್ಯೆಯೇ ಗಣನೀಯವಾಗಿ ಉಳಿಮುಖವಾಗಿದೆ. ಇತ್ತ ಕಡೆ ಜನರು ಆಗಮಿಸಿದೇ ನÀ್ಟ ಅನುಭವಿಸುತ್ತಿದ್ದೇವೆ. ಇನ್ನು ಕೆಲವರು ಅಂಗಡಿಯನ್ನೆ ಸರಿಯಾಗಿ ತೆಗೆಯುತ್ತಿಲ್ಲ. ಹೊಸ ಬಸ್ ನಿಲ್ದಾಣದ ಬಳಿ ಮೇಲ್ಸೇತುವೆ ಮಾಡಿ ಮುಖ್ಯ ಯುಜಿಡಿ ಬ್ಲಾಕ್ ಮಾಡಿದ ಪರಿಣಾಮ ಕಟ್ಟಿನ ಮಾರ್ಕೇಟ್ ಒಳಗಿರುವ ಯುಜಿಡಿಗೆ ಹರಿಯುತ್ತಿದೆ ಎಂದರು. ಈ ಯುಜಿಡಿ ತುಂಬಿ ರಸ್ತೆ ಮೇಲೆ ಗಬ್ಬು ವಾಸನೆ ಜೊತೆಗೆ ರೋಗ ರುಜಿನಗಳು ಬರುತ್ತಿದೆ. ಬೆಳಗಿನ ಸಮಯ ಸೊಳ್ಳೆ ಬತ್ತಿ ಇಟ್ಟುಕೊಂಡು ವ್ಯಾಪಾರ ಮಾಡಬೇಕಾಗಿದೆ.
ಇಲ್ಲಿನ ಅಂಗಡಿ ಮಾಲೀಕರು ವ್ಯಾಪಾರ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಇನ್ನು ನಗರಸಭೆ ಅಧ್ಯಕ್ಷರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದ್ದು, ಆದರೇ ಇದುವರೆಗೂ ಯಾವ ಪರಿಹಾರ ಸಿಕ್ಕಿರುವುದಿಲ್ಲ. ಇದೆ ವೇಳೆ ಹÀð, ಮುರುಳಿ, ವಸಂತ್, ಬಂಗಾರಿ, ವೆಂಕಟೇಶ್, ಬಾಬು, ರಾಜೀವ್ ಇತರರು ಉಪಸ್ಥಿತರಿದ್ದರು.
Tags
ಹಾಸನ