Food cart vehicle subsidy- 4 ಲಕ್ಷ ಸಬ್ಸಿಡಿಯಲ್ಲಿ ಫುಡ್ ಕಾರ್ಟ್ ವಾಹನ ಖರೀದಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

 ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಡಾ|| ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ(Dr. BR Ambedkar Development Corporation) 4 ಲಕ್ಷ ಸಬ್ಸಿಡಿಯಲ್ಲಿ ಫುಡ್ ಕಾರ್ಟ್ ವಾಹನ(Food cart vehicle subsidy) ಖರೀದಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆಯಡಿ ಫುಡ್ ಕಾರ್ಟ್ ಉದ್ದೇಶಕ್ಕಾಗಿ ವಾಹನವನ್ನು ಖರೀದಿ ಮಾಡಲು ಬ್ಯಾಂಕ್ ಸಹಯೋಗದಲ್ಲಿ ಸಾಲವನ್ನು ಪಡೆದು ಶೇ 75% ಸಹಾಯಧನ ಮತ್ತು ಗರಿಷ್ಟ 4 ಲಕ್ಷದ ವರೆಗೆ ಸಹಾಯಧನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ.

ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅರ್ಹರು ಯಾರು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

Food cart vehicle subsidy online application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ಪೋರ್ಟಲ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

Step-1: ಮೊದಲು Food cart vehicle subsidy application ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಅಧಿಕೃತ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿದ ಬಳಿಕ ಈ ವೆಬ್ಸೈಟ್ ಗೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವವರು ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

tep-3: ಲಾಗಿನ್ ಅದ ಬಳಿಕ ಇಲ್ಲಿ “ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ” ಎಂದು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅಥವಾ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಬೆಂಗಳೂರು ಒನ್/ಗ್ರಾಮ ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಡಿಸೆಂಬರ್ 2024

Documents for Food cart vehicle subsidy- ಅರ್ಜಿ ಸಲ್ಲಿಸಲು ದಾಖಲೆಗಳು:

(1) ಅರ್ಜಿದಾರರ ಆಧಾರ್ ಕಾರ್ಡ

(2) ಬ್ಯಾಂಕ್ ಪಾಸ್ ಬುಕ್ ಪ್ರತಿ

(3) ಜಾತಿ ಮತ್ತು ಆಧಾರ ಪ್ರಮಾಣ ಪತ್ರ

(4) ಪೋಟೋ

(5) ರೇಶನ್ ಕಾರ್ಡ

Who can apply for this scheme- ಅರ್ಜಿ ಸಲ್ಲಿಸಲು ಅರ್ಹರು:

(1) ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಜಿದಾರರಿಗೆ ವರ್ಷ ತುಂಬಿರಬೇಕು.

(2) ಅರ್ಜಿದಾರರು ನಿಗಮದಿಂದ ನಿಗದಿಪಡಿಸಿರುವ ವರ್ಗಕ್ಕೆ ಸೇರಿದವರಾಗಿರಬೇಕು(ಪರಿಶಿಷ್ಟ ಜಾತಿ)

(3) ಈ ಹಿಂದೆ ನಿಗಮದಿಂದ ಈ ಯೋಜನೆಯಡಿ ಪ್ರಯೋಜನ ಪಡೆದುಕೊಂಡವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ: 9482300400 ಹಾಗೂ ನಿಗಮದ ಅಧಿಕೃತ ವೆಬ್ಸೈಟ್ ಲಿಂಕ್- Click here

Post a Comment

Previous Post Next Post