ಬೇಲೂರು: ಚಿಕ್ಕಮಗಳೂರಿನ ದತ್ತ ಪೀಠದಲ್ಲಿ 3 ದಿನಗಳ ಕಾಲ ನಡೆಯುವ ದತ್ತ ಜಯಂತಿ ಹಾಗೂ ಅನಸೂಯಾ ಜಯಂತಿಯಲ್ಲಿ ಪಾಲ್ಗೊಳ್ಳಲು ಬೇಲೂರಿನಿಂದ ಮಾತೆಯರ ತಂಡ ಗುರುವಾರ ಬೆಳಗ್ಗೆ ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಹನದಲ್ಲಿ ತೆರಳಿತು.
ಬಿಜೆಪಿ ಮಹಿಳಾ ಘಟಕದ ತಾಲೂಕು ಮಾಜಿ ಅಧ್ಯಕ್ಷೆ ಶೋಭಾ ಗಣೇಶ್ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿಗೆ ಈಗಾಗಲೇ ಚಾಲನೆ ದೊರೆತಿದ್ದು, ಚಿಕ್ಕಮಗಳೂರಿನಲ್ಲಿ ಗುರುವಾರ ನಡೆಯಲಿರುವ ಅನಸೂಯಾ ಜಯಂತಿಯಲ್ಲಿ ಪಾಲ್ಗೊಂಡು ನಂತರ ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.
ಭವಾನಿ, ಭಾರತಿ, ಪವಿತ್ರಾ, ತೀರ್ಥ, ಯಶೋದಾ, ವೀಣಾ, ಕಾರ್ಕಳದ ಆರ್‌ಎಸ್‌ಎಸ್ ಮುಖಂಡ ಸುನೀಲ್, ಬಜರಂಗ ದಳದ ಗುಂಟಪ್ಪ, ಬಿಜೆಪಿ ನಗರಾಧ್ಯಕ್ಷ ವಿನಯ್ ಇತರರಿದ್ದರು.
Tags
ಬೇಲೂರು