ಹೇಮಾವತಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ

 ಹಾಸನದ ಹೇಮಾವತಿ ಆಸ್ಪತ್ರೆ ಜಿಲ್ಲೆಯ ಪ್ರಮುಖ ಆರೋಗ್ಯಸೇವಾ ಸಂಸ್ಥೆಯಾಗಿದ್ದು, ಬಹ್ರೈನ್‌ನ ಇಬ್ರಾಹಿಂ(೬೮) ಅವರಿಗೆ ಜಟಿಲ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿ, ಜಾಗತಿಕ ಮಟ್ಟದ ವೈದ್ಯಕೀಯ ಸೇವೆ ನೀಡುವಲ್ಲಿ ಸಾಬೀತುಪಡಿಸಿದೆ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಡಾ. ನಿಖಿಲ್ ತಿಳಿಸಿದರು.

ಇಬ್ರಾಹಿಂ ಅವರು ೫ ವರ್ಷಗಳ ಹಿಂದೆ ಬಿದ್ದು, ಬಲತೊಡೆಯ ಫೀಮರ್ ಮೂಳೆಯು ಕೆಳತುದಿಯನ್ನು ಮುರಿದುಕೊಂಡಿದ್ದರು. ಹಲವಾರು ಕಡೆ ಚಿಕಿತ್ಸೆ ಪಡೆದುಕೊಂಡರು ಅವರಿಗೆ ನೆಡೆಯಲು ಸಾಧ್ಯವಾಗಲಿಲ್ಲ. ಬಹ್ರೈನ್‌ನ ಅರ್ಥೋಪೆಡಿಕ್ ತಜ್ಞರ ಸಲಹೆ ಮೆರೆಗೆ ಹಾಸನದ ಹೇಮಾವತಿ ಆಸ್ಪತ್ರೆಗೆ ದಾಖಲಿಸಿ ಡಾ.ನಿಖಿಲ್ ಹಾಗೂ ಅವರ ಅನುಭವಿ ತಂಡದ ಮಾರ್ಗದರ್ಶನದಲ್ಲಿ ಡಿಸ್ಟಲ್ ಫೀಮರ್ ಪ್ರೊಸ್ಥೆಸಿಸ್ ಬಳಸಿ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ ಒಳಪಟ್ಟು, ನಂತರ ಇಬ್ರಾಹಿಂ ತಮ್ಮ ಮೊಣಕಾಲಿನ ಪೂರ್ಣ ಚಲನೆ ಮರು ಪಡೆದು, ಕೇವಲ ೧೨ ಗಂಟೆಗಳಲ್ಲಿ ಅವರು ಯಾರ ಸಹಾಯ ಪಡೆಯದೆ ಅವರ ಸಂಪೂರ್ಣ ದೇಹದ ತೂಕವನ್ನು ಭರಿಸಿಕೊಂಡು ನಡೆಯಲು ಸಾಧ್ಯವಾಗಿದೆ ಎಂದು ಡಾ.ನಿಖಿಲ್ ತಿಳಿಸಿದರು.

ಇಬ್ರಾಹಿಂ ಮಾತನಾಡಿ, ದೂರದ ದೇಶದಿಂದ ಬಂದು ಇಲ್ಲಿ ಶಸ್ತ್ರಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖವಾಗಿದ್ದೇನೆ ನನ್ನ ಆರೋಗ್ಯದ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯಮಾಡಿದ ಹೇಮಾವತಿ ಆಸ್ಪತ್ರೆಯ ವೈದ್ಯರಿಗೆ ಅಭಿನಂದನೆಗಳನ್ನು ತಿಳಿಸಿದರು. ನನ್ನ ದೇಶಕ್ಕೆ ಹೋಗಿ ಇಲ್ಲಿಯ ಚಿಕಿತ್ಸೆ ಬಗ್ಗೆ ತಿಳಿಸಿ ಅವಶ್ಯಕತೆ ಇರುವವರನ್ನು ಇಲ್ಲಿಗೆ ಹೊಗಲು ತಿಳಿಸುತ್ತೇನೆ, ನನಂತೆ ಹಲವಾರು ಮಂದಿಗೆ ಸಹಾಯವಾಗಿ ಅವರು ಸ್ವಾತಂತ್ರ್ಯವಾಗಿ ತಿರುಗಾಡಲು ಅನುಕೂಲವಾಗಲಿ ಎಂದರು.

ಹೇಮಾವತಿ ಆಸ್ಪತ್ರೆಯಲ್ಲಿ ಈ ತರಹದ ಅನೇಕ ಸೇವೆಗಳು ಲಭ್ಯವಿದ್ದು, ಇದರ ಉಪಯೋಗವನ್ನು ಅಗತ್ಯವಿರುವವರು ಪಡೆದುಕೊಳ್ಳಿ ಎಂದು ಡಾ.ನಿಖಿಲ್ ತಿಳಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಡಾ. ರಾಮಕೃಷ್ಣ ಭಟ್, ಡಾ. ಪ್ರಕಾಶ್ ಹಾಗೂ ಡಾ. ಸಹನ ಉಪಸ್ಥಿತರಿದರು.


Post a Comment

Previous Post Next Post