Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ!

 ರಾಜ್ಯ ಸರಕಾರದಿಂದ ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ ನೀಡುವ ರೂ 2,000 ಹಣವನ್ನು(Gruhalakshmi 15th Installment) ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯು ಜಾರಿಯಾದ ಬಳಿಕ ಇಲ್ಲಿಯವರೆಗೆ ಪ್ರತಿ ತಿಂಗಳಿಗೆ ರೂ 2,000 ದಂತೆ ಒಟ್ಟೂ 14 ಕಂತಿನ ಹಣವನ್ನು ಜಮಾ ಮಾಡಲಾಗಿದ್ದು ಇದರಂತೆ 15ನೇ ಕಂತಿನ ಹಣವನ್ನು(Gruhalakshmi hana) ಮೊದಲ ಹಂತದಲ್ಲಿ ಈ ಕೆಳಗೆ ತಿಳಿಸಿರುವ ಜಿಲ್ಲೆಯ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮಾ ಅಗಿರುವುದನ್ನು ಮೊಬೈಲ್ ನಲ್ಲೇ ಸ್ಟೇಟಸ್(Gruhalakshmi status) ಚೆಕ್ ಹೇಗೆ ಮಾಡುವುದು? ಹಾಗೂ ಯಾವೆಲ್ಲ ಕ್ರಮಗಳನ್ನು ಅನುಸರಿಸದೇ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಅಗುವುದಿಲ್ಲ ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ:

ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ರೂ 2,000 ಅರ್ಥಿಕ ನೆರವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಆಧಾರ್ ಕಾರ್ಡ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಇದರಂತೆ ನವೆಂಬರ್ ತಿಂಗಳ ಹಣವನ್ನು ಜಮಾ ಮಾಡಲು ಮೊದಲ ಹಂತದಲ್ಲಿ ಈ ಕೆಳಗಿನ ಪಟ್ಟಿಯಲ್ಲಿರುವ ಜಿಲ್ಲೆಯ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಇನ್ನು 4-5 ದಿನದ ಒಳಗಾಗಿ ಈ ಜಿಲ್ಲೆಯ ಮಹಿಳೆಯರಿಗೆ ಈ ಯೋಜನೆಯ 15 ನೇ ಕಂತಿನ ರೂ 2,000 ಹಣ ಜಮಾ ಅಗಲಿದೆ.

1) ಕೊಡಗು

2) ಕೊಪ್ಪಳ

3) ಗದಗ

4) ಚಿಕ್ಕಬಳ್ಳಾಪುರ

5) ಬಾಗಲಕೋಟೆ

6) ಉಡುಪಿ

7) ಉತ್ತರ ಕನ್ನಡ

8) ಕಲಬುರ್ಗಿ

9) ಬೀದರ್

10) ಬೆಂಗಳೂರು ನಗರ

11) ಬೆಂಗಳೂರು ಗ್ರಾಮಾಂತರ

12) ಯಾದಗಿರಿ

13) ಮಂಡ್ಯ

14) ರಾಯಚೂರು

Gruhalakshmi Status-ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳುವ ವಿಧಾನ:

ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಹಣ ಪಡೆಯುತ್ತಿರುವ ಫಲಾನುಭವಿಗಳು ಪ್ರತಿ ತಿಂಗಳು ತಮಗೆ ಹಣ ಜಮಾ ಅಗಿರುವ ವಿವರವನ್ನು ಬ್ಯಾಂಕ್ ಶಾಖೆ ಹೋಗಿಯೇ ಚೆಕ್ ಮಾಡಿಕೊಳ್ಳಬೇಕು ಎಂದು ಏನು ಇರುವುದಿಲ್ಲ ಅರ್ಜಿದಾರರು ತಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಈ ಯೋಜನೆಯಡಿ ಜಮಾ ಅಗಿರುವ ಅರ್ಥಿಕ ನೆರವನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ Gruhalakshmi Status Check ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಅಧಿಕೃತ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಫಲಾನುಭವಿಯ ಅಧಾರ್ ಕಾರ್ಡ ನಂಬರ್ ಹಾಕಿ OTP ಪಡೆದು ಈ ಅಪ್ಲಿಕೇಶನ್ ಲಾಗಿನ್ ಅಗಲು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ ಇಲ್ಲಿ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ಗೃಹಲಕ್ಷ್ಮಿ” ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಯಾವ ಯಾವ ತಿಂಗಳು ಹಣ ಜಮಾ ಅಗಿದೆ? ಹಣ ಜಮಾ ಅದ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆ, ಜಮಾ ದಿನಾಂಕದ ವಿವರ ತೋರಿಸುತ್ತದೆ.


Post a Comment

Previous Post Next Post