LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಭಾರತೀಯ ಜೀವ ವಿಮಾ ನಿಗಮದಿಂದ(LIC SCHOLARSHIP SCHEME) ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.


ಹಣದ ಕೊರತೆಯಿಂದ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯುವುದರಿಂದ ವಂಚಿತರಾಗುವುದನ್ನು ತಪ್ಪಿಸಲು ಸರಕಾರ ಮತ್ತು ಇತರೆ ನಿಗಮ/ಕಂಪನಿಗಳಿಂದ ಪ್ರತಿ ವರ್ಷ ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಜಿ ಆಹ್ವಾನಿಸಲಾಗುತ್ತದೆ ಅದರಂತೆ LIC ಯಿಂದ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ಜೀವ ವಿಮಾ ನಿಗಮವು ಭಾರತದ ದೇಶದ ಅತ್ಯಂತ ದೊಡ್ಡ ಜೀವವಿಮೆ ನೀಡುವ ಕಂಪನಿಯಲ್ಲಿ ಒಂದಾಗಿದ್ದು, ಸಂಪೂರ್ಣವಾಗಿ ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ನಿಗಮದಿಂದ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ ಯೋಜನೆ 2024ರ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಯೋಜನೆಯನ್ನು ಅನುಷ್ಥಾನ ಮಾಡುತ್ತಿದೆ.

ಈ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಅಗತ್ಯ ದಾಖಲಾತಿ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಇತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶೈಕ್ಷಣಿಕ ವರ್ಷ 2021-22, 2023-23 ಅಥವಾ 2023-24 ರಲ್ಲಿ Xth / XIIth (ಎಸ್‌ಎಸ್‌ಎಲ್‌ಸಿ ಅಥವಾ ದ್ವಿತೀಯ ಪಿಯುಸಿ) ಡಿಪ್ಲೋಮಾ ಅಥವಾ ಅದಕ್ಕೆ ಸಮಾನಾಂತರ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 60% ಅಂಕಗಳೊಂದಿಗೆ ಇಲ್ಲವೇ ಸಮಾನ CGPA ಗ್ರೇಡ್‌ನೊಂದಿಗೆ ಉತ್ತೀರ್ಣರಾದ ಮತ್ತು 2024-25ರ ಶೈಕ್ಷಣಿಕ ಮೊದಲ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ವೈದ್ಯಕೀಯ, ಇಂಜಿನಿಯರಿಂಗ್, ಯಾವುದೇ ವಿಭಾಗದಲ್ಲಿ ಪದವಿ, ಯಾವುದೇ ಕ್ಷೇತ್ರದಲ್ಲಿ ಡಿಪ್ಲೊಮಾ ಕೋರ್ಸ್ ಮತ್ತು ಇಂಟಿಗ್ರೇಟೆಡ್ ಕೋರ್ಸ್‌ಗಳನ್ನು ಮಾಡುವವರಿಗೆ.

ಸರ್ಕಾರಿ ಮಾನ್ಯತೆ ಪಡೆದ ಕಾಲೇಜುಗಳು ಸಂಸ್ಥೆಗಳು ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ (ITI) ಕೋರ್ಸ್‌ಗಳ ಮೂಲಕ ವೃತ್ತಿಪರ ಕೋರ್ಸ್ ಮಾಡುವವರಿಗೆ ಇದು ಅನ್ವಯವಾಗಲಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಧಿಕೃತ ಭಾರತೀಯ ಜೀವ ವಿಮಾ ನಿಗಮ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ಮೂಲಕವೇ ಮನೆಯಲ್ಲಿ ಇದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಪ್ರಥಮದಲ್ಲಿ APPLY HERE FOR LIC SCHOLARSHIP ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಭಾರತೀಯ ಜೀವ ವಿಮಾ ನಿಗಮದ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಬಳಿಕ ಇಲ್ಲಿ “APPLY HERE FOR SCHOLARSHIP SCHEME 2024” ಈ ರೀತಿ ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಆನ್ಲೈನ್ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ರಾಜ್ಯದ ಹೆಸರನ್ನು ಆಯ್ಕೆ ಮಾಡಿಕೊಂಡು ಅಗತ್ಯವಾಗಿ ಭರ್ತಿ ಮಾಡಬೇಕಾಗಿರುವ ವಿವರವನ್ನು ತುಂಬಿ ಕೊನೆಯಲ್ಲಿ ಕಾಣುವ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಡಿಸೆಂಬರ್ 2024

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ಅರ್ಜಿದಾರರ ಅಧಾರ್ ಕಾರ್ಡ

2) ಬ್ಯಾಂಕ್ ಪಾಸ್ ಬುಕ್

3) ಶಾಲಾ ದಾಖಲಾತಿಗೆ ಸಂಬಂದಪಟ್ಟ ದಾಖಲೆಗಳು

4) ಫೋಟೋ

5) ಮೊಬೈಲ್ ನಂಬರ್

ಅಧಿಕೃತ ಮಾರ್ಗಸೂಚಿ/ಪ್ರಕಟಣೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now

Post a Comment

Previous Post Next Post