ಹಾಸನ: ಕೋವಿಡ್ -19 ಲಾಕ್ ಡೌನ್ ಪರಿಣಾಮವಾಗಿ ಹಾಸನ ವಿಭಾಗದ ನೌಕರರು ಮತ್ತು ಸಿಬ್ಬಂದಿ ವರ್ಗ ಅಪಾರವಾದ ತೊಂದರೆಗಳನ್ನು ಅನುಭವಿಸಿದ್ದಾರೆ . ಈಗ ಸರ್ಕಾರ ನಿಗಮದ ವಾಹನಗಳು ಸಂಚರಿಸಲು ಪಲಮಿತವಾಗಿ ಲಾಕ್ ಡೌನ್ ತೆರವುಗೊಳಿಸಲು ಅವಕಾಶ ನೀಡಿದೆ . ಕರೋನಾ ಪಾಸಿಟಿವ ಕೇಸ್‌ಗಳು ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ತೀರ್ಮಾನ ತೆಗೆದುಕೊಂಡಿರುವುದರಿಂದ ಆತಂಕಗಳ ನಡುವ ವಿಭಾಗದ ಸಾರಿಗೆ ಕಾರ್ಮಿಕರು ಕೆಲಸ ಮಾಡಬೇಕಾದ ಒತ್ತಡಗಳು ನಿರ್ಮಾಣವಾಗಿವೆ . ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಪ್ರಶ್ನೆಗಳು ಗಂಭೀರವಾಗಿ ಎದುರಾಗಿದೆ . ಈ ಹಿನ್ನೆಲೆಯಲ್ಲಿ ಕೆಳಕಂಡ ಬೇಡಿಕೆಗಳ ಮನವಿಯನ್ನು ಕೆಎಸ್‌ಆರ್‌ಟಿಸಿ ನೌಕರರ ಸಂಘ ( ಸಿಐಟಿಯು ) ನೀಡುತ್ತಿದೆ .
1.ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೊವಿಡ್ -19 ರ ವಿರುದ್ಧ ಸೆಣಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ರೂ .50 ಲಕ್ಷಗಳ ವಿಮೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ , ವಿಭಾಗದ ಎಲ್ಲಾ ನೌಕರರಿಗೆ ಕಡ್ಡಾಯವಾಗಿ ರೂ 50 ಲಕ್ಷ ವಿಮೆ ಖಾತ್ರಿಯನ್ನು ಒದಗಿಸಬೇಕು .
2. ಎಲ್ಲಾ ಸಾರಿಗೆ ಸಿಬ್ಬಂದಿಗೂ , ವಿಶೇಷವಾಗಿ ಚಾಲಕರು , ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗೆ ಅತ್ಯುತ್ತಮವಾದ ಗುಣಮಟ್ಟದ ಆರೋಗ್ಯ ಸುರಕ್ಷತಾ ಉಪಕರಣಗಳು , ಸ್ಯಾನಿಟೈಸರ್ , ಮುಖಗವಸು ( ಫೇಸ್‌ಶೀಲ್ ಕೈಗವಸು ಇತ್ಯಾದಿಗಳನ್ನು ಕಡ್ಡಾಯವಾಗಿ ಒದಗಿಸಬೇಕು . ಪ್ರತಿನಿತ್ಯ ಸಾರಿಗೆ ಬಸ್‌ಗಳಿಗೆ ಔಷಧಿ ಸಿಂಪಡಣೆ ಮಾಡುವುದು ಮತ್ತು ಸಿಬ್ಬಂದಿಗಳ ಆರೋಗ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು . ಕರ್ತವ್ಯಕ್ಕೆ ಹಾಜರಾಗುತ್ತಿರುವ ಕಾರ್ಮಿಕರಿಗೆ ಸರಿಯಾದ ವೈಯಕ್ತಿಕ ರಕ್ಷಣಾ ಸಲಕರಣೆಗಳು ( ಪಿಪಿಇ ) ನೀಡಬೇಕು .
3 , ಹಾಸನ ಜಿಲ್ಲೆಯಲ್ಲಿ ಕೋವಿಡ್ - 19 ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರ ಜೀವ ಮತ್ತು ಜೀವನಗಳ ಸಂಪೂರ್ಣ ರಕ್ಷಣೆ ಹೊಣೆಯನ್ನು ವಿಭಾಗವೇ ಹೊರಬೇಕು . ಕರ್ತವ್ಯಕ್ಕೆ ಹಾಜರಾಗುವ ಕಾರ್ಮಿಕರಿಗೆ ವೈದ್ಯಕೀಯ ಪರೀಕ್ಷೆ ಮತ್ತು ದೃಢೀಕರಣ ಮಾಡುವ ವ್ಯವಸ್ಥೆಯನ್ನು ಆಯಾ ಘಟಕದ ವ್ಯಾಪ್ತಿಯಲ್ಲೇ ಕೈಗೊಳ್ಳಬೇಕು .
4. ವಿಭಾಗದ ಪ್ರತೀ ಬಸ್ ನಿಲ್ದಾಣದಲ್ಲಿಯೂ ಪ್ರತಿಯೊಬ್ಬ ಪ್ರಯಾಣಿಕರನ್ನೂ ಸಾನಿಟೈಸ್ ಮಾಡುವ ಸಲುವಾಗಿ ನಿಲ್ದಾಣದ ದ್ವಾರದಲ್ಲಿ ಸ್ಯಾನಿಟೈಸರ್ ಟೆನಲ್ ಅನ್ನು ಅಗತ್ಯವಾಗಿ ತುರ್ತಾಗಿ ಮಾಡಲೇಬೇಕು . ಪ್ರತೀ ಬಸ್ ನಿಲ್ದಾಣದಲ್ಲಿಯೂ ಥರ್ಮಲ್ ಸ್ಕ್ಯಾನಿಂಗ್‌ಗೆ ತರಬೇತಿ ಹೊಂದಿದ ವೈದ್ಯಕೀಯ ಸಿಬ್ಬಂದಿಯನ್ನೇ ನಿಯೋಜಿಸಬೇಕು .
5. ದಿನಾಂಕ : 04-05-2020ರಿಂದ ಬಸ್‌ಗಳು ಮಾರ್ಗದ ಮೇಲೆ ಕಾರ್ಯಾಚರಣೆ ಮಾಡಲು ಸಾಧ್ಯವಾಗದೆ ಕರ್ತವ್ಯವನ್ನು ನೀಡದ ಎಲ್ಲಾ ಚಾಲಕ , ನಿರ್ವಾಹಕ , ಚಾಲಕ ಕಂ ನಿರ್ವಾಹಕ , ತಾಂತ್ರಿಕ ಮತ್ತು ಆಡಳಿತ ಸಿಬ್ಬಂಧಿಯವರಿಗೆ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಆಗುವವರೆಗೆ ಹಾಜರಾತಿ ನೀಡಬೇಕು . ಈ ಅವಧಿಯಲ್ಲಿ ಯಾವುದೇ ಗೈರು ಹಾಜರಿ ನಮೂದಿಸಬಾರದು ಮತ್ತು ವಯಕ್ತಿಕ ಖಾತೆಯಲ್ಲಿನ ರಜೆಯನ್ನು ಕಡಿತಗೊಳಿಸಬಾರದು .
6 , ಶಿಸ್ತು ಪ್ರಕರಣದ ಮೇಲೆ ಅಮಾನತ್ತುಗೊಂಡು 90 ದಿನ ಪೂರ್ಣಗೊಂಡಿರುವ ಎಲ್ಲಾ ನೌಕರರ ಅಮಾನತು ಕೂಡಲೇ ತೆರವುಗೊಳಿಸಬೇಕು .
7 , ನಿವೃತ್ತಿಗೊಂಡಿರುವ ನೌಕರರ ಉಪಧನ , ಭವಿಷ್ಯನಿಧಿ ಇತ್ಯಾದಿ ಹಣಕಾಸು ಸೌಲಭ್ಯಗಳನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳುವುದು .
Tags
ಹಾಸನ