ಅರಸೀಕೆರೆ:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅನುಯಾಯಿ ಮಾಜಿ ಸಚಿವೆ ಪದ್ಮಭೂಷಣ ಯಶೋಧರಮ್ಮ ದಾಸಪ್ಪ ಅವರ 115ನೇ ಜನ್ಮ ದಿನಾಚರಣೆಯಲ್ಲಿ ನಗರದ ಹೊರವಲಯದ ಕಸ್ತೂರಿಬಾ ಶಿಬಿರದ ಆವರಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶಿವಣ್ಣ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಶಿಬಿರದ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವಿರುವ ಸಮಾಧಿಗೆ ಹಾಗೂ ಮತ್ತೊಂದೆಡೆ ಯಶೋಧರಮ್ಮ ದಾಸಪ್ಪ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಗೌರವ ಸಮರ್ಪಿಸಲಾಯಿತು
ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶಿವಣ್ಣ ಮಾತನಾಡಿ ಇತಿಹಾಸ ಮರೆತವರಿಂದ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ನಾಡು ನುಡಿ ದೇಶಕ್ಕಾಗಿ ದುಡಿದ ಹಾಗೂ ಮಾಡಿದ ಮಹನೀಯರನ್ನು ನೆನೆಯುವುದು ಹಾಗೂ ಅವರು ತೋರಿದ ದಾರಿಯಲ್ಲಿ ನಾವು ಸಾಗುವುದರಿಂದ ಮಾತ್ರ ನಿಜವಾದ ಗೌರವವನ್ನು ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಯಶೋಧರಮ್ಮ ದಾಸಪ್ಪ ಅವರು ಮಹಾತ್ಮಾ ಗಾಂಧೀಜಿಯವರ ಅನುಯಾಯಿ ಅಷ್ಟೇ ಅಲ್ಲದೆ ಪರಮ ಆಪ್ತರಾಗಿದ್ದ ಅವರು ಕರ್ನಾಟಕದ ಕಸ್ತೂರಿ ಬಾ.ಪಾನ ನಿರೋಧ ಕ್ಕಾಗಿ ಸಚಿವ ಸ್ಥಾನ ತ್ಯಜಿಸಿದ ಆದರ್ಶ ಮಹಿಳೆ ಎಂದು ಗಾಂಧಿ ಅನುಯಾಯಿಗಳಿಂದ ಅಷ್ಟೇ ಅಲ್ಲದೆ ಸ್ವತಃ ಗಾಂಧೀಜಿಯವರಿಂದ ಕರೆಸಿಕೊಂಡ ದಿಟ್ಟ ಮಹಿಳೆ ಯಶೋಧರಮ್ಮ ದಾಸಪ್ಪ ಎಂದು ಗುಣಗಾನ ಮಾಡಿದ ಅವರು ಯಶೋಧರಮ್ಮ ದಾಸಪ್ಪ ಅವರ ಒಡನಾಡಿಯಾಗಿ ತಾವು ಕಳೆದ ಕಾಲವನ್ನು ಮೆಲುಕು ಹಾಕಿದರು
ಈ ಸಂದರ್ಭದಲ್ಲಿ ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವ್ಯವಸ್ಥಾಪಕ ಚಂದ್ರಶೇಖರ್ ಆದಿ ಚುಂಚನಗಿರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನ್ನಪೂರ್ಣೇಶ್ವರಿ ಕಸ್ತೂರಬಾ ಶಿಬಿರದ ಪ್ರತಿನಿಧಿ ಮೇರಿ ಆದಿಚುಂಚನಗಿರಿ ಕಾಲೇಜಿನ ದೈಹಿಕ ಶಿಕ್ಷಕ ನಾಗೇಶ್ ಹಾಸನ ಆದಿಚುಂಚನಗಿರಿ ಮಠದ ರತನ್ ಹಾಗೂ ಸ್ಥಳೀಯ ಶಾಲೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು
Tags
ಅರಸೀಕೆರೆ