-ನಾಗರಾಜ್ ಹೆತ್ತೂರು
ಸಕಲೇಶಪುರ: ದಲಿತ, ರೈತ , ಕಾರ್ಮಿಕ ಚಳುವಳಿಯ ತಾಯಿ ಬೇರಿನಂತಿರುವ ಸಕಲೇಶಪುರದಲ್ಲಿ ದಲಿತ- ಮುಸ್ಲೀಮರು ಇಂದಿಗೂ ಸೋದರರಂತೆ ಇದ್ದಾರೆ. ಈ ನಡುವೆ ಗುರುವಾರ ಕೆಲವು ರಾಜಕೀಯ ಮುಖಂಡರ ಕುಮ್ಮಕ್ಕಿನಿಂದಾಗಿ ಮುಸ್ಲೀಂ ಮುಖಂಡನೊಬ್ಬನ ಮೇಲೆ ದಲಿತನೊಬ್ಬನ್ನು ಎತ್ತಿಕಟ್ಟಿ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ. ಈ ಮೂಲಕ ತೆರೆಯ ಮರೆ ನಿಂತು ಈ ಕೇಸು ಹಾಕಿಸಿದ ಮುಖಂಡನೊಬ್ಬನ ಮುಖವಾಡ ಬಯಲಾಗಿದ್ದು ತಾಲೂಕಿನ ಇತಿಹಾಸದಲ್ಲೇ ಮುಸ್ಲಿಂ ಮುಖಂಡನೊಬ್ಬನ ಮೇಲೆ ಮೊದಲ ಬಾರಿಗೆ ಅಟ್ರಾಟಿಸಿ ದಾಖಲಾಗಿದ್ದು ಈ ಬಗ್ಗೆ ತಾಲೂಕಿನಾದ್ಯಂತ ಚರ್ಚೆ ನಡೆಯುತ್ತಿದೆ.
ಇಷ್ಟಕ್ಕೂ ನಡೆದಿರುವುದೇನು..?
ಪುರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಮುಪೀಸ್ ವಿರುದ್ದ ಮಾಜಿ ಸೈನಿಕ ಹಾಗೂ ದಲಿತ ಮುಖಂಡ ಧರ್ಮಪ್ಪ ನೆನ್ನೆ ದೂರು ನೀಡಿದ್ದರು. ವಾಸ್ತವದಲ್ಲಿ ಇದು ಕುಳಿತ ಬಗೆಹರಿಸಿಕೊಳ್ಳಬಹುದಾದ ವಿಚಾರ ಎನ್ನಲಾಗುತ್ತಿದೆ. ಮುಸ್ಲಿಂರ ಬಗ್ಗೆ ಅಪಾರ ಗೌರವ ಇರುವ ಆ ದಲಿತ ಮುಖಂಡ. ಮುಸ್ಲೀಮ ಸಂಘಟನೆಗಳೊಂದಿಗೆ ಕಳೆದ ಹಲವು ದಶಕಗಳಿಂದ ಅಪಾರ ಗೌರವ ಇಟ್ಟು ಕೊಂಡಿದ್ದಾರೆ. ಕುಶಾಲನಗರದಲ್ಲಿ ನಿರ್ಮಾಣವಾಗುತ್ತಿರುವ ಕೆಲವು ಕಾಮಗಾರಿಗಳಿಗೆ ಹಾಗೂ ಜಾಗಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಮೂಲಕ ಬಡವರಿಗೆ ನ್ಯಾಯ ಕೊಡಇಸಲು ಹೋರಾಟ ನಡೆಸುತ್ತಿದ್ದಾರೆ.
ಈ ನಡುವೆ ಮುಫೀಸ್ ಅವರು ಕುಶಾಲನಗರ ಬಡಾವಣೆಯ ಲ್ಲಿ ಸ್ವಂತ ಮನೆ ನಿರ್ಮಿಸುತ್ತಿದ್ದಾರೆ. ಈ ಮನೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಟ್ಟಡ ಕಾಮಾಗಾರಿ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಧರ್ಮಪ್ಪ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಇದರ ಬಗ್ಗೆ ಮಾಹಿತಿ ಹಕ್ಕು ಹಾಗೂ ಸಿಎಂ ವರೆಗೂ ಪತ್ರ ವ್ಯವಹಾರ ಮಾಡಿ ಕೂಡಲೇ ನಿಲ್ಲಿಸುವಂತೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ವಿಚಾರ ತಿಳಿದ ಮುಫೀಸ್ ಏನಾಗಿದೆ ಕುಳಿತು ಮಾತನಾಡೋಣ ಎಂದು ಮನವಿ ಮಾಡಿದ್ದರು ಆದರೆ ಈವರೆಗೆ ಆದರೆ ಯಾವುದೇ ಮಾತು ಕಥೆನಡೆದಿರಲ್ಲಿಲ್ಲ.
ಇದುವರೆಗೆ ಮುಖಾಮುಖಿ ಮಾತೇ ಆಗಿಲ್ಲ
ಈ ನಡುವೆ ಧರ್ಮಪ್ಪ , ಮುಫೀಸ್ ಅವರ ನನ್ನ ಮೇಲೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದರು ಎಂದು ಆರೋಪಿಸಿ ಅಟ್ರಾಸಿಟಿ ದಾಖಲಿಸಲು ದೂರು ನೀಡಿದರು. ವಾಸ್ತವದಲ್ಲಿ ಇವರಿಬ್ಬರೂ ಭೇಟಿ ಆಗಿಯೇ ಇಲ್ಲ ಎಂದು ಮುಫೀಸ್ `ಪತ್ರಿಕೆ’ ಗೆ ತಿಳಿಸಿದ್ದಾರೆ. ಆದರೆ ಇದನ್ನು ರಾಜಕೀಯಕ್ಕೆ ಬೆಳಸಿಕೊಂಡ ಹಿರಿಯ ರಾಜಕಾರಣಿ ಒಬ್ಬರು ಸ್ಥಳೀಯ ಸಂಘಟನೆಗಳ ಸಹಕಾರ ಕೊಟ್ಟು ಮುಪೀಸ್ ಅವರ ಎಫ್‍ಐಆರ್ ದಾಖಲಿಸಲು ಒತ್ತಡ ಹಾಕಿಸಿದ್ದಾರೆ. ಹಾಸನ ಜಿಲ್ಲೆಯ ದಲಿತ ಮುಖಂಡರು, ರಾಜಕಾರಣಿಗಳು, ಸ್ಥಳೀಯ ಶಾಸಕರು ಹಾಗೂ ಮುಸ್ಲಿಂ ಮುಖಂಡರ ಮನವಿಯ ನಡುವೆಯೂ ರಾತ್ರಿ ಸಮಯದಲ್ಲಿ ಎಫ್‍ಐ ಆರ್ ದಾಖಲಾಗಿದ್ದು ಠಾಣೆ ಬೆಲ್ ಸಿಕ್ಕಿದ ನಂತರ ಮುಫೀಸ್ ಬಿಡುಗಡೆಗೊಂಡಿದ್ದಾರೆ,. ಇದಿಷ್ಟು ನಡೆದುರುವ ಘಟನೆ.
ಮುಸ್ಲಿಂರ ವಿರುದ್ದ ದಲಿತರನ್ನು ಎತ್ತಿ ಕಟ್ಟಿದರೇ..?
ಈ ಬಗ್ಗೆ ಪ್ರತಿಕ್ರಿಸಿದ ಕೆಲ ದಲಿತ ಮುಖಂಡರು ಸಕಲೇಶಪುರದಲಲಿ ಮುಸ್ಲಿಂರು, ದಲಿತರು ಸೋದರರಂತೆ ಇದ್ದೇವೆ ಈ ಘಟನೆಗೆ ಸಂಬಂಧಿಸಿದಂತೆ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು ಆದರೆ ರಾಜಕೀಯ ಮುಖಂಡರ ರಾಜಕೀಯ ದಾಳಕ್ಕೆ ದಲಿತರು ಬಲಿಯಾಗುವಂತಾಗಿದೆ. ಈ ಮೂಲಕ ದಲಿತರು ಮತ್ತು ಮುಸ್ಲಿಂರ ನಡುವೆ ತಂಡಿಡುವ ಪ್ರಯತ್ನ ಮಾಡುತ್ತಿದ್ದಾರೆ. ದಲಿತರು ಹಾಗೂ ಮುಸ್ಲಿಂರು ಇದಕ್ಕೆ ಅವಕಾಶ ಮಾಡಿಕೊಡಬಾರದು.ದಲಿತಮತ್ತು ಮುಸ್ಲಿಂ ನಡುವೆ ಭಿನ್ನಾಭಿಪ್ರಾಯ ತಂದಿಡುವ ವ್ಯಕ್ತಿಗೆ ಛೀಮಾರಿ ಹಾಕುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
``ಆತ ಜಾತಿ ನಿಂಧನೆ ಮಾಡಿದ್ದಾನೆ ನನ್ನ ಹಕ್ಕನ್ನು ನಾನು ಬಳಸಿದ್ದೇನೆ..’’
ಮುಫೀಸ್ ನನ್ನ ವಿರುದ್ದ ಜಾತಿ ನಿಂದನೆ ಮಾಡಿ, ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಆ ಕಾರಣಕ್ಕಾಗಿ ನಾನು ದೂರು ಕೊಟ್ಟಿದ್ದೇನೆ. ನಾನೊಬ್ಬ ಮಾಜಿ ಸೈನಿಕ, ನನಗೆ ಸೈನಿಕರ ಬೆಂಬಲ ಇದೆ. ಈ ನಡುವೆ ನನಗೆ ಕೆಲವರು ಬೆಂಬಲ ಕೊಟ್ಟಿರುವುದು ನಿಜ. ಎಲ್ಲೂ ನ್ಯಾಯ ಸಿಕ್ಕದಿದ್ದ ಸಂದರ್ಭದಲ್ಲಿ ನಾನು ಅವರ ಬಳಿ ಹೋಗಿ ನ್ಯಾಯ ಕೇಳಿದ್ದೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ದೂರು ನೀಡುದ್ದೇನೆ ಈ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ
- ಧರ್ಮಪ್ಪ , ಮಾಜಿ ಸೈನಿಕ ಮತ್ತು ದೂರುದಾರ
ಸಮಾಜದ ಶಾಂತಿಯನ್ನು ಹಾಳು ಮಾಡಬೇಡಿ....
ಪ್ರಕರಣ ಕುರಿತಂತೆ `ಭೀಮ ವಿಜಯ’ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಕುಮಾರಸ್ವಾಮಿ, ನಮ್ಮ ಕ್ಷೇತ್ರದಲ್ಲಿ ಮುಸ್ಲಿಂ- ದಲಿತರು- ಇತರೆ ಎಲ್ಲಾ ವರ್ಗದವರು ಸಹಬಾಳ್ವೆಯಿಂದ ಇದ್ದಾರೆ. ಮುಪೀಸ್ ಅವರದ್ದು ನಿಜವಾಗಿಯೂ ತಪ್ಪಾಗಿದ್ದರೆ ದೂರು ನೀಡಲಿ. ಆದರೆ ಯಾರದೋ ಕುಮ್ಮಕ್ಕಿಗೆ ಒಳಗಾಗಿ ದೂರು ನೀಡಿದ್ದರೆ ಅದು ತಪ್ಪು. ಎಲ್ಲರೂ ತಪ್ಪು ಹಾಗೆಂದು ಎಫ್‍ಐ ಆರ್ ಒಂದೇ ಪರಿಹಾರವಲ್ಲ. ಕುಳಿತು ಬರೆಹರಿಸಲು ಅವಕಾಶವಿತ್ತು. ಈ ಪ್ರಕರಣ ದಲಿತರು ಹಾಗೂ ಮುಸ್ಲಿಂರ ಐಕ್ಯತೆಗೆ ಧಕ್ಕೆ ತಂದಿದೆ. ಈ ಬಗ್ಗೆ ಇಬ್ಬರನ್ನೂ ಕರೆಸಿ ಮಾತನಾಡುತ್ತೇನೆ, ಟ್ರಾಸಿಟಿ ದುರ್ಬಳಕೆ ಆಗದಂತೆಯೂ ನಾವು ಎಚ್ಚರಿಕೆ ವಹಿಸಬೇಕು. ಈ ರೀತಿ ಪ್ರಕರಣ ಮರುಕಳಿಸದಂತೆ ಎಲ್ಲರೂ ಎಚ್ಚರ ವಹಿಸೋಣ. ಆದರೆ ಇಬ್ಬರ ನಡುವೆ ತಂದಿಟ್ಟ ಬೇಳೆ ಬೇಯಿಸಿಕೊಳ್ಳುವ ಪಟ್ಟಭದ್ರರ ಬಗ್ಗೆ ಎಚ್ಚರಿಕೆಕೆಯಿಂದಿರಿ..
- ಹೆಚ್. ಕೆ. ಕುಮಾರಸ್ವಾಮಿ, ಶಾಸಕರು, ಸಕಲೇಶಪುರ- ಆಲೂರು ವಿಧಾನಸಬಾ ಕ್ಷೇತ್ರ
ರಾಜಕಾರಣಿಯೊಬ್ಬರ ಪ್ರಚೋದನೆಯಿಂದ ಈ ಸುಳ್ಳು ಕೇಸು ದಾಖಲಾಗಿದೆ. ದಲಿತರೊಬ್ಬರನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ಎತ್ತಿಕಟ್ಟಿ ಪ್ರಕರಣದಾಖಲಿಸಿದ್ದಾರೆ. ಎಲ್ಲವು ಪೂರ್ವ ಯೋಜಿತವಾಗಿ ತಂತ್ರಗಾರಿಕೆಯಿಂದ ಮಾಡಲಾಗಿದೆ. ನಾನು ನನ್ನ ಹಿಡುವಳಿ ಜಾಗದಲ್ಲಿ ಮನೆ ನಿರ್ಮಿಸುತ್ತಿದ್ದೇನೆ. ಇದರ ವಿರುದ್ಧ ದೂರು ನೀಡಿದ್ದಾರೆ. ಇದನ್ನೆ ಹಿನ್ನಲೆ ಯಾಗಿರಿಸಿಕೊಂಡು. ನಾನು ಜಾತಿ ನಿಂದನೆ ಮಾಡಿದೆ ಎಂದು ದೂರುನೀಡಿದ್ದಾರೆ. ನಾನು ಮತ್ತು ದರ್ಮಪ್ಪ ಮುಖಾಮುಖಿ ಬೇಟಿಯಾಗಿಲ್ಲ.
ವಾಸ್ತವ ಹೀಗಿದ್ದರು ಸುಳ್ಳು ದೂರು ನೀಡಿದ್ದಾರೆ. ನನ್ನ ಮತ್ತು ದಲಿತ ಸಮಾಜ ದೊಂದಿಗೆ ಉತ್ತಮ ಸಂಬಂದವಿದೆ. ನನ್ನ ವಿರುದ್ದ ಜಾತಿ ನಿಂದನೆ ಕೇಸು ಪ್ರಕರಣ ದಾಖಲಾಗಿರುವುದು ಇದು ನನಗೆ ಬಹಳ ದುಖಃ ತಂದಿದೆ.ಯಾವುದೇ ಕೇಸು ದಾಖಲಾಗಿದ್ದರು ಬೇಜಾರಾಗುತ್ತಿರಲಿಲ್ಲ. ನನ್ನ ಬಗ್ಗೆ ದಲಿತ ಸಮಾಜ ತಪ್ಪು ತಿಳಿದು ಕೊಳ್ಳುವ ಸಂಬಂವವಿದೆ. ಇಲ್ಲಿಯ ವರಗೆ ಮುಸ್ಲಿಂ ಮುಖಂಡನ ವಿರುದ್ದ ಜಾತಿನಿಂದನೆ ಕೇಸು ದಾಖಲಾಗಿಲ್ಲ. ಇದು ಅತ್ಯಂತ ಕೆಟ್ಟ ಬೆಳವಣಿಗೆ ಯಾಗಿದೆ.
ಸಯ್ಯದ್ ಮುಫೀಜ್
ಮಾಜಿ ಪುರಸಭೆಯ
ಅಧ್ಯಕ್ಷ ಸಕಲೇಶಪುರ.
ಮುಸ್ಲೀಮರ ಟಾರ್ಗೆಟ್ ಮಾಡಲಾಗುತ್ತಿದೆಯೇ..?
ಈ ನಡುವೆ ಕೆಲ ದಿನದ ಹಿಂದೆ ಕಡವೆ ಬೇಟೆ ಮಾಡಿ ಮಾಂಸ ತಿನ್ನುತ್ತಿದ್ದಾರೆ ಎಂಬ ಸಂಬಂಧ ಸಕಲೇಶಪುರದ ಐವರು ಪ್ರಮುಖ ಮುಸ್ಲಿಂ ಮುಖಂಡರ ಮನೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ದಾಳಿ ನಡೆಸುವ ಉದ್ದೇಶ ಹೊಂದಲಾಗಿತ್ತು. ಈ ಪ್ರಕರಣದಲ್ಲಿ ಮುಫೀಜ್ ಮನೆಗೆ ದಾಳಿ ಇಟ್ಟಿದ್ದ ಇಲಾಖೆ ಸಿಬ್ಬಂದಿ ಅಲ್ಲಿ ಅಡುಗೆಯ ಬೇಯಿಸಿದ ಮಾಂಸ ತೆಗೆದುಕೊಂಡು ವಾಪಾಸ್ ಆಗಿದ್ದರು.
ಈ ಪ್ರಕರಣಕ್ಕೆ ಸಬಂಧಿಸಿದಂತೆ ಒಟ್ಟು ಐವರು ಮುಸ್ಲಿಂ ಮುಖಂಡರ ಮನೆ ಮೇಲೆ ದಾಳಿ ನಡೆಸುವ ಯೋಜನೆ ಇತ್ತೆಂದು ಹೇಳಲಾಗುತ್ತಿದೆ. ಈ ಐವರನ್ನು ಊರು ಬಿಡಿಸಲು ಯತ್ನಿಸುತ್ತಿರುವ ಆ `ಮುಖ’ದ ಬಗ್ಗೆಯೇ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ದುರಂತ ಎಂದರೆ ಹಿಂದೂ ಸಂಘಟನೆಯ ಮುಖಂಡರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಕೋಮು ಸೌಹಾರ್ಧತೆಗೆ ಧಕ್ಕೆಯುಂಟು ಮಾಡುವ ಬೆಳವಣಿಗೆ ಎನ್ನಲಾಗುತ್ತಿದೆ.
ಹೌದು...!
ದಲಿತರು ಅಟ್ರಾಸಿಟಿ ಕೊಟ್ಟಿರುವುದು ತಪ್ಪಲ್ಲ. ಆದರೆ ಕುಳಿತು ಮಾತನಾಡಿಕೊಂಡು ಬಗೆಹರಬಹುದಿದ್ದ ಪ್ರಕರಣವನ್ನು ಯಾರ ಮಾತಿಗೂ ಬೆಲೆ ಕೊಡದೆ, ದೈನ್ಯತೆಯಿಮದ ಬೇಡಿಕೊಂಡರೂ ಕೇಳದೆ, ಹಳೆಯ ಜಿದ್ದಿಗೆ ದಲಿತರನ್ನು ಮುಂದಿಟ್ಟುಕೊಂಡು ಪ್ರಕರಣ ದಾಖಲಿಸುವಂತೆ ಮಾಡಿರುವ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ದಲಿತರು ಮತ್ತು ಮುಸ್ಲಿಂರು ನನ್ನ ಎರಡು ಕಣ್ಣೆಗಳೆಂದು ಹೇಳುತ್ತಿದ್ದ ಆ ಮುಖಂಡ ಆ ಎರಡು ಕಣ್ಣುಗಳಿಗೆ ಕಾರದ ಪುಡಿ ಎರಚಿ ಹೊಡೆದಾಡಲು ಬಿಟ್ಟಿರುವುದು ಮಾತ್ರ ದುರಂತ. ಜನರೇ ಪಾಠ ಕಲಿಸಲಿದ್ದಾರೆ.