ಜಿಲ್ಲೆಯ 3 ಪ್ರಥಮ ದರ್ಜೆ ಕಾಲೇಜು ಬೆಂಗಳೂರಿಗೆ ಶಿಫ್ಟ್


ಹಾಸನ: ವಿದ್ಯಾರ್ಥಿಗಳ ಕಡಿಮೆ ಹಾಜರಾತಿ ಕಾರಣ ನೀಡಿ ಹಾಸನ ಜಿಲ್ಲೆಯ ಮೂರು 
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. 

ಈ ಕುರಿತು ಕಳೆದ ಮೇ 18 ರಂದು ಆದೇಶ ಹೊರ ಬಿದ್ದಿದೆ. ಬೇಲೂರು ತಾಲೂಕು ಅರೇಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಂಗಳೂರಿನ ಮಲ್ಲೇಶ್ವರಂಗೆ, ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಪ್ರಥಮ ದರ್ಜೆ ಕಾಲೇಜನ್ನು ಬೆಂಗಳೂರಿನ ಶಾಂತಿನಗರಕ್ಕೆ ಹಾಗೂ ಸಕಲೇಶಪುರ ತಾಲೂಕು ಹೆತ್ತೂರು ಪ್ರಥಮ ದರ್ಜೆ ಕಾಲೇಜನ್ನು ಬೆಂಗಳೂರಿನ ಹೆಬ್ಬಾಳ ನಗರಕ್ಕೆ ಸ್ಥಳಾಂತರಿಸಲಾಗಿದೆ. 

ಈ ಮೂರು ಕಾಲೇಜುಗಳು 100ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಪಟ್ಟಿಯಲ್ಲಿದ್ದವು ಎಂಬ ಕಾರಣ ನೀಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಪ್ರವೇಶಾತಿ ಸಂಖ್ಯೆ ಕಡಿಮೆ ಇರುವ ಪ್ರಥಮ ದರ್ಜೆ ಕಾಲೇಜುಗಳನ್ನು ಹೆಚ್ಚು ಬೇಡಿಕೆ ಇರುವ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಧ್ಯಯನ ಮುಂದುವರಿಸಲು ಅವಕಾಶ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

1 Comments

  1. Bosudi makkalu Cuba nodi kaliro Sule makkala education health yellarigu free ,, vote yellawandu beku obbanige education kodakke aagalwa blady politics

    ReplyDelete
Previous Post Next Post