ಹಳೇಬೀಡು:ಸಮೀಪದ ಚೀಲನಾಯ್ಕನಹಳ್ಳಿ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದಿದ್ದ 24 ವರ್ಷದ ಒಬ್ಬ ವ್ಯಕ್ತಿಗೆ ಕೋವಿಡ್ 19 ಪಾಸಿಟೀವ್ ಬಂದಿರುವುದರಿಂದ ಗ್ರಾಮದ ಶಾಲೆ ಮುಂಭಾಗದ ರಸ್ತೆಯನ್ನು ಶುಕ್ರವಾರ ಸೀಲ್ಡೌನ್ ಮಾಡಲಾಯಿತು.
ಸೋಂಕಿತ ವ್ಯಕ್ತಿಯ ತಂದೆ, ತಾಯಿಯನ್ನು ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರನ್ನು ಹೊಂ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ ತಿರುಗಾಡಿದ್ದಾನೆ ಎನ್ನಲಾಗಿರುವ ರಾಜಗೆರೆ, ಬಸ್ತಿಹಳ್ಳಿ ಹಾಗೂ ಹಳೇಬೀಡಿನಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತಿ ನೌಕರರು ಕಾರ್ಯಪ್ರವೃತ್ತರಾಗಿದ್ದಾರೆ. ಚೀಲನಾಯ್ಕನಹಳ್ಳಿ, ಬಸ್ತಿಹಳ್ಳಿ, ಹಳೇಬೀಡು ಹಾಗೂ ರಾಜಗೆರೆ ಗ್ರಾಮಗಳಲ್ಲಿ ಧ್ವನಿವರ್ಧಕದ ಮುಖಾಂತರ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕೊರೊನಾ ಸೋಂಕು ಸಮುದಾಯಕ್ಕೆ ಹೆಚ್ಚಾಗಿ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪ್ರಚಾರ ಮಾಡಲಾಗುತ್ತಿದೆ.
ಚೀಲನಾಯ್ಕನಹಳ್ಳಿ ಗ್ರಾಮದಲ್ಲಿ ಬ್ಲಿಚೀಂಗ್ ಪೌಡರ್ ಸಿಂಪಡಣೆ ಮಾಡಿಸಿದ್ದೇವೆ. ಗ್ರಾಮದ ಸೀಲ್ಡೌನ್ ಪ್ರದೇಶಕ್ಕೆ ಸ್ಯಾನಿಟೈಸೇಷನ್ ಸಹ ಮಾಡಿಸಲಾಗುವುದು. ಜನರು ತುರ್ತು ಕೆಲಸ ಇದ್ದಾಗ ಮಾತ್ರ ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಡಬೇಕು ಎಂದು ಗ್ರಾಮ ಪಂಚಾಯತಿ ಟಾಸ್ಕಪೋರ್ಸ್ನಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಿಡಿಒ ರವಿಕುಮಾರ್ ತಿಳಿಸಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯ್, ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಮೇಶ್, ಸಬ್ಇನ್ಸ್ಪೆಕ್ಟರ್ ಶಕುಂತಲಮ್ಮ, ಪಿಡಿಒ ರವಿಕುಮಾರ್, ಉಪ ತಹಶೀಲ್ದಾರ್ ಕೆ.ಜಿ.ಪ್ರದೀಪ್. ಕಂದಾಯ ನಿರೀಕ್ಷಕ ವಸಂತ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.

Tags
ಬೇಲೂರು