ಹಾಸನ ಗುಡುಗಿದರೆ ಯಾವುದೇ ಸರ್ಕಾರಕ್ಕೆ ಉಳಿಗಾಲವಿಲ್ಲಾ


ಕಾಲೇಜು ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ರೇವಣ್ಣ ಕೆಂಡಾಮಂಡಲ

ಹಾಸನ; ಹಾಸನ ಜಿಲ್ಲೆ ಗುಡುಗಿದರೆ ಸರ್ಕಾರಕ್ಕೆ‌ ಉಳಿಗಾಲವಿಲ್ಲಾ...ಇಲ್ಲಿನ ಕಾಲೇಜುಗಳನ್ನು ರದ್ದು ಮಾಡುವಂತಹ ಆದೇಶ ಮಾಡುವ ಮೂಲಕ ದ್ವೇಷದ ರಾಜಕೀಯ ಮಡಿದಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಶಾಶ್ವತನಾ ...ಎನೇನೂ ಮಾಡುತ್ತಾರೆ ಮಾಡಲಿ ...ಬಿಜೆಪಿ ಶಾಶ್ವತ ಏನ್‌ ರ್ರೀ...ನಾ ಹೆದರಿ ಓಡಿಹೊಗಲ್ಲಾ.. ನನ್ನ ರಾಜಕೀಯ ಶಕ್ತಿ ಕುಂದಿಲ್ಲಾ.. ದ್ವೇಷ ರಾಜಕೀಯ ಮಾಡಲ್ಲಾ ಎಂದು ಸದನದಲ್ಲಿ ಹೇಳಿ ...ಹೊರಗೆ ಇಂತಹ ಕೆಲಸ ಮಾಡುತ್ತಿದ್ದಾರೆ.. ಎಂದು ದೂರಿದರು.

ವರ್ಗಾವಣೆ‌ ದಂಧೆ...!!!
ತರಕಾರಿಗೆ ದರನಿಗಧಿಯಂತೆ ಅಧಿಕಾರಿಗಳ‌ ವರ್ಗಾವಣೆ ಗೆ ಸರ್ಕಾರ ದರ‌ ನಿಗದಿ ಮಾಡಿದೆ ಎಂದು ಆರೊಪಿಸಿದ ಅವರು ಚನ್ನರಾಯಪಟ್ಟಣದ ಎಕ್ಸಿಕ್ಯುಟಿವ್ ಎಂಜಿನಿಯರೊಬ್ಬರು ವರ್ಗಾವಣೆ ಗೊಂಡು ಲಕ್ಷಾಂತರ‌ ರೂ‌ ನೀಡಿ‌ ಇಲ್ಲಿಗೆ‌ ಬಂದಿದ್ದೇನೆ ಎಂದು ತಮ್ಮ ನೋವು ಹಂಚಿಕೊಂಡಿದ್ದಾರೆ...ಬಿಜೆಪಿ ಸರ್ಕಾರದಲ್ಲಿ ವರ್ಗಾವಣೆ‌ ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಉತ್ತಮ‌ ಕೆಲಸ ಮಾಡುವ ಅಧಿಕಾರಿಗಳಿಗೆ ಉಳಿಗಾಲವಿಲ್ಲಾ. ಅವರ ಮಾತು ಕೇಳದಿದ್ದಲ್ಲಿ ವರ್ಗಾವಣೆ ಭಾಗ್ಯ ದಯಪಾಲಿಸಲಾಗುತ್ತಿದೆ ಎಂದು ಆಪಾದಿಸಿದರು.

ಭೂಮಾಲೀಕರೊಂದಿಗೆ ಶಾಮೀಲಾಗಿ‌ ಭೂ ಸುಧಾರಣೆ ಕಾಯಿದೆ ಜಾರಿಗೆ ಸರ್ಕಾರ ಮುಂದಾಗಿದೆ..ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಸರಕಾರದ್ದಾಗಿದೆ ಇಂತಹ ಕಾಯಿದೆ ಜಹಿತಕ್ಕಲ್ಲಾ‌ ; ಕೊರೋನಾ ಸಂಕಷ್ಟಕ್ಕೆ ಸರ್ಕಾರ ಹಣ ದೇಣಿಗೆ ಲೆಕ್ಕ ನೀಡುವಂತೆ ಒತ್ತಾಯ ಮಾಡಿದ್ದೆ ಆದರೆ ಇದುವರೆಗೆ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲಾ ಎಂದು ರೇವಣ್ಣ ಹೇಳಿದರು.

Post a Comment

Previous Post Next Post