ಹಾಸನ.ಜೂ.22:- ಕೋವಿಡ್-19 ಕಾಯಿಲೆಯ ತುರ್ತುಪರಿಸ್ಥಿತಿಯಲ್ಲಿ ರಕ್ತದಾನಿಗಳ ಸಂಖ್ಯೆ ಇಳಿಮುಖವಾಗಿದೆ. ಈ ಶಿಬಿರದಿಂದ ಅನೇಕರಿಗೆ ಜೀವದಾನವಾಗಿದೆ ಮತ್ತು ರಕ್ತದಾನಿಗಳೆಲ್ಲರೂ ಮಾದರಿಯಾಗಿದ್ದಾರೆ ಎಂದು ಔಷಧ ವ್ಯಾಪಾರಿಗಳ ಸಂಘದ ಸಣ್ಣ ಮಂಜೇಗೌಡ ಅವರು ಕಾರ್ಯಕ್ರಮದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ಕನ್ನಡ ಸಂಘ ಹಾಗೂ ರೋಟರಿ ಕ್ಲಬ್ ಹಾಸನ ಇದರ ಸಂಯುಕ್ತಾಶ್ರಯದಲ್ಲಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.
ಶಿಬಿರದಲ್ಲಿ ಸಂಸ್ಥೆಯ ನಿರ್ಧೇಶಕರಾದ ಡಾ|| ರವಿಕುಮಾರ್ ಬಿ.ಸಿ., ನಿವಾಸಿ ವೈದ್ಯಾಧಿಕಾರಿಗಳಾದ ಡಾ|| ಈಶ್ವರ್ ಪ್ರಸಾದ್, ಡಾ|| ಪ್ರಕಾಶ್, ಡಾ|| ಸುರೇಶ್ ಎಂ.ಆರ್., ಡಾ|| ಕೆ.ಎ. ನಾಗೇಶ್, ಡಾ|| ಸಿದ್ದರಾಮ್ ಎಸ್. ಮೇಟ್ರೀ, ರೋಟರಿ ಕ್ಲಬ್‍ನ ನಾಗೇಂದ್ರ ಹಾಗೂ ಸದಸ್ಯರು ಮತ್ತು ಸಂಸ್ಥೆಯ ಭೋದಕ ಹಾಗೂ ಬೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಶಿಬಿರದಲ್ಲಿ ಸುಮಾರು 50 ಜನರು ರಕ್ತದಾನವನ್ನು ಮಾಡುವ ಮೂಲಕ ಜನರಿಗೆ ಮಾದರಿಯಾದರು.
ಶಿಬಿರವನ್ನು ಹಿಮ್ಸ್ ಪ್ರಾಂಶುಪಾಲರಾದ ಡಾ|| ನಾಗೇಶ್ ಉದ್ಘಾಟಿಸಿದರು ಹಾಗೂ ರೋಟರಿ ಕ್ಲಬ್ ಅದ್ಯಕ್ಷರಾದ ಅಪ್ಪಚ್ಚು ಅವರು ರಕ್ತದಾನಿಗಳಿಗೆ ಹೂವಿನ ಗಿಡಗಳನ್ನು ನೀಡುವ ಮೂಲಕ ಗೌರವಿಸಿದರು.
ಶಿಬಿರದಲ್ಲಿ ರಕ್ತನಿಧಿ ವಿಭಾಗದ ಮುಖ್ಯಸ್ಥರಾದ ಡಾ|| ನಾಗಲಕ್ಮೀ, ಕನ್ನಡ ಸಂಘದ ಅಧ್ಯಕ್ಷರಾದ ಡಾ|| ನಾಗೇಶ್ ಕೆ.ಎ, ಹಾಗೂ ಹಿಮ್ಸ್ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ನಿಚಿತಾ ಕುಮಾರಿ ಉಪಸ್ಥಿತರಿದ್ದರು.
Tags
ಹಾಸನ