ಆಲೂರು ‌ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ

ಆಲೂರು :-ಬೇಲೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಾಗೂ ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ರವೀಶ್  ನಿಧನಗೊಂಡ ಹಿನ್ನಲೆಯಲ್ಲಿ ತಾಲ್ಲೂಕು  ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
​ಮೊದಲು ಎರಡು ನಿಮಿಷ ಮೌನ ಆಚರಿಸಿ ಮೃತರಾದ ರವೀಶ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ ನಟರಾಜ್ ನಾಕಲಗೂಡು ಹಿರಿಯ ಪತ್ರಕರ್ತರು ನಿಧನರಾದ ರವೀಶ್ ಕುರಿತು ಮಾತನಾಡಿದ ಅವರು, ಜ್ಞಾನದೀಪ ಕನ್ನಡ ದಿನಪತ್ರಿಕೆಯಲ್ಲಿ ಕೆಲಸ ಮಾಡಿ, ಪ್ರಜಾವಾಣಿ ಪತ್ರಿಕೆಯಲ್ಲಿ ಸಕ್ರಿಯವಾಗಿ ಬೇಲೂರಿನಲ್ಲಿ ವರದಿಗಾರರಾಗಿ ತೊಡಗಿಸಿಕೊಂಡಿದ್ದರು. ಯಾವುದೇ ಒಂದು ಕೆಲಸವನ್ನು ಕೈಗೆತ್ತಿಕೊಂಡರೇ ಯಶಸ್ಸುವಾಗುವವರೆಗೂ ಬಿಡುತ್ತಿರಲಿಲ್ಲ. ಉತ್ತಮ ಬರಹದೊಂದಿಗೆ ತಮ್ಮದೆಯಾದ ಹೆಸರುಗಳಿಸಿದವರು. ಕೇವಲ ಬೇಲೂರು ತಾಲೂಕಿಗೆ ಮಾತ್ರ ಅವರ ಸೇವೆ ಸಲ್ಲಿಸಿಲ್ಲ. ರಾಜ್ಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದರು.ಪತ್ರಿಕಾ ದಿನಾಚರಣೆ ನಡೆಯುವಾಗ ತುಂಬ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದರು.ಯಾರೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಯಾರಲ್ಲೂ ಕೂಡ ಧ್ವೇಷದ ಮನೋಭಾವ ಅವರು ಮೈಗೂಡಿಸಿಕೊಂಡಿರಲಿಲ್ಲ ಎಂದರು. 

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಆದಿಲ್  ಮಾತನಾಡಿ ಒಂದು ಸಂಘಟನೆ ಮಾಡಿದರೇ ಎಲ್ಲಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುತ್ತಿದ್ದರು ಕೆಲ ತಿಂಗಳಲ್ಲಿ ನಾಲ್ಕು ದಿಕ್ಕಿನ ನಾಲ್ಕು ಜನ ದಿಗ್ಗಜರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಮಾದಿಹಳ್ಳಿ ವೆಂಕಟೇಶ್, ಜಾವಗಲ್ ಪ್ರಸನ್ನ, ಹೊಳೆನರಸೀಪುರ ಗುರು ಒಬ್ಬಬ್ಬರಾಗಿ ಕಳೆದುಕೊಂಡಿದ್ದೇವೆ   ಭಗವಂತ ಮೃತರ ಕುಟುಂಬಕ್ಕೆ ಅವರ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಹಿರಿಯ ಪತ್ರಕರ್ತ ಟಿ.ಕೆ.ಕುಮಾರಸ್ವಾಮಿ, ರುದ್ರಕುಮಾರ್,ನವೀನ್ ಹಾಗೂ ಇತರರು ಉಪಸ್ಥಿತರಿದ್ದರು.

Post a Comment

Previous Post Next Post