ಆಯುಷ್ ಕಿಟ್ ಬಳಸುವುದರ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಉತ್ತಮವಾಗಿ ಆರೋಗ್ಯ ಕಾಪಾಡಿಕೊಳ್ಳುವಂತೆ ಶಾಸಕರಾದ ಪ್ರೀತಂ ಜೆ ಗೌಡ ಅವರು ತಿಳಿಸಿದ್ದಾರೆ.
ನಗರ ಸಭೆ ಸಭಾಂಗಣದಲ್ಲಿಂದು ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ ಆಯುಷ್ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ನಗರ ಸಭೆಯ ಪೌರ ಕಾರ್ಮಿಕರಿಗೆ ಆಯುಷ್ ಕಿಟ್ ವಿತರಿಸಿ ಅವರು ಮಾತನಾಡಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದರಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದರು.
ಆಯುಷ್ ಕಿಟ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಮೃತಬಳ್ಳಿಯಿಂದ ತಯಾರಿಸಿದ ಆಯುರ್ವೇದದ ಸಂಶಮನವಟಿ, ಹೋಮಿಯೋಪಥಿಯ ಅರ್ಸೆನಿಕ್ ಅಲ್ಬಂ ಹಾಗೂ ಯುನಾನಿಯ ಅರ್ಕಿ- ಇ-ಅಜಿಬ್ ಔಷಧಿಗಳನ್ನು ವಿತರಣೆ ಮಾಡಲಾಯಿತು.
ನಗರ ಸಭಾ ಆಯುಕ್ತರು ಕೃಷ್ಣಮೂರ್ತಿ, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ|| ವೀಣಾಲತಾ.ಎ, ಡಾ|| ಮೂಸೇಬ್ಯಾರಿ ಕೋವಿಡ್ ನೋಡಲ್ ಅಧಿಕಾರಿ ಡಾ|| ಮುಕುಂದ, ಡಾ|| ನಗೀನಾ, ಡಾ|| ಸುಜಾತ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
***
Tags
ಹಾಸನ