ಗ್ರಾಮ ದೇವತೆ ಕರಿಯಮ್ಮ ದೇವಾಲಯದ ಬಳಿ ವೈನ್ ಸೆಂಟರ್ ವಿರೋಧ

ಹಳೇಬೀಡು:ಜಾವಗಲ್ ರಸ್ತೆಯ ತಿರುವಿನಲ್ಲಿ ವಿಠಲರುಕುಮಾಯಿ ಹಾಗೂ ಗ್ರಾಮ ದೇವತೆ ಕರಿಯಮ್ಮ ದೇವಾಲಯದ ಬಳಿ ವೈನ್  ಸೆಂಟರ್ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ವಿಠಲ ರುಕುಮಾಯಿ ದೇವಾಲಯದ ಭಕ್ತರು ಹಾಗೂ ಜಾವಗಲ್ ರಸ್ತೆಯ ನಿವಾಸಿಗಳು ನಾಡಕಚೇರಿಗೆ ಮನವಿ ಸಲ್ಲಿಸಿದರು.

ವೈನ್  ಸೆಂಟರ್ ಆರಂಭಸಲು ಉದ್ದೇಶಿಸಿರುವ ಸ್ಥಳದ ಸಮೀಪದಲ್ಲಿ ಒಂದು ಖಾಸಗಿ ಶಾಲೆ ಇದೆ. ಶಾಲೆ ಆರಂಭವಾದಾಗ ಮಕ್ಕಳ ಓಡಾಟಕ್ಕೆ ತೊಂದರೆಯಾಗುತ್ತದೆ. ಅಲ್ಲದೆ ಎರಡೂ ದೇವಾಲಯಗಳು ಸಮೀಪದಲ್ಲಿಯೇ ಇರುವುದರಿಂದ ಧಾರ್ಮಿಕ ಭಾವನೆಗೂ ತೊಂದರೆಯಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಬದಿಯ ಮಳಿಗೆಯಲ್ಲಿ ವೈನ್ ಸೆಂಟರ್ ಆರಂಭಿಸಲು ಸಿದ್ದತೆ ನಡೆಯುತ್ತಿದೆ. ವೈನ್ ಸೆಂಟರ್ ಶುರುವಾದಾಕ್ಷಣ ಜನ ಸಂದಣಿ ಸಹ ಹೆಚ್ಚಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಜಾವಗಲ್ ರಸ್ತೆ ನಿವಾಸಿಗಳು ದೂರಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಳೇಬೀಡು ಘಟಕದಿಂದಲೂ ವೈನ್ ಆರಂಬಿಸಬಾರಾದು ಎಂದು ಮನವಿ ಸಲ್ಲಿಸಲಾಯಿತು.
ಸಾರ್ವಜನಕರ ಹಿತಾಸಕ್ತಿಯಿಂದ ಸಲ್ಲಿಸಿರುವ ಮನವಿಯನ್ನು ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಕಚೇರಿಗೆ ಕಳಿಸಲಾಗುವುದು ಎಂದು ಕಂದಾಯ ನಿರೀಕ್ಷಕ ಕೆ.ವಸಂತ ಕುಮಾರ್ ತಿಳಿಸಿದರು.
ಮುಖಂಡರಾದ ಸೊಪ್ನಳ್ಳಿ ಕೃಷ್ಣ, ಮಂಜುನಾಥರಾವ್, ಅಣ್ನಪ್ಪರಾವ್, ಬಿ.ಟಿ.ಜಗದೀಶ್, ಕನ್ನಿಕಾ, ಖಂಡೋಜಿರಾವ್, ಶಾರದಮ್ಮ, ಅಣ್ಣಪ್ಪ ರಾವ್, ಬಾಬುರಾವ್ ಮೊದಲಾದ ಗಣ್ಯರು ಹಾಜರಿದ್ದರು.

Post a Comment

Previous Post Next Post