ಸಕಲೇಶಪುರ : ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ ವಿರುದ್ಧ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನೆಡೆಸಲಾಯಿತು.
ನಗರದ ಹಳೆ ಬಸ್ ನಿಲ್ದಾಣದಿಂದ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನೆಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಯಡೇಹಳ್ಳಿ ಆರ್ ಮಂಜುನಾಥ್, ಭೂ ಸುಧಾರಣೆ ಕಾಯ್ದೆ ರೈತರ, ಕೃಷಿ ಕಾರ್ಮಿಕರಿಗೆ ಮರಣ ಶಾಸನವಾಗಿದೆ. ವ್ಯವಸಾಯ ಮಾಡಲು ಆಸಕ್ತರಿಗೆ ಭೂಮಿ ಖರೀದಿ ಮಾಡಲು ಅನುಕೂಲವಾಗಲು ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ಕೃಷಿ ಮಾಡುತ್ತಿರುವ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವ ಬಗ್ಗೆ ಹಾಗೂ ಆತ್ಮಹತ್ಯೆಗೆ ಶರಣಾಗುತ್ತಿರುವ ಬಗ್ಗೆ ಪರಿಹಾರ ಹುಡುಕದೇ ಬದಲಾಗಿ ಕಾರ್ಪೋರೆಟ್ ಕಂಪನಿ ಗಳಿಗೆ, ಬಂಡವಾಳಶಾಹಿಗಳು, ಅಕ್ರಮವಾಗಿ ಹಣ ಗಳಿಸಿದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿದೆ ಎಂದು ಆರೋಪಿಸಿದರು.
ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಣ್ಣ ರೈತರಿಂದ ಕೃಷಿ ಭೂಮಿ ಕಿತ್ತುಕೊಳ್ಳುವ ಸಂಚು. ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿ, ಭೂಮಿಯನ್ನು ಮಾರಲು ಪ್ರಚೋದಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಭೂ ಸುಧಾರಣೆ ಕಾಯ್ದೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಗ್ರ ಹೋರಾಟ ನೆಡಸಲಾಗುವುದು ಎಂದರು.
ಅಕ್ಕಪಕ್ಕದ ದೇಶಗಳ ಗಡಿ ಭಾಗದಲ್ಲಿ ತಂಟೆ ತಕರಾರು ಬಂದಾಗ ದೇಶಭಕ್ತಿ ಹೆಸರಿನಲ್ಲಿ ಹಿಂದುತ್ವದ ಅಜೆಂಡಾವನ್ನು ಮುಂದಿಡುತ್ತಾ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತದೆ ಎಂದರು.
ದರ ಹೆಚ್ಚು ಮಾಡುವ ಮೂಲಕ ಸರ್ಕಾರ ಲೂಟಿ ಮಾಡಲು ಮುಂದಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಹೀಗೆ ಜನರನ್ನು ಕಿತ್ತು ತಿನ್ನುವ ಪ್ರವೃತ್ತಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು.ಜಾಗತಿಕವಾಗಿ ಕಚ್ಛಾ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ ಭಾರತದಲ್ಲಿ ಕಳೆದ 13 ದಿನಗಳಿಂದ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ ಇದರಿಂದ ಜನ ಸಾಮಾನ್ಯರನ್ನು ಸಂಕಷ್ಟಕ್ಕೆದೂಡುವ ಕೆಲಸವನ್ನು ಕೇಂದ್ರ ಮಾಡುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಬಿ ಬಾಸ್ಕರ್ ಮಾತನಾಡಿ ತಾಲ್ಲೂಕು ಘಟಕದಿಂದ ಗಾಲ್ಯಾನ ಗಡಿಯಲ್ಲಿ ವೀರಮರಣ ಹೊಂದಿದ
ಭಾರತೀಯ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸುತ್ತದೆ. ಗಡಿ ಕಾಯುವ ಯೋಧರ ಸುರಕ್ಷತೆಯ ವಿಚಾರದಲ್ಲಿ ಭಾಜಪ ಪಕ್ಷ ಲೋಪಗಳನ್ನು ಹೆಸರಿದೆ. ಚೀನಾದ ಸೈನಿಕರ ಜೊತೆ ಮುಖಾಮುಖಿಯಲ್ಲಿ ತೊಡಗಿದ್ದ ಯೋಧರಿಗೆ, ಸರಿಯಾದ ಶಸ್ತ್ರಾಸ್ತ್ರಗಳನ್ನು ನೀಡದೆ, ಯೋಧರ ಮರಣಕ್ಕೆ ನೇರ ಹೊಣೆಯಾಗಿದೆ, ದೇಶಭಕ್ತಿಯ ಮಾತನಾಡುವ ನೀವು, ಈ ಸಂಘರ್ಷದಲ್ಲಿ ಎಲ್ಲಿ ಅಡಗಿದೆ ನಿಮ್ಮ ದೇಶಭಕ್ತಿ. ಚೈನಾ ಸೇನಾಪಡೆಯ ದಾಳಿಗೆ ತಕ್ಕ ಉತ್ತರ ನೀಡಬೇಕು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ರಾಹುಲ್ ಗಾಂಧಿ ಜನ್ಮ ದಿನದ ಪ್ರಯುಕ್ತ ಕಾಫರ್ಡ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ವಿತರಿಸಿದರು. ಚೀನಾ ದಾಳಿಯಿಂದ ಮೃತಪಟ್ಟ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬೈರಮುಡಿ ಚಂದ್ರು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ ಸಿ ಸಣ್ಣಸ್ವಾಮಿ, ಪರಿಶಿಷ್ಟ ಜಾತಿ ರಾಜ್ಯ ಘಟಕದ ಬೈಕೆರೆ ದೇವರಾಜ್. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ತುಳಿಸಿ ಪ್ರಸಾದ್, ಎಸ್ ಸಿ ಘಟಕದ ಅಧ್ಯಕ್ಷ ದೊಡ್ಡಿರಯ್ಯ
ಅಲ್ಪ ಸಂಖ್ಯಾತ ಘಟಕದ ಮುಫೀಜ್, ಯುವ ಘಟಕದ ಅಧ್ಯಕ್ಷ ಸಫೀರ್ ಕಾರ್ಯದರ್ಶಿ ಭುವನಾಕ್ಷ ಮಾಧ್ಯಮ ಘಟಕದ ಪಾರುಕ್ ಸೇರಿದಂತೆ ಇನ್ನಿತರರು ಇದ್ದರು

Tags
ಹಾಸನ