ಆಲೂರು : ಮಾಜಿ ಪ್ರದಾನ ಮಂತ್ರಿ ಹೆಚ್.ಡಿ.ದೇವೇಗೌಡ ಅವರು ರಾಜ್ಯ ಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ತಾಲ್ಲೂಕು ಅದ್ಯಕ್ಷ ಕೆ.ಎಸ್.ಮಂಜೇಗೌಡರ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ನಂತರ ಅದ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ದೇವೇಗೌಡ ಒಂದು ಕುಗ್ರಾಮದಲ್ಲಿ ಜನಿಸಿ ಅವರು ಪುರಸಬೆ ಸದಸ್ಯರಾಗಿ,ಶಾಸಕರಾಗಿ, ರಾಜ್ಯದ ಮಂತ್ರಿಯಾಗಿ, ಮುಖ್ಯ ಮಂತ್ರಿಯಾಗಿ,ವಿರೋಧ ಪಕ್ಷದ ನಾಯಕರಾಗಿ ದೇಶದ ಪ್ರಧಾನ ಮಂತ್ರಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಅವರು ದೇಶ ಹಾಗೂ ರಾಜ್ಯದ ರಾಜಕಾರಣದಲ್ಲಿ ಎಷ್ಟೋ ಏಳುಬೀಳುಗಳನ್ನು ಕಂಡಿದ್ದಾರೆ ಅದರೂ ಯಾವುದಕ್ಕೂ ಎದೆಗುಂದದೆ ಮುನ್ನುಗುತ್ತಲೇ ಇದ್ದಾರೆ. ತುಮಕೂರು ಲೋಕಸಭಾ ಚುನಾವಣೆಯಲ್ಲಿ ಸೋತಾಗ ಅವರ ರಾಜಕಾರಣ ಮುಗಿದು ಹೋಯಿತು ಎನ್ನುವಷ್ಟರಲ್ಲಿ ಪುನಃ ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲಾ ನಾಯಕರು ಗಳ ಸಹಕಾರದಿಂದ ರಾಜ್ಯ ಸಭೆಗೆ ಆಯ್ಕೆ ಮಾಡಿದ್ದು ಗೌರವವನ್ನು ಹೆಚ್ಚಿಸಿದೆ ಎಂದರು.
ಜಿಲ್ಲಾ ಹೆಚ್ ಡಿ ಸಿ.ಸಿ.ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ,ಮಾಜಿ ಪ್ರದಾನಿ ದೇವೇಗೌಡರ ಕುಟುಂಬ ಒಂದು ರಾಜಕೀಯ ಕಾರ್ಖಾನೆ ಇದ್ದಂತೆ ಅವರು ದೇಶದಲ್ಲಿ ಎಷ್ಟೋ ರಾಜಕಾರಣಿಗಳನ್ನು ಸೃಷ್ಟಿಸಿದ್ದಾರೆ ಮತ್ತು ಬೆಳಸಿದ್ದಾರೆ, ಅವರು ಎಷ್ಟೋ ಚುನಾವಣೆಯಲ್ಲಿ ಸೋತಾಗ ಅವರ ರಾಜಕೀಯ ಮುಗಿದು ಹೋಯಿತು ಎನ್ನವಷ್ಟರಲ್ಲಿ ಪಿನಿಕ್ಸ್ ಪಕ್ಷಿಯಂತೆ ಎದ್ದು ಬರುತ್ತಾರೆ ದೇವೇಗೌಡ ಅವರಂತಹ ಮತ್ಸಧಿ ರಾಜಕಾರಣಿಗಳು ದೇಶದ ರಾಜಕಾರಣದಲ್ಲಿ ಸಕ್ರೀಯರಾಗಿರಬೇಕು ಅವರಿಗೆ ದೇವರು ಆರೋಗ್ಯ ಆಯಸ್ಸು ನೀಡಲಿ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಿ.ವಿ.ಲಿಂಗರಾಜು ಹಾಗೂ ನಟರಾಜ್ ನಾಕಲಗೊಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾದ ಸಿ.ವಿ.ಲಿಂಗರಾಜು ,ನಟರಾಜು ನಾಕಲಗೊಡು,ಪಿ.ಎಲ್.ನಿಂಗರಾಜ್,ಜೆಡಿ