ಬಹುಬಲಿ ದರ್ಶನ ಭಾಗ್ಯ

ಶ್ರವಣಬೆಳಗೊಳ:  ಶ್ರೀಕ್ಷೇತ್ರ ಶ್ರವಣಬೆಳಗೊಳದ ಶ್ರೀ ವಿಂಧ್ಯಗಿರಿ, ಶ್ರೀ ಚಂದ್ರಗಿರಿ ಹಾಗೂ ಊರಿನ ಜಿನಾಲಯಗಳನ್ನು ಜೂ. 8 ರಿಂದ ತೆರೆಯಲಾಗಿದ್ದು, ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
    ಸರ್ಕಾರದ ಮಾರ್ಗಸೂಚಿಗಳನ್ವಯ ಕರೊನಾ ವೈರಸ್ ಹರಡದಂತೆ ಯಾತ್ರಿಕರು ಮತ್ತು ಪ್ರವಾಸಿಗರು ಸೂಚನಾಫಲಕಗಳನ್ನು ಗಮನಿಸಿ, ಅದರಂತೆ ನಡೆದುಕೊಳ್ಳಬೇಕು.
      ಪ್ರಾತಃಕಾಲ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿದ್ದು, ಸೇವಾರ್ಥ ಅಭಿಷೇಕ ಪೂಜೆಗಳು, ವಸತಿ, ಉಪಹಾರ-ಭೋಜನ ಮತ್ತು ಡೋಲಿ ವ್ಯವಸ್ಥೆ ಇರುವುದಿಲ್ಲ ಎಂದು ಎಸ್.ಡಿ.ಜೆ.ಎಂ.ಐ.ಎಂ.ಸಿ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Post a Comment

Previous Post Next Post