ಆರೊಗ್ಯ ಸಿಬ್ಬಂದಿಗಳು ಮನೆ, ಮನೆಗೂ ಭೇಟಿ ನೀಡಿ ಡೆಂಗ್ಯೂ, ಕೊರೋನಾ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಪುರಸಭೆಯ ಮಾಜಿ ಸದಸ್ಯೆ ಹೆಚ್.ಎ.ವನಜಾಕ್ಷಿ ತಿಳಿಸಿದರು.
ಪಟ್ಟಣದ ದಾಸಗೌಡರ ಬಿದಿಯಲ್ಲಿ ಆರೋಗ್ಯ ಸಹಾಯಕಿಯರು ಡೆಂಗ್ಯೂ ಲಾರ್ವಾ ಸಮೀಕ್ಷೆ ಕೈಗೊಂಡು ಜೊತೆಗೆ ಕೊರೊನಾ ವೈರಸ್ ಬಗ್ಗೆ ಕರಪತ್ರ ನೀಡಿ, ಮಾಸ್ಕ್ ಬಗ್ಗೆ ಮಾಹಿತಿ ನೀಡುತ್ತಿದ್ದ ಸಮಯದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡು ಮಾತನಾಡಿದರು. ಹಳೆಕೋಟೆ ಪ್ರಾ.ಆ.ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಆರ್.ಬಿ.ಪುಟ್ಟೇಗೌಡ ಸಮೀಕ್ಷೆ ಮಾಡುತ್ತಿರುವುದನ್ನು ಪರಿಶೀಲಿಸಿದರು. ಕಿ.ಮ.ಆ.ಸಹಾಯಕಿಯರಾದ ಪಾರ್ವತಿ, ಪಲ್ಲವಿ, ಶೃತಿ ಹಾಗೂ ಬಡಾವಣೆಯ ಮಹಿಳೆಯರು ಇದ್ದರು.
Tags
ಹೊಳೆನರಸೀಪುರ