ಮರಳು ಅಡ್ಡೆಗಳ ಮೇಲೆ ಡಿವೈಎಸ್ಪಿ ಗೋಪಿ ನೇತೃತ್ವದಲ್ಲಿ ದಾಳಿ

ಆಲೂರು : ಅನದಿಕೃತವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡೆಗಳ ಮೇಲೆ ಡಿವೈಎಸ್ಪಿ ಗೋಪಿ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಮರಳು ತುಂಬುತ್ತಿದ್ದ ಟ್ರ‍್ಯಾಕ್ಟರನ್ನು ವಶಪಡಿಸಿಕೊಂಡು ಒಬ್ಬನನ್ನು ವಶಕ್ಕೆ ಪಡೆದಿರುವ ಘಟನೆ ಆಲೂರು ತಾಲೂಕಿನಲ್ಲಿ ನಡೆದಿದೆ.
ಆಲೂರು ತಾಲೂಕಿನ ಕುಂದೂರು ಹೋಬಳಿ ಕರಿಗೌಡನಹಳ್ಳಿ ಗ್ರಾಮದ ಸಮೀಪ ಹರಿಯುತ್ತಿರುವ ಯಗಚಿ ನದಿಯಲ್ಲಿ ಅಕ್ರಮವಾಗಿ ಸುಮಾರು ಮುರ್ನಾಲ್ಕು ಕಡೆ ೨೫೦ ಕ್ಕೂ ಹೆಚ್ಚು ಟ್ರ‍್ಯಾಕ್ಟರ್ ಮರಳನ್ನು ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಆದರಿಸಿ ಸಕಲೇಶಪುರ ಡಿವೈಎಸ್ಪಿ ಗೋಪಿ  ಮತ್ತವರ ತಂಡ ಸ್ಥಳಕ್ಕೆ ಬೇಟಿ ನೀಡಿ ಅಕ್ರಮವಾಗಿ ಮರಳು ತುಂಬುತ್ತಿದ್ದ ಟ್ರ‍್ಯಾಕ್ಟರ್ ಸಮೇತ ಒಬ್ಬರನ್ನು ಬಂದಿಸಿದರು.
ದೂರವಾಣಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವಿಷಯಯ ತಿಳಿಸಿದ ಅವರು ನಂತರ ಆಲೂರು ತಾಲೂಕು ತಹಸೀಲ್ದಾರ್ ಶಿರೀನ್‌ತಾಜ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು  ಗ್ರಾಮದ ಸುತ್ತಮುತ್ತ ಆಕ್ರಮವಾಗಿ ಸಂಗ್ರಹಿಸಿಟ್ಟಿರುವ ಮರಳಿನ ಬಗ್ಗೆ ಪರಿಶೀಲಿಸಿನೆ ನಡೆಸಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.
ಹಲವು ದಿನಗಳಿಂದ ಈ ಭಾಗದಲ್ಲಿ ಅಕ್ರಮವಾಗಿ ಮರಳು ಧಂದೆ ನಡೆಯುತ್ತಿತ್ತು ಎಂದು ತಿಳಿದು ಬಂದಿದ್ದು ಇನ್ನಾದರೂ ಇದಕ್ಕೆ ಇದಕ್ಕೆ ಕಡಿವಾಣ ಬಿಳುವುದೇನೋ ಕಾದು ನೋಡಬೇಕಾಗಿದೆ.
ಪೋಟೋಕ್ಯಾಪ್‌ಕ್ಷನ್ ಜೂನ್ ೦೪ ಎ ಎಲ್ ಆರ್ ಪಿ ೦೧
ಆಲೂರು ತಾಲೂಕಿನ ಕುಂದೂರು ಹೋಬಳಿ ಕರಿಗೌಡನಹಳ್ಳಿ ಗ್ರಾಮದ ಸಮೀಪ ಹರಿಯುತ್ತಿರುವ ಯಗಚಿ ನದಿಯಲ್ಲಿ ಅಕ್ರಮವಾಗಿ ಸುಮಾರು ಮುರ್ನಾಲ್ಕು ಸಂಗ್ರಹಿಸಲ್ಪಟ್ಟ ಮರಳನ್ನು ಸಕಲೇಶಪುರ ಡಿವೈಎಸ್ಪಿ ಗೋಪಿ  ವಶಕ್ಕೆ ಪಡೆದಿದ್ದಾರೆ.

Post a Comment

Previous Post Next Post