ಹಾಸನ: ಹಾಸನ ತಾಲೂಕಿನ ಕುದುರುಗುಂಡಿ ವ್ಯಾಪ್ತಿಯ ಲಿಂಗರಸನಹಳ್ಳಿ ಗ್ರಾಮದಲ್ಲಿ ಪಾಳುಬಿದ್ದಿದ್ದ ಕಲ್ಯಾಣಿಯನ್ನು ಹಸಿರುಭೂಮಿ ಪ್ರತಿಷ್ಠಾನ, ಕುದುರುಗುಂಡಿ ಪಂಚಾಯಿತಿ ಹಾಗೂ ಊರಿನ ಗ್ರಾಮಸ್ಥರು ಸಹಕಾರದೊಂದಿಗೆ ಪುನಶ್ಚೇತನಗೊಳಿಸಲಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಕಲ್ಯಾಣಿಗಳಿದ್ದು, ಅವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದರೆ, ಇನ್ನು ಕೆಲವು ನಿರ್ಲಕ್ಷ್ಯಕ್ಕೊಳಗಾಗಿ ಅವಸಾನ ಅಂಚಿಗೆ ತಲುಪಿದ್ದವು. ಹಿಂದಿನ ಕಾಲದಲ್ಲಿ ಪ್ರಮುಖ ನೀರಿನ ಸೆಲೆಯಾಗಿದ್ದ ಈ ಕಲ್ಯಾಣಿಗಳು ಕಾಲ ಕ್ರಮೇಣ ಜನ ಅದರತ್ತ ನಿರಾದಾರ ತೋರಿದ ಕಾರಣ ಅವುಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗದೆ ಇದ್ದುದರಿಂದ ಅವುಗಳು ಹೂಳು ತುಂಬಿ, ಗಿಡಗಂಟಿಗಳು ಬೆಳೆದು ಮುಚ್ಚಿಹೋಗಿದ್ದವು.ಅಂತರ್ಜಲ ಕಾಪಾಡುವಲ್ಲಿ ಮತ್ತು ನೀರನ್ನು ಹಿಡಿದಿಡುವಲ್ಲಿ ಕಲ್ಯಾಣಿಗಳ ಮಹತ್ವದ ಬಗ್ಗೆ ಅರಿತ ಹಾಸನದ ಹಸಿರುಭೂಮಿ ಪ್ರತಿಷ್ಠಾನವು ಎರಡು ವರ್ಷಗಳ ಹಿಂದೆಯೇ ಹೊಸದೊಂದು ಕಾರ್ಯಕ್ರಮವನ್ನು ಹುಟ್ಟು ಹಾಕಿತು.
Tags
ಹಾಸನ