ಸಕಲೇಶಪುರದಲ್ಲಿ ಹೋಂ ಸ್ಟೇ ಮುಚ್ಷಲು ತೀರ್ಮಾನ


ಹಾಸನ: ಹಾಸನದಲ್ಲಿ ನಿನ್ಮೆ ಜಿಲ್ಲೆಯಲ್ಲಿ 31 ಪಾಸಿಟಿವ್ ಕೇಸ್ ಹಿನ್ನೆಲೆ ಇಂದು‌ ಅಧಿಕಾರಿಗಳು, ಜನಪ್ರತಿನಿಧಿ ಗಳೊಂದಿಗೆ ತುರ್ತು ಸಭೆ ನಡೆಸಲಾಗಿ ಸಕಲೇಶಪುರದಲ್ಲಿ ಹೋಂ ಸ್ಟೇ ಮುಚ್ಷಲು ತೀರ್ಮಾನಮಾಡಿದ್ದು ಹಾಸನದಲ್ಲಿ ‌ಸಚಿವ ಗೋಪಾಲಯ್ಯ ಹೇಳಿಕೆ.
ಹಾಲಿ 238 ಜನ ಗುಣಮುಖರಾಗಿ  ಬಿಡುಗಡೆಯಾಗಿದ್ದು 120 ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ 1795 ಸ್ಯಾಂಪಲ್‌ ಸಂಗ್ರಹಿಸಲಾಗಿದ್ದು ಇನ್ನೂ‌ ಹೆಚ್ಚು ಮಾಡಲು ಸೂಚನೆ ನೀಡಿದ್ದು ಮಂಗಳವಾರ ಜಿಲ್ಲೆ ಎಲ್ಲಾ  ಸವಿತಾ ಸಮಾಜದವರ ಟೆಸ್ಟ್ ಮಾಡಿಸಲು ತಿಳಿಸಿದ್ದಾರೆ.

ಮುಂಜಾಗ್ರತೆ ಹೇಗೆ ವಹಿಸಬೇಕು ಎಂದೂ ಚರ್ಚೆ ಮಾಡಿ ಆಸ್ಪತ್ರೆಯ ಬಾತ್ ಕ್ಲೀನ್ ಮಾಡಲು, ಗುಣಮಟ್ಟದ ಆಹಾರ ನೀಡಲು ಸೂಚನೆ ನೀಡಿದ್ದು ಊಟ ತಿಂಡಿ ಚೆನ್ನಾಗಿ ನೀಡಲಾಗುತ್ತಿದೆ.

ಮುಂದೆ ಖಾಸಗಿ‌ ಆಸ್ಪತ್ರೆ ಸಹಕಾರ ಬಳಸಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಕೊರೊನಾ‌ ಹೆಚ್ಚಳ ಹಿನ್ನೆಲೆ 200 ಬೆಡ್ ನ  ಹೆಚ್ಚುವರಿ ಆಸ್ಪತ್ರೆ ಸಿದ್ಧವಿಟ್ಟುಕೊಳ್ಳಲು ಡಿಸಿಗೆ ಸೂಚನೆ .

ಜಿಲ್ಲೆಯಲ್ಲಿ ಕಳಪೆ ತೊಗರಿಬೇಳೆ ವಿತರಣೆ ಆರೋಪ . ಡಿಸಿ ಅವರು ಭೇಟಿ ನೀಡಿ ಪರಿಶೀಲಿಸಲು ಸಚಿವರ ಸೂಚನೆ. ಹಲವೆಡೆ ತೊಗರಿಬೇಳೆ ಚೆಕ್ ಮಾಡಲಾಗಿದೆ  ಮತ್ತೊಮ್ಮೆ ಚೆಕ್  ಮಾಡಿ ವರದಿ ನೀಡಲು ಡಿಸಿಗೆ ಗೋಪಾಲಯ್ಯ ಆದೇಶ

ದೂರು ಬಂದ ಕಡೆಗಳಿಗೆ ಭೇಟಿ ಕೊಟ್ಟಿದ್ದೇನೆ, ಮುಂದೆಯೂ ಕೊಡುತ್ತೇನೆ. ಸಕಲೇಶಪುರದಲ್ಲಿ ಹೋಂ ಸ್ಟೇ ಮುಚ್ಷಲು ತೀರ್ಮಾನ

Post a Comment

Previous Post Next Post