ಹಾಸನ.ಜೂ.17:- ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ರಾತ್ರಿ ಹಗಲು ನಿರಂತರವಾಗಿ ರಜೆಪಡೆಯದೆ ಕಾರ್ಯ ನಿರ್ವಹಿಸಿದರ ಪರಿಣಾಮವಾಗಿಯೆ ಹಾಸನ ಸಾಕಷ್ಠು ದಿನಗಳ ಕಾಲ ಹಸಿರುವಲಯವಾಗಿತ್ತು ಈ ಸಂದರ್ಭದಲ್ಲಿ ಸಮುದಾಯಕ್ಕೆ ಸೊಂಕು ಹರಡದ ರೀತಿಯಲ್ಲಿ ಇಂದಿಗೂ ಇತರೆ ಇಲಾಖೆಗಳೊಂದಿಗೆ ಉತ್ತಮ ಸಂಪರ್ಕದೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾದದ್ದು ಎಂದು ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಛೇರ್‍ಮನ್ ಹೆಚ್.ಪಿ ಮೋಹನ್ ರವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯ ಬಿ,ಸಿ ರಾಯ್ ಸಭಾಂಗಣದಲ್ಲಿ ಇಂದು ಆರೋಗ್ಯ ಇಲಾಖೆಯ ನೌಕರರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನೀಟೈಸರ್ ವಿತರಣೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಏರ್ಪಡಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಸತೀಶ್ ಕುಮಾರ್ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಇಲಾಖೆ ನೌಕರರು ರಾತ್ರಿಹಗಲು ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ ನಮ್ಮ ಇಲಾಖೆಯ ನೌಕರರೊಂದಿಗೆ ಇತರೆ ಇಲಾಖೆಯ ಸಹಕಾರ ಅತ್ಯುತ್ತಮವಾಗಿದೆ ಅದ್ದರಿಂದಲೆ ನಾವು ಸಾಕಷ್ಟು ದಿನಗಳ ಕಾಲ ಹಸಿರುವಲಯದಲ್ಲಿದ್ದವು ಆದರೆ ಬದಲಾದ ಸಮಯದಲ್ಲಿ ಜಿಲ್ಲೆಗೆ ಇತರೆ ಪ್ರದೇಶಗಳಿಂದ ಬಂದ ಜನರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹಲವರಲ್ಲಿ ಪತ್ತೆಯಾಗಿದೆ ನಮ್ಮಗಳ ಮುಂದೆ ಇಂದು ಸಮುದಾಯಕ್ಕೆ ಸೋಂಕು ಹರಡುವುದನ್ನು ನಿಯಂತ್ರಿಸುವ ದೊಡ್ಡ ಸವಾಲಿದೆ ಆ ನಿಟ್ಟಿನಲ್ಲಿ ಇಲಾಖೆ ಸನ್ನದ್ದವಾಗಿದ್ದು ನಮ್ಮಗಳ ಗುರಿ ಹಾಸನ ಜಿಲ್ಲೆಯನ್ನು ಕೊರೊನಾ ಮುಕ್ತವಾಗಿ ಮಾಡುವುದು ಆಗಿದೆ ಆಗಾಗಬೇಕಾದರೆ ನಮ್ಮಗಳೊಂದಿಗೆ ಸಮುದಾಯದ ಭಾಗವಹಿಸುವಿಕೆ ಅತಿಮುಖ್ಯವಾಗುತ್ತದೆ ಈ ನಿಟ್ಟಿನಲ್ಲಿ ಸಾರ್ವಜನಿಕರು ಕೊರೊನಾ ಬಗ್ಗೆ ಭಯಪಡದೆ ಎಚ್ಚರಿಕೆ ವಹಿಸಿ ಇತರರಿಗೂ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಏಡ್ಸ್ & ಕ್ಷಯ ನಿಯಂತ್ರಾಣಾಧಿಕಾರಿಗಳಾದ ಡಾ|| ನಾಗೇಶ್ ಆರಾದ್ಯ ಯಾವುದೇ ಒಂದು ದೊಡ್ಡಮಟ್ಟದ ಆರೋಗ್ಯ ಸಮಸ್ಯೆಗಳನ್ನ ಒಂದು ಇಲಾಖೆಯಿಂದ ನಿಯಂತ್ರಿಸಲು ಸಾದ್ಯವಿಲ್ಲಾ ಎಲ್ಲಾ ಇಲಾಖೆಗಳ ಸಹಕಾರವಿದ್ದರೆ ಮಾತ್ರ ಸಾದ್ಯ ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರನೂ ಸಹ ಪ್ರಮುಖ ಪಾತ್ರ ವಹಿಸುತ್ತದೆ ಈ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಲಾಕ್ ಡೌನ್ ಸಂದರ್ಭದಲ್ಲಿ ನಿರಂತರವಾಗಿ ಸಮುದಾಯದವರೊಂದಿಗೆ ಸಂಪರ್ಕದೊಂದಿಗಿದ್ದು ಅವಶ್ಯಕತೆ ಇರುವ ಜನರಿಗೆ ಸಹಾಯ ಅಸ್ತ ಚಾಚಿದೆ ಅದಲ್ಲದೆ ನಮ್ಮ ಇಲಾಖೆಯೊಂದಿಗೆ ನಿರಂತರವಾಗಿ ಕೈ ಜೋಡಿಸಿ ನಿಯಂತ್ರಣಾ ಕಾರ್ಯಕ್ರಮಗಳಿಗೆ ಸಹಕರಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು .
ಕಾರ್ಯಕ್ರಮದಲ್ಲಿ ಹೆಚ್,ಐ.ವಿ/ಏಡ್ಸ್ ನಿಯಮತ್ರಣಾ ಮತ್ತು ಕ್ಷಯ ನಿಯಂತ್ರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನೀಟೈಸರ್ ವಿತರಣೆ ಮಾಡಲಾಯಿತು.
ರೆಡ್ ಕ್ರಾಸ್ ಸಂಸ್ಥೆಯ ನಿರ್ಧೇಕರುಗಳಾದ ಅಮ್ಜದ ಖಾನ್,ಕೆ.ಟಿ ಜಯಶ್ರಿ, ಚಂದನ್, ಕೆಸ್ಯಾಪ್ಸ್ ಬೆಂಗಳೂರಿನ ನಂದೀಶ್ ಜಿಲ್ಲಾ ಆಸ್ಪತ್ರೆ ರಕ್ತ ನಿಧಿಯ ವೈದ್ಯಾಧಿಕಾರಿ ಡಾ|| ನಾಗಲಕ್ಷ್ಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯ ಡ್ಯಾಪ್ಕ್ಯೂ ಮೇಲ್ವಿಚಾರಕರಾದ ರವಿಕುಮಾರ್ ಮತ್ತಿತರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Tags
ಹಾಸನ