ಹಾಸನ.ಜೂ.17:- ಕೋವಿಡ್-19 ಲಾಕ್ ಡೌನ್ ವೇಳೆ ಸಂಕ್ಷಕ್ಕೆ ಸಿಲುಕಿದ ಕುಟುಂಬಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ ಆರ್ಥಿಕ ನೆರವು ಪ್ಯಾಕೇಜ್ ಸಕಾಲದಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಹೂ, ಹಣ್ಣು ತರಕಾರಿ ಬೆಳೆಗಾರರಿಗೆ ಘೋಷಿಸಿದ ಪರಿಹಾರದ ಪ್ಯಾಕೇಜ್ ಹಾಗೂ ಕಟ್ಟಡ ಕಾರ್ಮಿಕರು, ಅಗಸ ಮತ್ತು ಸವಿತಾ ಸಮಾಜಕ್ಕೆ ಬಿಡುಗಡೆ ಮಾಡಿರುವ ಅನುದಾನವೂ ಆದಷ್ಟು ಬೇಗ ಎಲ್ಲಾ ಅರ್ಹರಿಗೆ ತಲುಪಬೇಕು. ನಿಖರವಾಗಿ ಸಮೀಕ್ಷೆ ಮಾಡಿ, ವ್ಯಾಪಕ ಪ್ರಚಾರ ನೀಡಿ ಯಾರೂ ಕೈಬಿಟ್ಟು ಹೋಗದಂತೆ ನಿಗಾ ವಹಿಸಿ ಎಂದು ಹೇಳಿದರು.
ವಿಧವಾ ವೇತನ, ವೃದ್ಧಾಪ್ಯ ವೇತನ ವಿಕಲ ಚೇತನರೂ ಸೇರಿದಂತೆ ಎಲ್ಲಾ ರೀತಿಯ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಸಿಕ ಪಿಂಚಣಿ ನೀಡಬೇಕು ಎಂದು ಸಚಿವರು ಸೂಚಿಸಿದರು.
ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇತರೆ ರೋಗಿಗಳಿಗೂ ಹೆಚ್ಚಿನ ಚಿಕಿತ್ಸೆ ದೊರೆಯುವಂತೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದ ಸಚಿವರು 108 ಆಂಬುಲೆನ್ಸ್ ವಾಹನಗಳು ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯದಂತೆ ನಿಯಂತ್ರಿಸಿ ಎಂದು ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳು ಪರಸ್ಪರ ಪೂರಕವಾಗಿ ಸಮನ್ವಯ ಸಾಧಿಸಿ ಕೆಲಸ ಮಾಡಿ ಎಂದು ಅವರು ಮುಂದಿರುವ ಮುಂಗಾರು ಹಂಗಾಮಿನಲ್ಲಿ ಕೃಷಿ ತೋಟಗಾರಿಕೆ ಬೆಳೆಗಳ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗಬಾರದು ಅಲ್ಲದೆ ಅತಿವೃಷ್ಟಿ ಹಾನಿ, ಪ್ರಕೃತಿ ವಿಕೋಪ ನಿಯಂತ್ರಣಗಳ ಬಗ್ಗೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತೆ ವಹಿಸಿ ಎಂದರು.
ಶಾಸಕರಾದ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಲಾಗುವುದು. ಜಲ್ಲೆಯಲ್ಲಿರುವ ಕೈಗಾರಿಕೆಗಳ ಸಿ.ಎಸ್.ಆರ್ ನಿಧಿಯನ್ನು ಆಶಾ ಕಾರ್ಯಕರ್ತರ ಪ್ರೋತ್ಸಾಹ ವಿತರಣೆ ಬಳಸಿ ಎಂದರು.
ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಲೂಗಡ್ಡೆ ಬೆಳೆಗಾರರಿಗೆ ಹಾಗೂ ಕೋವಿದ್-19 ಲಾಕ್ ಡೌನ್ ವೇಳೆ ನಷ್ಟ ಅನುಭವಿಸಿದ ಕೃಷಿ, ತೋಟಗಾರಿಕಾ ಬೆಳೆಗಾರರಿಗೆ ಆರ್ಥಿಕ ನೆರೆವು ಒದಗಿಸಿ ಎಂದು ರೇವಣ್ಣ ಅವರು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳು ಪರಿಣಾಮಕಾರಿ ಅನುಷ್ಠಾನ ಅಗಬೇಕು ಜಿಲ್ಲಾ ಪಂಚಾಯತ್‍ಗೆ ಕುಡಿಯುವ ನೀರಿಗಾಗಿ ಬಿಡುಗಡೆ ಅಗಿರುವ 6ಕೋಟಿ ಅನುದಾನ ಎಲ್ಲಾ ತಾಲ್ಲೂಕಿಗೆ ಸಮಾನವಾಗಿ ಹಂಚಿಕೆಮಾಡಿ ಕಾಮಗಾರಿ ಪ್ರಾರಂಭ ಮಾಡಬೇಕು. ಸೋಮನ ಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಪ್ರಾರಂಭ ಅಗಬೇಕಿದ್ದ ತೋಟಗಾರಿಕಾ ಕಾಲೇಜು ಮಂಜುರಾತಿ ಮಂದುವರೆಸಿ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದುರು.
ಎಲ್ಲಾ ತಾಲ್ಲೂಕುಗಳಲ್ಲಿ ಸುಸಜ್ಜಿತ ಸರ್ಕಾರಿ ಪಬ್ಲಿಕ್ ಶಾಲೆ ಪ್ರಾರಂಭಿಸಲು ಮಂಜಾರಾತಿ ನೀಡಬೇಕು. ಪದವಿ ಕಾಲೇಜುಗಳ ಸ್ಥಳಾಂತರ ಕೈ ಬಿಟ್ಟು ಅವುಗಳನ್ನು ಬಲ ಪಡಿಸಬೇಕು ಅಲ್ಲದೆ, 108 ಅಂಬುಲೆನ್ಸ್ ವಾಹನಗಳು ಖಾಸಗಿ ಆಸ್ಪತ್ರೆ ಗೆ ನೆರವಾಗುತ್ತಿದ್ದು ಅದರಮೇಲೆ ಸಂಪೂರ್ಣ ನಿಯಂತ್ರಣ ಮಾಡಬೇಕು ಎಂದು ರೇವಣ್ಣ ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಕೋವಿಡ್-19 ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆ, ಕೃಷಿ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಿಂದ ಫಲಾನುಭವಿಗಳಿಗೆ ಪ್ಯಾಕೇಜ್ ನೀಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಅಧಿಕಾರಿಗಳು ಪ್ರಚಾರ ಮಾಡಿ ಎಲ್ಲರೂ ಆದಷ್ಟು ಬೇಗ ನೊಂದಣಿ ಮಾಡಿಕೊಳ್ಳುವಂತೆ ಪ್ರಚಾರ ಮಾಡಿ ಎಂದು ಎಂದರು.
ಜಂಟಿ ಕೃಷಿ ನಿರ್ದೇಶಕರಾದ ಮಧುಸೂಧನ್ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಕೃಷಿ ತೋಟಗಾರಿಕೆ ಬೆಳೆಗಳ ಪರಿಹಾರ ವಿತರಣೆ ಬಗ್ಗೆ ವಿವರಿಸಿದರು. ಕಾರ್ಮಿಕಾಧಿಕಾರಿ ರಾಮಕೃಷ್ಣ ಅವರು ಕಟ್ಟಡ ಕಾರ್ಮಿಕರು, ಅಗಸರು ಮತ್ತು ಸವಿತಾ ಸಮಾಜ ಹಾಗೂ ವಾಹನ ಚಾಲಕರ ಪರಿಹಾರ ವಿತರಣೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಂ, ಉಪ ವಿಭಾಗಾಧಿಕಾರಿಗಳಾದ ಡಾ|| ನವೀನ್ ಭಟ್ ಮತ್ತು ಗಿರೀಶ್ ನಂದನ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣ ಮೂರ್ತಿ, ನಗರಾಭಿವೃದಗ್ಧಿ ಕೋಷದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಹಾಗೂ ಮತ್ತಿತರ ಇಲಾಖಾ ಅಧಿಕಾರಿಗಳು ಹಾಜರಿದ್ದರು.
Tags
ಹಾಸನ