UPSC ಇಂದ 413 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ: ಅರ್ಜಿ ಆಹ್ವಾನ



ಯೂನಿಯನ್ ಪಬ್ಲಿಕ್ ಸರ್ವೀಸ್‌ ಕಮಿಷನ್ ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಮತ್ತು ನಾವಲ್ ಅಕಾಡೆಮಿ 2020 ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗಿದೆ...
 
upsc nda na 2020 notificationupsc nda na 2020 examination
ಯೂನಿಯನ್ ಪಬ್ಲಿಕ್ ಸರ್ವೀಸ್‌ ಕಮಿಷನ್ ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಮತ್ತು ನಾವಲ್ ಅಕಾಡೆಮಿ 2020 ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಗಳ ಮೂಲಕ ಒಟ್ಡು 413 ಹುದ್ದೆಗಳ ಭರ್ತಿ ಉದ್ದೇಶ ಹೊಂದಲಾಗಿದೆ. ಈ ಹುದ್ದೆಗಳ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಹತೆಗಳ ಬಗ್ಗೆ ಮಾಹಿತಿ ತಿಳಿದು ಆನ್‌ಲೈನ್ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು 370
ರಾಷ್ಟ್ರೀಯ ನೌಕಾ ಅಕಾಡೆಮಿ ಹುದ್ದೆಗಳು 43
ಪರೀಕ್ಷೆ ದಿನಾಂಕ ಸೆಪ್ಟೆಂಬರ್ 06, 2020
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ಈ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಕೇವಲ ಅವಿವಾಹಿತರು ಮಾತ್ರ ಅರ್ಹರು.
- ಜುಲೈ 02, 2001 ಮತ್ತು ಜುಲೈ 01, 2004 ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆಗೆ 3 ವಾರಗಳ ಮುಂಚಿತವಾಗಿ ಪ್ರವೇಶ ಪತ್ರವನ್ನು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ವೆಬ್‌ಸೈಟ್‌ ವಿಳಾಸ upsconline.nic.in ಗೆ ಭೇಟಿ ನೀಡಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್‌ ಮಾಡಬಹುದು.
ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಗಳಿಗೆ ನೆಗೆಟಿವ್‌ ಮಾರ್ಕಿಂಗ್ ಇರುತ್ತದೆ. ಪ್ರಶ್ನೆ ಪತ್ರಿಕೆ ಆಬ್ಜೆಕ್ಟಿವ್ ಮಾದರಿಯಲ್ಲಿರುತ್ತದೆ.

Post a Comment

Previous Post Next Post