ಹಾಸನ: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಕಾಯಂ ಮಾಡಿಕೊಳ್ಳಬೇಕು ಎಂದು ಒತ್ತಾಂಯಿಸಿ ಆರೋಗ್ಯ ಸಹಾಯಕಿಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ವಾರಗಟ್ಟಲೇ ಮನೆ ಹಾಗೂ ಕುಟುಂಬ ಸದಸ್ಯರಿಂದ ದೂರವಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿz್ದÉೀವೆ. ಆದರೆ ಸರ್ಕಾರ ಆಶಾ ಕಾರ್ಯಕರ್ತೆಯರು ಮಾತ್ರ ಪ್ರಾಮಾಣಿಕ ಸೇವಕರೆಂದು ಬಿಂಬಿಸಿ ನಮ್ಮನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಕರ್ತವ್ಯ ವೇಳೆ ಕರೊನಾ ತಗುಲಿದರೆ ನಮ್ಮ ಆರೈಕೆಗೆ ಯಾರೂ ಬರುವುದಿಲ್ಲ. ಸೇವೆಗೆ ಸೇರಿದಾಗಿನಿಂದ ಕೇವಲ 8,500 ರೂ. ಸಂಬಳ ಪಡೆಯುತ್ತಿz್ದÉೀವೆ. ಕಾಯಂ ವೈದ್ಯರಷ್ಟೇ ಶ್ರಮವಹಿಸಿ ಕೆಲಸ ಮಾಡುವ ನಮಗೂ ಇತರ ಸೌಲಭ್ಯ ಕಲ್ಪಿಸಬೇಕು. ಕೋವಿಡ್-19 ವೇಳೆ ವಿಶೇಷ ಸೇವೆ ಸಲ್ಲಿಸಿರುವುದಕ್ಕೆ ಸಹಾಯಧನ ಘೋಷಿಸಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರಿಗೆ ಮನವಿ ಸಲ್ಲಿಸಿದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಸೌಮ್ಯ, ಬೃಂದಾ, ಚೈತ್ರಾ, ರೋಹಿನ್ ತಾಜ್, ಪೂಜಾ ಹಾಗೂ ಇತರರಿದ್ದರು.
Tags
ಹಾಸನ