ನಾಮಪತ್ರ ತಿರಸ್ಕೃತ: ಚುನಾವಣೆ ಮುಂದಕ್ಕೆ

 ಬೇಲೂರು: ಶುಕ್ರವಾರ ನಡೆಯಬೇಕಿದ್ದ ತಾಲೂಕು ಪಂಚಾಯತಿ ಉಪಾಧ್ಯಕ್ಷರ ಚುನಾವಣೆಯಲ್ಲಿ ನಾಮಪತ್ರ ತಿರಸ್ಕೃತ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ತಿಳಿಸಿದರು.
ಈಗಾಗಲೇ ತಾಲೂಕು ಪಂಚಾಯಿತಿಯಲ್ಲಿ ೧೭ ಜನರ ಸದಸ್ಯರಿದ್ದು ಜೆಡಿಎಸ್ ಪಕ್ಷ ಅಧಿಕಾರ ನೆಡೆಸಿಕೊಂಡು ಬರುತ್ತಿದ್ದು,ಉಪಾಧ್ಯಕ್ಷರ ಚುನಾವಣೆಗೆ ಪರಿಶಿಷ್ಠ ಜಾತಿಗೆ ಮೀಸಲಾಗಿದ್ದ,ಉಪಾಧ್ಯಕ್ಷರ ಚುನಾವಣೆಗೆ ಮೊದಲ ಬಾರಿಗೆ ತೀರ್ಥಮ್ಮ ,ಎರಡನೇ ಬಾರಿಗೆ ಕಮಲಮ್ಮ,ಮೂರನೇ ಬಾರಿಗೆ ಜಮುನಾ ಇವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.ಜಮುನಾ ಅಣ್ಣಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಹಕ್ಕಿಪಿಕ್ಕಿ ಜನಾಂಗದ  ಮಹಿಳಾ ಸದಸ್ಯೆ ಸಂಗೀತಾ ಲೋಕ್ ಕುಮಾರ್ ಉಪಾಧ್ಯಕ್ಷೆ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು.ಆದರೆ ಚುನಾವಣೆ ಅಧಿಕಾರಿಗಳು ಮೀಸಲಾತಿಯಲ್ಲಿ ಎಸ್ಸಿಗೆ ಮೀಸಲಾದ ಸ್ಥಾನಕ್ಕೆ ಎಸ್ಟಿ ಮಹಿಳೆ ಸಲ್ಲಿಸಿರುವುದರಿಂದ ನಾಮಪತ್ರ ತಿರಸ್ಕೃತಗೊಂಡಿದೆ .

ಚುನಾವಣೆ ಅಧಿಕಾರಿ ಗಿರೀಶ್ ನಂದನ್ ಮಾತನಾಡಿ ಪಂಚಾಯತ್ ರಾಜ್  ಆರ್ ಡಿ ಪಿ ಆ್ಯಕ್ಟ್ ಪ್ರಕಾರ ಪರಿಶಿಷ್ಠ ಜಾತಿಗೆ ಮೀಸಲಿದ್ದ ಉಪಾಧ್ಯಕ್ಷರಿಗೆ ಪರಿಶಿಷ್ಠ ಪಂಗಡದ ಮಹಿಳೆ ಅರ್ಜಿ ಸಲ್ಲಿಸಿದ್ದರಿಂದ ಚುನಾವಣೆಗೆ ಅವಕಾಶ ಇಲ್ಲದೆ ಇರುವುದರಿಂದ ಅರ್ಜಿಯನ್ನು ವಜಾಗೊಳಿಸಲಾಗಿದೆ.ಚುನಾವಣೆಯ ಮುಂದಿನ ದಿನಾಂಕವನ್ನು ತಿಳಿಸಲಾಗುವುದು  ಎಂದು ತಿಳಿಸಿದರು.
 ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡ ನಂತರ ಮಾತನಾಡಿದ ತಾಪಂ ಸದಸ್ಯೆ ಸಂಗೀತ ಲೋಕ್ ಕುಮಾರ್ ನಾವು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರು ನಾನೂ ಸಹ ಉಪಾಧ್ಯಕ್ಷೆ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರಿಂದ ನಮ್ಮ ಮುಖಂಡರ ಆದೇಶದ ಮೇರೆಗೆ ಉಪಾಧ್ಯಕ್ಷೆ ಸ್ಥಾನಕ್ಕೆ ಅರ್ಜಿ ಹಾಕಿದ್ದೆ ಆದರೆ ಮೀಸಲಾತಿ ಬಗ್ಗೆ ತಿಳಿಯದಿದ್ದರಿಂದ ನನ್ನ ಅರ್ಜಿ ವಜಾಗೊಂಡಿದ್ದು,ನನಗೆ ತುಂಬಾ ನೋವಾಗಿದೆ.ಈ ಬಗ್ಗೆ ನಮ್ಮ ಮುಖಂಡರ ಜೊತೆ ಚರ್ಚಿಸಿ ಮುಂದಿನ ನಡೆ ಬಗ್ಗೆ ತಿಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಇಂದಿರಾ ರವಿಕುಮಾರ್,ಸದಸ್ಯರಾದ ಅಶ್ವಥ್,ಸುನೀತಾ, ಕಮಲಮ್ಮ, ಶಶಿಕುಮಾರ್, ಮಂಜುನಾಥ್, ಸೋಮಯ್ಯ,ಸುಮಪರಮೇಶ್,ತಾಪಂ ಕಾರ್ಯನಿರ್ವಹಣಾ ಅಧಿಕಾರಿ ರವಿಕುಮಾರ್ ಹಾಜರಿದ್ದರು.

Post a Comment

Previous Post Next Post