ಹಾಸನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಸೂಲಿ ಕರ್ಮಕಾಂಡ ದಿಢೀರ್ ಭೇಟಿ ಹೆಚ್.ಡಿ.ರೇವಣ್ಣ .

ಹಾಸನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಸೂಲಿ ಕರ್ಮಕಾಂಡ -
ದಿಢೀರ್ ಭೇಟಿ ಕೊಟ್ಟು ಕ್ಲಾಸ್ ತಗೊಂಡ ಮಾಜಿ ಮಂತ್ರಿ #ಹೆಚ್_ಡಿ_ರೇವಣ್ಣ .
ಏನ್ರೀ.. 4 ಲಕ್ಷ ಮಂತ್ಲಿ ಕಮಿಷನ್ ತಗೋತೀರಾ..? 
ಯಾರವನು..? ಇಲ್ಲಿಗೆ ಕರೆಸ್ರಿ.. ಬುಕ್ ಎಲ್ರಿ...ತೋರ್ಸಿ..
ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗೆ ರೇವಣ್ಣ ಫುಲ್ ಕ್ಲಾಸ್...
ಹಾಸನ: ಇನ್ನು ಮುಂದೆ ನಾನು ಬಂದಾಗ ಏಜೆಂಟ್‌ಗಳು ಇದ್ದರೆ ಜನರಿಗೆ ಹೇಳಿ ಓಡಾಡಿಸಿಕೊಂಡು ಹೊಡೆಸುತ್ತೇನೆ ಅದು ಯಾರು ನನ್ನ ಮೇಲೆ ಎಫ್ ಐಆರ್ ಹಾಕಿಸುತ್ತಾರೋ ನಾನು ಏನು ಕೇರ್ ಮಾಡುವುದಿಲ್ಲ ಎಂದು ಹಾಸನದ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ  ಬಹಿರಂಗವಾಗಿ ಹೊಡೆಸುವ  ಹೇಳಿಕೆಯನ್ನು ಮಾಜಿ ಸಚಿವ ಎಚ್‌ಡಿ.ರೇವಣ್ಣ ನೀಡಿದ್ದಾರೆ.
ಸಬ್‌ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಆಕ್ರೋಷ ಹೊರಹಾಕಿದ ರೇವಣ್ಣ  ಹತ್ತು ಲಕ್ಷಕ್ಕೆ ಹತ್ತು ಸಾವಿರ. ೨೦ ಲಕ್ಷಕ್ಕೆ ೨೦ ಸಾವಿರ ಹಣ ಪಡಿತಿದ್ದೀರ.. ಯಾರಿಗೆ ಕೊಡಲು. ಎಂಎಲ್‌ಎಗೆ ಕೊಡೋದಿಕ್ಕ... ನನ್ನ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿ ಬರುತ್ತವೆ. ಅವರಿಗೆ ಯಾಕೆ ನೀವು ಕೆಲಸ ಮಾಡಿ ಕೊಡುತ್ತಿಲ್ಲ.. ಎಂದು ಹರಿಯಾಯ್ದರು.
ಸೀನಿಯಾರಿಟಿ ಬಿಟ್ಟು ಕೆಲಸ ಮಾಡಲು ನಿಮಗೆ ಯಾರು ಹೇಳಿದ್ದು. ಪ್ರತಿ ತಿಂಗಳು ನಾಲ್ಕು ಲಕ್ಷ ಕೊಡಬೇಕು ಅಂತಾ ಹಣ ವಸೂಲಿ ಮಾಡುತ್ತಿದ್ದೀರ. ಸರ್ಕಾರಕ್ಕೆ ಕೊಡಲು ವಸೂಲಿ ಮಾಡುತ್ತಿದ್ದೀರ..? ಯಾರಿಗೆ ಕೊಡಲು ವಸೂಲಿ ಮಾಡುತ್ತಿದ್ದೀರ..? ಎಂದು ಕಿಡಿಕಾರಿದರು.
ನೀವು ಇರುವುದು ಏಜೆಂಟ್ ಇಟ್ಟುಕೊಂಡು ವಸೂಲಿ‌ ಮಾಡಲು  ಇಟ್ಟಿರೋದ ನಿಮ್ಮನ್ನ?. ಯಾವನು ಅವನು ಇಲ್ಲಿ ಕೂತುಕೋಳ್ಳುವವನು? ಇಲ್ಲಿ ತಿಂಗಳ ಕಲೆಕ್ಷನ್ ಅಂತೆ ಅವನದ್ದು. ಬಡ ಬಗ್ಗರು ಏನಾಗಬೇಕು. ಇಂದಿನ‌ ಪೈಲ್ಸ್ ಗಳು ಯಾವು ತೆಗೆಯಿರಿ. ಆ ಪೈಲ್ ಯಾವಗ ಬಂತು ಎಂಬ ಮಾಹಿತಿ ಇರುತ್ತದೆ ಅಲ್ಲವಾ..ಅದನ್ನ ತರಿಸಿರಿ  ಗುಡುಗಿದರು.

ಇಲ್ಲಿ ಕೂರುವವನು ಯಾರು ಎಂದು ಆತನ ಫೋಟೋ ಕೊಡೋನಾ? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಷಗೊಂಡರು. ಸಬ್ ರಿಜಿಸ್ಟರ್ ಬಿಲ್ಡಿಂಗ್‌ನ ಯಾರು ಕಟ್ಟಿಸುತ್ತಿರುವವನ್ನು ಬರಿ ಅಲ್ಲಿ ರೊಂಡೆಯಾಗಿದೆ ಯಾವನೋ ಅವನು ಎಂಜಿನಿಯರ್ ಎಂದು ಅವನು ಏನು‌ ಕೆಲಸ ಮಾಡಿಸಿದ್ದಾನೆ. ಇಲ್ಲಿ‌ ಬೆಳಗ್ಗೆ ಎದ್ದರೆ ವ್ಯಾಪಾರದ ಧಂದೆ ನಡೆಯುತ್ತಿದೆ. ಏನ್ರಿ ನಿಮ್ಮದು ಅಷ್ಟೇ ಯಾರು ಇದ್ದರೂ ನಾನು ಬಿಡುವುದಿಲ್ಲ. 
ಸರ್ಕಾರಕ್ಕೆ ಹಣ ಕೊಡಲು ವಸೂಲಿ ಮಾಡುತ್ತ ಕುಳಿತರೆ ಏನು ಮಾಡೋಣ. ಹಾಗಾದ್ರೆ ನಿಮ್ಮ ಡ್ರಾಯರ್ ಎಲ್ಲ ತೆಗೆಯಿರಿ ಎಷ್ಟು ಹಣ ಇದೆ ನೋಡೋಣ. ದಿನ ಬೆಳಗ್ಗೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಬ್‌ರಿಸ್ಟ್ರಾರ್ ಕಚೇರಿಯಲ್ಲಿ‌ ಹಣದ ದಂಧೆ ನಡೆಯುತ್ತಿರುವ ಬಗ್ಗೆ ಹಲವು ದಿನಗಳಿಂದ ಆರೋಪ ಮಾಡುತ್ತಿರುವ ಮಾಜಿ ಸಚಿವರು ಈ ರೀತಿ ಬಡವರ ಮೇಲೆ ದಂಧೆ ಮಾಡಬಾರದು ಎಂದು ಆಕ್ರೋಷಗೊಂಡ ರೇವಣ್ಣ ಇದನ್ನು ಸರಿಪಡಿಸಬೇಕು.. ಅಧಿಕಾರಿಗಳು ಬಿಟ್ಟು ಬೇರೆ ಏಜೆಂಟ್ ಇರಬಾರದು ಎಂದು ಸಿಡಿಮಿಡಿಗೊಂಡರು.

Post a Comment

Previous Post Next Post