ಅರಸೀಕಟ್ಟೆಯಲ್ಲಿ ಉದ್ಯಾನ ನಿಮಾಣಕ್ಕೆ ಚಾಲನೆ.

ಕೊಣನೂರು: ಅರಸೀಕಟ್ಟೆಯ ದೇವಾಲಯದ ಆವರಣದಲ್ಲಿರುವ ಕೆರೆಯಂಗಳದ ಪಕ್ಕದಲ್ಲಿ ಸಮತಟ್ಟು ಮಾಡಿರುವ ವಿಸ್ತಾರವಾದ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ನಕ್ಷತ್ರಾಕಾರದ ಉದ್ಯಾನವನವನ್ನು ನಿರ್ಮಿಸಲು ಸಿದ್ಧತೆನಡೆಸಿದ್ದು, ನಕ್ಷತ್ರಾಕಾರದಲ್ಲಿ ಬೆಳೆಯಲಿರುವ ಉದ್ಯಾನವನವು 27 ಜಾತಿಯ ಗಿಡಗಳಿಂದ ನಿರ್ಮಿತವಾಗಲಿದೆ.
ಸುಮಾರು 8 ಕೋಟಿ ರೂ ವೆಚ್ಚದಲ್ಲಿ ಅರಸೀಕಟ್ಟೆಯಮ್ಮ ಶ್ರೀ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಮುಖೇಣ ಸಮಗ್ರ ಅಭಿವೃದ್ದಿಯು ಸಾಗುತ್ತಿರುವ ಜೊತೆಗೆ ಪಾರ್ಕಿಂಗ್ ಸ್ಥಳ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಹಸಿರಿನ ವಾತಾವರಣವನ್ನು ನಿರ್ಮಿಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದರು.
ಅರಸೀಕಟ್ಟೆಯಮ್ಮ ದೇವಾಲಯದ ಆವರಣದಲ್ಲಿ ಹಸಿರಿನ ಸುಂದರತಾಣವನ್ನು ನಿರ್ಮಿಸುವ ಉದ್ದೇಶದಿಂದ ವಿವಿಧ ಜಾತಿಯ ಗಿಡಗಳನ್ನು ನೆಡುವ ಕಾರ್ಯಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ ನೀಡಿದರು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಲ್ಲಿನ ಪಾರ್ಕಿಂಗ್ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಜಾತಿ ಹಣ್ಣು ಮತ್ತು ಹೂ ನೀಡುವ ಗಿಡಗಳನ್ನು ನೆಡಲು ಆರಂಭಿಸಿದ್ದಾರೆ. ಭಾನುವಾರ 200 ಗಿಡಗಳನ್ನು ನೆಟ್ಟರು. ಉಳಿದ 300 ಗಿಡಗಳನ್ನು ನೆಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಪ್ರತಿನಿತ್ಯ ನೂರಾರು ಮತ್ತು ಭಾನುವಾರ ,ಶುಕ್ರವಾರ ಮತ್ತು ಮಂಗಳವಾರ ಸಾವಿರಾರು ಜನರು ಬಂದು ಹೋಗುವ ಭಕ್ತರಿಗೆ ಅರಸೀಕಟ್ಟೆಯಲ್ಲಿ  ಅಗತ್ಯಮೂಲ ಸೌಕರ್ಯಗಳನ್ನು ನೀಡುವ ಉದ್ದೇಶದಿಂದ 8 ಕೋಟಿ ರೂ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಅದರ ಜೊತೆಗೆ ಭಕ್ತಸ್ನೇಹಿ ವಾತಾವರಣ ನಿರ್ಮಿಸಲು ಹಸಿರಿನ ಉದ್ಯಾನವನವನ್ನು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

Post a Comment

Previous Post Next Post