ಕಡೂರು,ಆ.30: ತಾಲೂಕಿನ ಗೆದ್ದಲಹಳ್ಳಿ ಬಳಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ನಡೆದಿದ್ದು, ಸ್ಥಳದಲ್ಲಿಯೇ ಓರ್ವ ಮೃತಪಟ್ಟಿದ್ದು, ಅಪಘಾತದ ರಭಸಕ್ಕೆ ಎರಡು ಬೈಕ್ ಗಳು ಹೊತ್ತಿ ಉರಿದು ಸುಟ್ಟು ಕರಕಲಾಗಿದೆ.
ಯೂನಿಕಾರ್ನ್ ಬೈಕ್ ಸವಾರ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದು. ಹಾಸನದ ಕಡೆ ಹೋಗುತ್ತಿದ್ದ ಮೃತ ಮಂಜುನಾಥ್ ಶಿವಮೊಗ್ಗ ಮಾರ್ಗವಾಗಿ ಬರುತ್ತಿದ್ದ ಪಲ್ಸರ್ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿದ್ದಾರೆ.
ಪಲ್ಸರ್ ಬೈಕ್ ನಲ್ಲಿದ್ದ ಸಂಜಯ್ ಸ್ಥಿತಿ ಗಂಭೀರ, ಗೌತಮ್ ಗೆ ಗಾಯವಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags
ಚಿಕ್ಕಮಗಳೂರು