ಜಿಲ್ಲಾಧಿಕಾರಿಗಳು ಸರಿಯಾಗಿ ವರದಿ ನೀಡಲಿನಾನೇ ಸಂಸದನಾಗುವೇ : ಎ. ಮಂಜು ಭರವಸೆ

ಹಾಸನ : ಚುನಾವಣಾ ಆಯೋಗ ಕೇಳಿರುವಂತೆ ಸರಿಯಾದ ವರದಿಯನ್ನು ಜಿಲ್ಲಾಧಿಕಾರಿಗಳು ನೀಡಿದರೇ ಮತ್ತೆ ನಾನೇ ಸಂಸದಾಗುತ್ತೇನೆ ಎಂದು ಮಾಜಿ ಸಚಿವ ಎ. ಮಂಜು ಭರವಸೆ ನುಡಿದರು.
       ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಸಂಸದ ಪ್ರಜ್ವಲ್ ರೇವಣನವರ್ಣು 2019 ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಆಸ್ತಿ, 5 ವರ್ಷದ ವರಮಾನ ಸೇರಿದಂತೆ ಹಲವಾರು ದಾಖಲೆಗಳ ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಸ್ಪರ್ದೆ ಮಾಡಿ ಆಯ್ಕೆಗೊಂಡಿದ್ದಾರೆ. ಈಸಂಬಂಧವಾಗಿ ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಗೆ ಮೊರೆ ಹೋಗಲಾಗಿತ್ತು.
ಚುನಾವಣಾ ಆಯೋಗದಿಂದ ಹಾಸನದ ಜಿಲ್ಲಾಧಿಕಾರಿಗೆ ಒಂದು ವಾರದಲ್ಲಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ನೋಟೀಸ್ ಜಾರಿ ಮಾಡಿದ್ದು, ಆಯೋಗಕ್ಕೆ ನೀಡಲಾಗುವ ವರದಿಯಲ್ಲಿ ಸತ್ಯಾಂಶಗಳು ಇರುವಂತೆ ನೋಡಿಕೊಳ್ಳಬೇಕು ಇದೆ ವೇಳೆ ಮನವಿ ಮಾಡಿದರು. 
       ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವೇ ಕ್ರಮ ಕೈಗೊಂಡು ಓರ್ವ ಶಾಸಕರು ಇದೇ ರೀತಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದು, ನಂತರದಲ್ಲಿ ಸದಸ್ಯತ್ವ ವಜಾಗೊಂಡಿದೆ. ಈ ಪ್ರಕರಣದಲ್ಲಿ ನನಗೆ ನ್ಯಾಯ ಸಿಗಲಿದ್ದು, ಈಗಲು ನನಗೆ ಭರವಸೆ ಇದೆ ಮತ್ತೆ ನಾನೇ ಸಂಸದನಾಗುವುದಾಗಿ ಭರವಸೆ ನುಡಿದರು. 

Post a Comment

Previous Post Next Post