ಹಾಸನದಲ್ಲಿಂದು ಒಟ್ಟು 349 ಕರೋನ ಪಾಸಿಟಿವ್ ಪತ್ತೆ ಹಾಗೂ 6 ಸಾವು

ಹಾಸನ: ಜಿಲ್ಲೆಯಲ್ಲಿ ಶನಿವಾರ ಕರೊನಾ ತ್ರಿಶತಕ ಬಾರಿಸಿದ್ದು ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಒಂದೇ ದಿನ ಗರಿಷ್ಠ 340 ಜನರಲ್ಲಿ ಕೋವಿಡ್-19 ದೃಢಪಟ್ಟಿದ್ದು 6 ಜನ ಮೃತಪಟ್ಟಿದ್ದಾರೆ. 
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9715 ಕ್ಕೆ ಏರಿಕೆಯಾಗಿದ್ದು, 6263 ಜನ ಇಲ್ಲಿವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 3235 ಸಕ್ರಿಯ ಪ್ರಕರಣಗಳಿದ್ದು, 52 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 217 ಜನ ಮೃತಪಟ್ಟಿದ್ದಾರೆ.

Post a Comment

Previous Post Next Post