ಕೊಟ್ಟಿಗೆಹಾರ ಬಣಕಲ್ ಸುತ್ತಮುತ್ತ ಧಾರಾಕಾರ ಮಳೆಉರುವಿನಖಾನ್ ಸೇತುವೆ ಮುಳುಗಡೆ

ಕೊಟ್ಟಿಗೆಹಾರ:ಕೊಟ್ಟಿಗೆಹಾರ ಬಣಕಲ್ ಸುತ್ತಮುತ್ತ ಭಾನುವಾರ ಸಂಜೆ ಧಾರಾಕಾರ ಮಳೆಯಾಗಿದೆ.
ನಿಡುವಾಳೆ ಗ್ರಾ.ಪಂ ವ್ಯಾಪ್ತಿಯ ಉರುವಿನಖಾನ್ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾಗಿ ರಸ್ತೆಯ ಮೇಲೆ ಮಳೆನೀರು ಹರಿಯುತ್ತಿರುವುದರಿಂದ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.
ಬಣಕಲ್, ಕೊಟ್ಟಿಗೆಹಾರ, ತರುವೆ, ಅತ್ತಿಗೆರೆ, ಮತ್ತಿಕಟ್ಟೆ ಸುತ್ತಮುತ್ತ ಮಳೆಯಾಗಿದ್ದು ಬಣಕಲ್ ಸಮೀಪ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ.

Post a Comment

Previous Post Next Post