ಜನವಸತಿ ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಘೋಷಿಸುವುದಕ್ಕೆ ಗ್ರಾಮಸ್ಥರ ವಿರೋಧ

ಬಣಕಲ್ದಾಸರಹಳ್ಳಿ ಗ್ರಾಮಸ್ಥರಿಂದ ಗ್ರಾ.ಪಂಗೆ ಮನವಿ

ಕೊಟ್ಟಿಗೆಹಾರ:ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿಯಿಂದ ಬಣಕಲ್ ಭಾಗದಲ್ಲಿ ಮೀಸಲು ಅರಣ್ಯವನ್ನು ರಚಿಸಲು ಆ ಭಾಗದಲ್ಲಿರುವ ನಿವಾಸಿಗಳು ತಮ್ಮ ಜಾಗದ ಹಕ್ಕನ್ನು ಸಾಭೀತು ಪಡಿಸಲು 3 ತಿಂಗಳು ಗಡುವು ನೀಡಿ ಜನವಸತಿ ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಘೋಷಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಬಣಕಲ್, ದಾಸರಹಳ್ಳಿ ಗ್ರಾಮಸ್ಥರು ಬಣಕಲ್ ಗ್ರಾ.ಪಂಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥ ರಮೇಶ್ ಮಾತನಾಡಿ ಕಳೆದ ಐದು ದಶಕಗಳಿಂದ ಈ ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು ಈ ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಘೋಷಿಸುವುದಕ್ಕೆ ಗ್ರಾಮಸ್ಥರ ಸಂಪೂಣ್ ವಿರೋಧವಿದೆ. ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿಯಿಂದ ಬಣಕಲ್, ಬಿ ಹೊಸಹಳ್ಳಿ, ಮತ್ತು ಕುಡುವಳ್ಳಿ ಬ್ಲಾಕ್ 1 ಮತ್ತು 2 ರ ವರೆಗೆ ಮೀಸಲು ಅರಣ್ಯವನ್ನು ರಚಿಸಲು ಜಮೀನಿನ ಚಕ್ಕುಬಂದಿ ಹಾಗೂ ವಿಸ್ತೀರ್ಣವನ್ನು ನಮೂದಿಸಿ ಅಧಿಸೂÀಚನೆಯನ್ನು ಹೊರಡಿಸಿದ್ದು ಆ ಪ್ರದೇಶದಲ್ಲಿ ವಾಸಿಸುತ್ತಿರುವ ಅಥವಾ ಆ ವ್ಯಾಪ್ತಿಯಲ್ಲಿ ಸ್ಥಿರ ಆಸ್ತಿಯನ್ನು ಹೊಂದಿರುವ ವ್ಯಕ್ತಿಗಳು ಹಕ್ಕನ್ನು ಹೊಂದಿದ್ದಲ್ಲಿ 3 ತಿಂಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ. ಈ ಕರಮ ಅವೈಜ್ಞಾನಿಕವಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ಆಕ್ಷೇಪಣೆಗೆ ಆಹ್ವಾನಿಸಿರುವುದು ಸರಿಯಲ್ಲ. ಅಧಿಕಾರಿಗಳ ಈ ನಡೆಗೆ  ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಕ್ರಮವನ್ನು ಮರು ಪರಿಶೀಲಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಗ್ರಾ.ಪಂಯಿಂದ ಪತ್ರ ಕಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಣಕಲ್ ಮತ್ತು ದಾಸರಹಳ್ಳಿ ಗ್ರಾಮಸ್ಥರಾದ ಮೀನಾಕ್ಷಿ, ಪ್ರವೀಣ್, ಗೋಪಾಲ್, ಪ್ರಸನ್ನ, ಮುದ್ದಮ್ಮ, ಮಂಜುನಾಥ್, ಶಿವಪ್ಪ, ಮಂಜುನಾಥ್, ಶಿವಪ್ಪ,  ರುದ್ರೇಶ್, ಈರಯ್ಯ, ಕೃಷ್ಣ ಮುಂತಾಧವರು ಇದ್ದರು.

Post a Comment

Previous Post Next Post