ಸ್ಮಶಾನ ಸ್ಥಳಾಂತರ ಮಾಡಲು ಆಗ್ರಹಿಸಿಕೆ.ಹೆಚ್.ಬಿ. ಬಡಾವಣೆ ನಿವಾಸಿಗಳಿಂದ ಮನವಿ

ಹಾಸನ: ನಿವಾಸಿಗಳಿಗೆ ಸಮಸ್ಯೆಯಾಗಿರುವ ಸ್ಮಶಾನವನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಜೆಡಿಎಸ್ ಮುಖಂಡರಾದ ಅಗಿಲೆ ಯೋಗಿಶ್ ನೇತೃತ್ವದಲ್ಲಿ ಕೆ.ಹೆಚ್.ಬಿ. ಬಡಾವಣೆಯವರು ಶ್ರೀ ಬಲಮುರಿ ಗಣಪತಿ ಸೇವಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.
      ಕೊರೋನಾದಿಂದ ಮೃತಪಟ್ಟ ದೇಹಗಳನ್ನು ಹಾಸನ-ಗೊರೂರು ರಸ್ತೆಯ ಕೆ.ಹೆಚ್.ಬಿ. ಬಡಾವಣೆಗೆ ಹೊಂದಿಕೊಂಡಂತಿರುವ ಸ್ಮಶಾಣದಲ್ಲಿ ಪ್ರತಿದಿವಸ ಹೆಚ್ಚು ಸುಡಲಾಗುತ್ತಿದೆ. ಇದರಿಂದ ಈ ಬಡಾವಣೆಯಲ್ಲಿ ಗಬ್ಬು ವಾಸನೆ ಹರಡುತ್ತಿದ್ದು, ವಾಸಲಯ ಮಾಡಲು ಕಷ್ಟವಾಗಿದೆ. ಕೊರೋನಾದಿಂದ ಸಾವನಪ್ಪಿದ ಶವಗಳನ್ನು ಸುಡದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಬೇಕು. ಜೊತೆಗೆ ಸ್ಮಶಾನವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕೋರಿದರು.
      ಈಸಂದರ್ಭದಲ್ಲಿ ಕೆ.ಹೆಚ್.ಬಿ. ಬಡಾವಣೆಯ ಪರಮೇಶ್, ನಾಗೇಶ್, ಹೇಮಂತ್, ರವಿ, ಆನಂದ್, ಜಯರಾಜು ಇತರರು ಪಾಲ್ಗೊಂಡಿದ್ದರು

Post a Comment

Previous Post Next Post