ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ನಿಧನರಾದ ಆರ್.ಕೆ ಕೃಷ್ಣ ಸ್ವರೂಪ ರವರಿಗೆ ಸಂತಾಪ ಸಭೆ ನೆಡೆಯಿತು.ಈ ಸಭೆಯಲ್ಲಿ 100 ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಸಾಪ ಪದಾಧಿಕಾರಿಗಳ ಸಮ್ಮುಖದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.ನಂತರ ಕಸಾಪ ಆಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ ಸ್ವರೂಪ ರವರು ಒಬ್ಬ ಫಲಾಪೇಕ್ಷಯ ನಿರೀಕ್ಷೆ ಇಲ್ಲದೆ ಕನ್ನಡ ಕಟ್ಟುವ ಕಾಯಕದಲ್ಲಿ ಕಳೆದ ಮೂರು ದಶಕಗಳಿಂದ ದುಡಿದಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ .ಜೊತೆಗೆ ಹತ್ತಾರು ಸಂಘ ಸಂಸ್ಥೆಗಳಲ್ಲಿ ದುಡಿದ ಇವರ ಸೇವೆಯನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ, ಎಂದರು ಇವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಣಕಾಸು ನೆರವು ನೀಡುವುದಾಗಿ ಅಧ್ಯಕ್ಷರು 10,000 ರೂ ನೆರವು ನೀಡುವುದಾಗಿ ಪ್ರಕಟಿಸಿದರು. ನಂತರ ಆನೇಕ ಸಮಾಜ ಮುಖಂಡರು ತಮ್ಮ ಸಹಾಯಹಸ್ತ ಪ್ರಕಟಿಸಿದರು.ಈ ಸಭೆಯಲ್ಲಿ ಒಟ್ಟು 25,000 ಸಂಗ್ರಹವಾಹಿತ್ತು.ಹಣದ ಹೊಣೆಯನ್ನು ಕಸಾಪ ಗೌರವಾಧ್ಯಕ್ಷರಾದ ರವಿನಾಕಲಗೂಡು ರವರಿಗೆ ನೀಡಲಾಗಿದೆ ನಗರದ ವಿವಿಧ ಸಂಘ ಸಂಸ್ಥೆಗಳು ಉದಾರ ನೆರವನ್ನು ಇಂದೇ ತಿಂಗಳು 15 ರೊಳಗೆ ನೀಡಿದರೆ ಅವರ ಶ್ರೀಮತಿಯವರನ್ನು ಕರೆದು ನೀಡುವುದಾಗಿ ತಿಳಿಸಿದರು,ನಂತರ ಗೌರವಾಧ್ಯಕ್ಷರಾದ ರವಿನಾಕಲಗೂಡು ರವರು ಮಾತನಾಡಿ ಒಬ್ಬ ಒಳ್ಳೆಯ ನಿರೂಪಕರಾಗಿ ಹೃದಯವಂತರಾಗಿ ಖಾಸಗಿ ಕಾರ್ಯಕ್ರಮದಿಂದ ಹಿಡಿದು ಸರ್ಕಾರಿ ಕಾರ್ಯಕ್ರಮವರೆಗೂ ದುಡಿದಿದ್ದಾರೆ ಇವರನ್ನು ಏಂದು ಮರೆಯಲು ಸಾಧ್ಯವಿಲ್ಲ ನಿಜವಾಗಿಯೂ ಅವರ ಸೇವೆ ಅವಿಸ್ಮರಣೀಯ ಎಂದರು,ಜಿ.ಓ ಮಹಾಂತಪ್ಪ, ಪಾಷರವರು, ಹೆಚ್.ಎಂ.ಶಿವಣ್ಣನವರು ,ಉದ್ಯಮಿ ಮದನ್ಕುಮಾರ,ಶಂಕರೇಗೌಡ,ಏಜಾಜ್,ಎನ್.ಎಲ್.ಚನ್ನೇಗೌಡರು,ಜನತಾ ಮಾಧ್ಯಮ ಪತ್ರಿಕೆ ವರದಿಗಾರದ ವೆಂಕಟೇಶರವರು ಮಾತನಾಡಿ ಅವರ ಸೇವೆಯನ್ನು ಸ್ಮರಿಸಿದರು ಈ ಸಭೆಯಲ್ಲಿ ಗಂಗರ ಶ್ರೀಕಾಂತ,ಕತ್ತಿಮಲ್ಲೇನಹಳ್ಳಿ ಪರಮೇಶ, ಹರಳಹಳ್ಳಿ ರಂಗಸ್ವಾಮಿ, ಅಂಕಪುರ ಹೇಮಂತ, ಬ್ಯಾಂಕು ಮಂಜಣ್ಣ ,ಚೈತ್ರಮಂಜೇಗೌಡ ಮುಂತಾದವರು ಶ್ರದ್ದಾಂಜಲಿ ಸಭೆಯಲ್ಲಿ ಸೇರಿದ್ದರು.ಈ ಶ್ರದ್ದಾಂಜಲಿ ಸಭೆಯ ಎಲ್ಲಾ ನಿರ್ವಹಣೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಯಾದ ಕಲ್ಲಹಳ್ಳಿ ಹರೀಶ ನಡೆಸಿಕೊಟ್ಟರು.
Tags
ಹಾಸನ