ನಾಲೆ ಮೇಲೆ ನಡೆದು ವೀಕ್ಷಣೆ ಮಾಡಿದ ಹೆಚ್.ಕೆ. ಕುಮಾರಸ್ವಾಮಿ

ಹಾಸನ: ಯಗಚಿ ನಾಲಾಗಳಿಂದ ನೀರು ಗ್ರಾಮಕ್ಕೆ ಬಾರದಿರುವುದರಿಂದ ಶಾಸಕ ಹೆಚ್.ಕೆ. ಕುಮಾರಸ್ವಾಮಿಯವರು ನಾಲೆ ಮೇಲೆ ನಡೆದುಕೊಂಡು ವೀಕ್ಷಣೆ ಮಾಡಿ ಸಮಸ್ಯೆ ಆಲಿಸಿದರು.
     ಶುಕ್ರವಾರದಂದು ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಮಲ್ಲಪ್ಪನಹಳ್ಳಿ. ಜಕ್ಕನಹಳ್ಳಿ. ಕೊಪ್ಪಲು. ಕಿತ್ತಾನೆ. ಹ್ಯಾರಾನೆ. ಮದ್ಲಾಪುರ. ಕಬ್ಬತ್ತಿ. ಚನ್ನಂಗಿಹಳ್ಳಿ. ದೊಡ್ಡಬೀಕನಹಳ್ಳಿ.ಬ್ಯಾಡರಹಳ್ಳಿ. ಕಟ್ಟಾಯ. ಕೊಡ್ರಾಮನಹಳ್ಳಿ  ಗ್ರಾಮಗಳಲ್ಲಿ ಹಾದು ಹೋಗಿರುವ ಯಗಚಿ ನಾಲಾ ನೀರು ಇನ್ನು ಬಾರದ ಹಿನ್ನೆಲೆಯಲ್ಲಿ ಶಾಸಕ ಹೆಚ್.ಕೆ. ಕುಮಾರಸ್ವಾಮಿಯವರು ನಾಲೆ ಮೇಲೆ ನಡೆದುಕೊಂಡು ಹೋಗಿ ವಿಕ್ಷಣೆ ಮಾಡಿದರು. ರೈತರುಗಳ ಜಮೀನುಗಳಿಗೆ ನೀರು ಬಹುತೇಕ ತಲುಪಿದ್ದು, ಇನ್ನು ಎರಡು ದಿವಸಗಳಲ್ಲಿ ಕಟ್ಟಾಯ ಹೋಬಳಿಯ ಎಲ್ಲಾ ಚಾನಲ್ ಗಳು ಮತ್ತು ಕೆರೆ ಕಟ್ಟೆಗಳು ಭರ್ತಿಯಾಗಲಿವೆ. ಯಾವ ರೈತರು ಧೃತಿಗೆಡದೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು. ಜೊತೆಯಲ್ಲಿ ಪುಟ್ಟಸ್ವಾಮಿಗೌಡ, ರಾಜಶೇಖರ್ .ಎಇ ಅರುಣ್ ಮತ್ತು ಜಿ.ಪಂ.ತಾ.ಪಂ.ಗ್ರಾ.ಪಂ ಸದಸ್ಯರುಗಳು ಅಯಾ ಭಾಗದ ಕೃಷಿಕರು ಹಾಗೂ ತಾ.ಪಂ ಮಾಜಿ ಅಧ್ಯಕ್ಷರಾದ ಸತೀಶ್ ರಂಗಶೆಟ್ರು ಉಪಸ್ಥಿತರಿದ್ದರು.

Post a Comment

Previous Post Next Post