ಬ್ರೇಕಿಂಗ್ ನ್ಯೂಸ್- ನಟಿ ರಾಗಿಣಿ ಮೇಲೆ FIR ದಾಖಲು

ಸ್ಯಾಂಡಲ್ ವುಡ್ ನ ಡ್ರಗ್ ದಂಧೆ ಆರೋಪದಲ್ಲಿ ನಟಿ ರಾಗಿಣಿ ಮನೆ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಮಹತ್ವದ ಬೆಳವಣಿಗೆಯಲ್ಲಿ ನಟಿ ರಾಗಿಣಿ ಮೇಲೆ FIR ದಾಖಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಕಮಲ್ ಪಂಥ್ ಸುದ್ದಿಗೋಷ್ಢಿಯಲ್ಲಿ ಹೇಳಿದ್ದಾರೆ.ನಟಿ ರಾಗಿಣಿಯ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.‌ಹೆಚ್ಚಿನ ವಿಚಾರಣೆಗೆ ಆಕೆಯನ್ನು ಚಾಮರಾಜಪೇಟೆಯ ಕಚೇರಿಗೆ ಕರೆದುಕೊಂಡು ಬರಲಾಗುತ್ತಿದೆ.ನಿನ್ನೆ ರಾಗಿಣಿಯ ಆಪ್ತ ರವಿಶಂಕರ್ ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಅವನಿಂದ ರಾಗಿಣಿಯ ಮಾಹಿತಿ ಪಡೆದಿದ್ದರು. ಆಕೆಯ ಮನೆಯಲ್ಲಿ ಮಹತ್ವದ ದಾಖಲೆಗಳು ಇರುವುದು ಅವನಿಂದ ಗೊತ್ತಾಗಿದೆ. ಕೊರ್ಟಿನಿಂದ ಸರ್ಚ್ ಆರ್ಡರ್ ಪಡೆದು ಬೆಳಗ್ಗೆ ಇಂದ ಸರ್ಚ್ ಮಾಡಿರುವ ಸಿಸಿಬಿ ಅಧಿಕಾರಿಗಳಿಗೆ ದಾಖಲೆಗಳು ಕೂಡ ದೊರಕಿವೆ.ಎಫ್ಐಆರ್ ದಾಖಲಾಗಿದ್ದರಿಂದ  ಯಾವುದೇ ಕ್ಷಣದಲ್ಲಿ ಬಂಧನ ವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಮಲ್ ಪಂಥ್ ಸುದ್ದಿಗೋಷ್ಢಿಯಲ್ಲಿ  ಹೇಳಿದ್ದೇನದರೆ..ರಾಗಿಣಿ ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಅಲ್ಲದೇ ಆಕೆ ಹೈಎಂಡ್ ಪಾರ್ಟಿಯಲ್ಲಿ ಕಾಣಿಸಿಕೊಂಡರು.ತನಿಖೆ ಮುಂದಿನ ಹಂತ ಹೋಗುತ್ತಿದೆ. ಆ ಪಾರ್ಟಿಯಲ್ಲಿ ಯಾರ್ಯಾರು ಹೋಗ್ತಾ ಇದ್ದರು. ಅವರಿಗೆ ಯಾರ್ಯಾರು ಸಂಬಂಧ ಹೊಂದಿದ್ದರು ಇವೆಲ್ಲಾ ತನಿಖೆಯ ನಂತರ ಗೊತ್ತಾಗಲಿದೆ ಎಂದರು.

Post a Comment

Previous Post Next Post