ಹಾಸನ: ವಿಶೇಷ ಸಭೆಗೂ ಮತ್ತು ಸಾಮಾನ್ಯ ಸಭೆಗೂ ಯಾವ ವ್ಯತ್ಯಾಸವಿರುವುದಿಲ್ಲ ಆದರೇ ಇದು ಜೆಡಿಎಸ್ ಸದಸ್ಯರ ಬ್ಲ್ಯಾಕ್ ಮೆಲ್ ತಂತ್ರವಾಗಿದೆ ಎಂದು ಜಿಪಮ ಅಧ್ಯಕ್ಷೆ ಶ್ವೇತಾ ದೇವರಾಜು ಗಂಭೀರವಾಘಿ ಆರೋಪಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ನಡೆಯಬೇಕಾದ ಜಿಲ್ಲಾ ಪಂಚಾಯತ್ ವಿಶೇಷ ಸಭೆಯಲ್ಲಿ ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ. ಜಿಪಂನ ಜೆಡಿಎಸ್ ಸದಸ್ಯರಾದ 22 ಜನರು ಕೂಡ ಸಹಿ ಮಾಡಿ ಸಭೆ ಕರೆಯುವಂತೆ ಮನವಿ ಕೊಟ್ಟಿದ್ದರು. ಸಭೆ ಕರೆಯುವಂತೆ ಮನವಿ ಮಾಡಿದ್ದವರು ಅವರೆ ಹಾಜರಾಗಿರುವುದಿಲ್ಲ. ಸಾಮಾನ್ಯ ಸಭೆ ಕರೆಯುವಂತೆ ಮತ್ತೊಂದು ಲೆಟರ್ ನೀಡಿದ್ದು, ಸಾಮಾನ್ಯ ಸಭೆಗೂ ಮತ್ತು ವಿಶೇಷ ಸಭೆಗೂ ಯಾವ ವ್ಯತ್ಯಾಸವಿರುವುದಿಲ್ಲ. ಇದೊಂದು ಬ್ಲ್ಯಾಕ್ ಮೆಲ್ ತಂತ್ರವಾಗಿದೆ ಎಂದು ದೂರಿದರು. ಶಿಕ್ಷಕರ ದಿನಾಚರಣೆ ದಿನ ಕರೆಯಲಾಗಿದೆ ಅದಕ್ಕೆ ಹಾಜರಾಗಿರುವುದಿಲ್ಲ ಎಂಬುದು ಒಂದು ನೆಪವಾಗಿದೆ. ಆದರೇ ಮೂರ್ನಾಲ್ಕು ಶಾಸಕರಿಗೆ ಕೊರೋನಾ ಬಂದಿರುವುದರಿಂದ ಹಾಜರಾಗಿರುವುದಿಲ್ಲ. ಶಿಕ್ಷಕರ ದಿನವೇ ಸಭೆಯನ್ನು ಉದ್ದೇಶಪೂರ್ವಕವಾಗಿ ನಾನು ಕರೆದಿರುವುದಿಲ್ಲ. ಸಭೆ ಕರೆದ ಮೇಲೆ ಎಲ್ಲಾ ಸದಸ್ಯರು ಹಾಜರಾಗಬೇಕಾದುದ್ದು ಅವರ ಜವಬ್ಧಾರಿ. ನನ್ನನ್ನೆ ತಪ್ಪಿಕಸ್ತನಾಗಿ ಮಾಡುವುದು ಸರಿಯಲ್ಲ ಎಂದರು. ಈಗಾಗಲೇ ಜಿಲ್ಲಾ ಪಂಚಾಯತ್ ನಲ್ಲೆ ಶಿಕ್ಷಕರ ದಿನಾಚರಣೆಯನ್ನು ನಾವು ಆಚರಣೆ ಮಾಡಲಾಗಿದೆ.
ಅಧ್ಯಕ್ಷರ ವಿವೇಚನಾ ನಿಧಿಗೆ 1 ಕೋಟಿ ರೂ ಹಣ ಬಂದಿರುವುದು ನಿಜವಾಗಿದ್ದು, ಅದನ್ನು ಹಂಚಿಕೆ ಮಾಡುವುದು ನಮ್ಮ ಜವಬ್ಧಾರಿ. ಅರಕಲಗೂಡಿಗೆ 12 ಲಕ್ಷ ರೂ, ಅರಸೀಕೆರೆಗೆ 38 ಲಕ್ಷ ರೂ, ಆಲೂರು 4 ಲಕ್ಷ, ಚನ್ನರಾಯಪಟ್ಟಣ 22, ಬೇಲೂರು 5 ಲಕ್ಷ ರೂ, ಸಕಲೇಶಪುರ 3 ಲಕ್ಷ ರೂ, ಹಾಸನ 12 ಲಕ್ಷ ರೂ, ಹೊಳೆನರಸೀಪುರ 4 ಲಕ್ಷ ರೂಗಳನ್ನು ಹಂಚಿಕೆ ಮಾಡಲಾಗಿದೆ ಎಂದರು. ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಕ್ಕೂ ಜೆಡಿಎಸ್ ಇರುವ ಜಿಪಂ ಸದಸ್ಯರ ಭಾಗಕ್ಕೂ ಅನುಧಾನ ಕೊಡಲಾಗಿದ್ದರೂ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಈಗಾದರೇ ಹೇಗೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಬೇಸರವ್ಯಕ್ತಪಡಿಸಿದರು. ನಾನು ಒಂದು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದ್ದು, ಜಿಪಂ ಸಭೆ ನಿಲ್ಲುತ್ತಿರುವದರ ಬಗ್ಗೆ ಜನರು ನೋಡುತ್ತಿದ್ದು, ಅವರೇ ತೀರ್ಮಾನ ಮಾಡಲಿದ್ದಾರೆ. ಮತ್ತೆ ಸಭೆಯನ್ನು ಕರೆಯುತ್ತೇನೆ. ಆಗ ಬರಲಿ ಎಂದರು.
ಲಿಫ್ಟ್ ಮತ್ತು ಪ್ರವಾಸ ಭತ್ಯೆ ಹಾಗೂ ಸಹಿ ಪತ್ರಗಳ ಬಗ್ಗೆ ಸೇರಿ ಮೂರನ್ನು ತನಿಖೆ ಮಾಡುವಂತೆ ನಾನು ಕೂಡ ಒತ್ತಾಯಿಸಿದ್ದೇನೆ. ಮುಂದೂಡಿರುವ ಜಿಲ್ಲಾ ಪಂಚಾಯತ್ ಸಭೆಯನ್ನು ಇನ್ನು 10 ದಿನದ ಒಳಗೆ ಕರೆಯಲಾಗುವುದು ಎಂದು ಹೇಳಿದರು
Tags
ಹಾಸನ