ತುಪ್ಪದ ಬೆಡಗಿ ರಾಗಿಣಿಗೆ ಬಿಗ್ ಶಾಕ್ ಎದುರಾಗಿದೆ. ಈಗಾಗಲೇ ಡ್ರಗ್ ಕೇಸಿನಲ್ಲಿ ಬಂಧಿತರಾಗಿ ವಿಚಾರಣೆಗೆ ಒಳಗಾಗಿರುವ ರಾಗಿಣಿಗೆ ಫಿಲ್ಮ್ ಚೇಂಬರ್ ನಿಂದ ಬಿಗ್ ಶಾಕ್ ಎದುರಾಗಿದೆ.ಫಿಲ್ಮ್ ಚೇಂಬರ್ ನಿರ್ಮಾಪಕ ಮತ್ತು ನಿರ್ದೇಶಕ ಸಂಘಕ್ಕೆ ಪತ್ರ ಬರೆದು ಆಕೆಗೆ ಅವಕಾಶ ನೀಡದಂತೆ ಸೂಚಿಸಬಹುದು ಎನ್ನಲಾಗುತ್ತಿದೆ. ಅಥವಾ ಫಿಲ್ಮ್ ಚೇಂಬರ್ ಸ್ವತಃ ಆಕೆಗೆ ಅವಕಾಶ ಯಾರೂ ಕೊಡಬೇಡಿ ಎಂಬ ಆದೇಶ ಸಹ ಹೊರಡಿಸಬಹುದು ಎಂದು ಕೂಡ ಹೇಳಲಾಗುತ್ತಿದೆ .ಫಿಲ್ಮ್ ಚೇಂಬರ್ ಆದೇಶ ಕೊಟ್ಟರೆ ಚಿತ್ರರಂಗದ ಎಲ್ಲರೂ ಪಾಲಿಸಲೇಬೇಕಿದೆ.ಕೆಂಪೇಗೌಡ, ವೀರಮದಕರಿ, ಶಿವ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡು ಒಂದಷ್ಟು ಅಭಿಮಾನಿಗಳನ್ನು ಕೂಡ ಆಕೆ ಸಂಪಾದಿಸಿದ್ದರು. ಡ್ರಗ್ ವ್ಯೂಹಾಜಾಲಕ್ಕೆ ಸಿಲುಕಿದ ಆಕೆ ಮತ್ತೆ ಹೇಗೆ ಹೊರಬರುತ್ತಾರೆ ಎಂದು ಕಾದು ನೋಡಬೇಕಿದೆ. ಬಿಜೆಪಿಯ ಪಕ್ಷಕ್ಕೆ ಸ್ಟಾರ್ ಪ್ರಚಾರಕಿಯಾಗಿ ಕೆಲಸ ಮಾಡಿದ್ದರು. ಕೆ ಆರ್ ಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಮರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ಮಾಡಿದ್ದರುರವಿಶಂಕರ್ ಕೊಟ್ಟ ಮಾಹಿತಿಯಿಂದ ರಾಗಿಣಿ ಅರೆಸ್ಟ್ ಅಗಿದ್ದಾರೆ. ಡಿಜಿಟಲ್ ಸಾಕ್ಷ್ಯ ದೊರೆತಿರುವದರಿಂದ ಮತ್ತು ಮೊಬೈಲ್ ನಲ್ಲಿ ಇದ್ದ ಸಾಕ್ಷ್ಯ ನಾಶ ಮಾಡಿದ್ದರಿಂದ ಅವರನ್ನು ಅರೆಸ್ಟ್ ಮಾಡಿದ್ದಾರೆ ಸ್ಯಾಂಡಲ್ ವುಡ್ ನ ಡ್ರಗ್ ದಂಧೆ ಆರೋಪದಲ್ಲಿ ನಟಿ ರಾಗಿಣಿ ಮನೆ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನಟಿ ರಾಗಿಣಿ ಮನೆಯಲ್ಲಿ ಡ್ರಗ್ಸ್ ಪತ್ತೆ ಆಗಿದೆ ಪೊಲೀಸರಿಗೆ ಒಂದು ಶಹಬಾಸ್ ಎಂದು ಮಾಧ್ಯಮಗಳು ಹೇಳಿದ್ದಾರೆಇನ್ನು ಮಹತ್ವದ ಬೆಳವಣಿಗೆಯಲ್ಲಿ ನಟಿ ರಾಗಿಣಿ ಮೇಲೆ FIR ದಾಖಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಕಮಲ್ ಪಂಥ್ ಸುದ್ದಿಗೋಷ್ಢಿಯಲ್ಲಿ ಹೇಳಿದ್ದಾರೆ.
Tags
ಸಿನಿಮಾ