ಪ.ಜಾತಿ /ವರ್ಗದವರ ಹಿತ ಕಾಯಲು ಬದ್ಧ ಶಾಸಕ ಹೆಚ್ ಕೆ ಕುಮಾರಸ್ವಾಮಿ.

ಸಕಲೇಶಪುರ :- ಭೂ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ದಲಿತರ ಹಿತ ಕಾಪಾಡಲು ಬದ್ಧನಾಗಿದ್ದೇನೆ ಎಂದು ಶಾಸಕ ಹೆಚ್ ಕೆ ಕುಮಾರಸ್ವಾಮಿ ಹೇಳಿದರು. ಅವರು ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪೂಜಿತ ಜಾತಿ ಮತ್ತು ಪರಿಶಿಷ್ಟ ವರ್ಗದವರ ಜಾಗೃತಿ ಹಾಗೂ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದರು. 
 
ತಾಲೂಕಿನ ಕೆಲವು ಕಡೆಗಳಲ್ಲಿ ಒತ್ತುವರಿ ಸಮಸ್ಯೆಗಳು, ಎಚ್ ಆರ್ ಪಿ ಯಲ್ಲಿ 94c, ಬಗರ್ ಹುಕುಂ,  ಹಾಗೂ ಅರಣ್ಯ ಪ್ರದೇಶದಲ್ಲಿ ಉತ್ತರಿ ಆಗಿರುವುದರ ಬಗ್ಗೆ ಸಭೆಯಲ್ಲಿ ಗಮನಸೆಳೆದಿದ್ದಾರೆ ಈ ವಿಚಾರವನ್ನು ಪ್ರಾಮಾಣಿಕವಾಗಿ ರಾಜ್ಯ ಸರ್ಕಾರದ ಮುಂದೆ ಬಗೆಹರಿಸಲು ಬದ್ದನಾಗಿದ್ದೇನೆ ಇಂದು ಹೇಳಿದರು. ದಲಿತರ ದೌರ್ಜನ್ಯ ಪ್ರಕರಣಗಳಲ್ಲಿ  ಯಾರದೋ ಒತ್ತಡಕ್ಕೆ ಮಣಿದು, ಸಾಕ್ಷಿಗಳು ಸಿಗದೇ ಇದ್ದ ಸಂದರ್ಭದಲ್ಲಿ ಅಥವಾ ದೂರುದಾರರ ರಾಜಿಯಾದ ಸಂದರ್ಭದಲ್ಲಿ ಬಿ ರಿಪೋರ್ಟ್ ಹಾಕಿರಬಹುದು. ಇಂಥ ವಿಚಾರದಲ್ಲಿ ಡಿವೈಎಸ್ಪಿ ಅವರು ಮತ್ತೊಮ್ಮೆ ಪರಿಶೀಲನೆ ನೆಡಸಿ  ನಂತರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು ಎಂದು ಹೇಳಿದರು. ಈ ವಿಚಾರದಲ್ಲಿ ಸಂಘಟನೆಯವರು ಕೂಡ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದರು. ದೌರ್ಜನ್ಯ ಪ್ರಕರಣದಲ್ಲಿ ಎಷ್ಟೇ ದೊಡ್ಡ ಅಧಿಕಾರಿ ತಪ್ಪು ಮಾಡಿದರೂ ಅದು ತಪ್ಪೇ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಬಗ್ಗೆ ಕಾನೂನು ಪ್ರಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

 ತಾಲೂಕು ತ್ರೈಮಾಸಿಕ ಸಭೆ ಕುರಿತಾಗಿ ಮಾತನಾಡಿದ ಶಾಸಕರು ತಾಲೂಕಿನಲ್ಲಿ ವಾಡಿಕೆಗಿಂತ ಶೇಕಡ 30% ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ತಾಲ್ಲೂಕಿನಲ್ಲಿ ಕಾಫಿ ಮೆಣಸು ಏಲಕ್ಕಿ ಅಂತ ಬೆಳೆಗಳು ಶೇ 40 ರಷ್ಟು ನಾಶವಾಗಿದೆ. ತಾಲೂಕಿನ ಹಾನುಬಾಳು,  ಹೆತ್ತೂರು, ಯಸಳೂರು ಭಾಗದಲ್ಲಿ ಹೆಚ್ಚು ಹಾನಿಯಾಗಿರುವ ವರದಿಯಾಗಿದೆ ಎಂದರು. ತಾಲ್ಲೂಕಿನಲ್ಲಿ ಶೇ 47ರಷ್ಟು ರೈತರು ಆಪ್ ಮೂಲಕ ಸರ್ವೆಯನ್ನು ನಡೆಸಿಕೊಂಡಿದ್ದಾರೆ. ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ಇತರೆ ಕಾರ್ಯಗಳಿಗೆ ಯೂರಿಯಾ  ಕೊರತೆಯಿಂದ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಸಚಿವರು ಯೂರಿಯಾ ಕೊರತೆಯಿಲ್ಲ ಎಂದು ಹೇಳುತ್ತಾರೆ ಆದರೆ ನಮ್ಮ ತಾಲೂಕಿನಲ್ಲಿ ಕೊರತೆಯಿರುವುದು ಕಾಣುತ್ತಿದೆ ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದರು. ಸುಮಾರು 1500 ಮನೆಗಳಿಗೆ ಬಿಲ್ ಬಾಕಿ ಇದೆ ಇದರಿಂದ ಬಡವರು ಮನೆ ನಿರ್ಮಿಸಿಕೊಳ್ಳಲು ತೊಂದರೆಯಾಗಿದೆ ಸರ್ಕಾರ ಹೊಸ ಮನೆಗಳನ್ನು ನಿರ್ಮಿಸಿ ಕೊಡುವುದರ ಜೊತೆಗೆ ಬಾಕಿ ಇರುವ ಬಿಲ್ ಗಳನ್ನು ಶೀಘ್ರವೇ ಕೊಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ತಾಲೂಕಿನಲ್ಲಿ ಪಶುವೈದ್ಯಾಧಿಕಾರಿಗಳು ಹಾಗೂ ಕಾಫರ್ಡ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದ್ದುಕಾಣುತ್ತಿದೆ ಈ ನಿಟ್ಟಿನಲ್ಲಿ  ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಗತ್ಯವಾಗಿ ಜನ ಔಷಧಿ ಕೇಂದ್ರ ಹಾಗೂ ಜನರೇಟರ್ ಬೇಕಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿ ಎಂದು ಹೇಳಿದರು. 

 ಪಟ್ಟಣದಲ್ಲಿ ಪೌರಕಾರ್ಮಿಕರಿಗೆ ನಿರ್ಮಾಣವಾಗುತ್ತಿರುವ 65 ಮನೆಗಳ ಕಟ್ಟಿಸಿ ಕೊಡುತ್ತಿದ್ದು ಫಲಾನುಭವಿಗಳು ಸರ್ಕಾರಕ್ಕೆ 50 ಸಾವಿರ ರೂಪಾಯಿಗಳನ್ನು ಕಟ್ಟಬೇಕಾಗಿದೆ ಆದರೆ ಬಹುತೇಕ ಕಾರ್ಮಿಕರು ಬಡವರಾಗಿರುವುದರಿಂದ ಅಷ್ಟೊಂದು ಹಣ ಕಟ್ಟಲು ಸಾಧ್ಯವಿಲ್ಲ. ಸರ್ಕಾರದವರೇ ಅ ಹಣವನ್ನು  ಭರಿಸಬೇಕು ಎಂದು ಮನವಿ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಸರ್ಕಾರ
ಪೌರಕಾರ್ಮಿಕರ ಹಿತ ಕಾಪಾಡಬೇಕು ಎಂದು ಆಗ್ರಹ ಮಾಡಿದರು. ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ  ನಾಲ್ಕು ಪಥದ ರಸ್ತೆಯ ಕಾಮಗಾರಿ ಅವೈಜ್ಞಾನಿಕ ರಿಂದ ಕೂಡಿದೆ ಕೆಲಭಾಗಗಳಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಹೆದ್ದಾರಿಯ ಆಸುಪಾಸಿನ ಖಾಸಗಿ ಹಾಗೂ ಸರಕಾರಿ ಕಟ್ಟಡಗಳಿಗೆ ಹಾನಿಯಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೂ ಹಾಸನದಿಂದ ಮಾರನಹಳ್ಳಿ ವರೆಗೂ ಹೆದ್ದಾರಿ ಸಂಪೂರ್ಣ ಗುಂಡಿ ಮಾಯವಾಗಿದೆ ದುರಸ್ತಿ ನಡೆಸಲು ಅಧಿಕಾರಿಗಳು ಕೆಲ ದಿನಗಳ  ಕಾಲಾವಕಾಶ ಕೇಳಿದ್ದಾರೆ. ನಂತರವೂ ಹೆದ್ದಾರಿ ದುರಸ್ತಿಪಡಿಸಿ ಇಲ್ಲವೆಂದರೆ ತಾಲೂಕಿನ ಜನರ ಜೊತೆಗೂಡಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಸಭೆಯಲ್ಲಿ ತಾಲೂಕಿನ ವಿವಿಧ ಭಾಗಗಳಲ್ಲಿ ಪರಿಶಿಷ್ಟ ಜಾತಿ ಪಂಗಡದವರ ಮೇಲೆ ಅನ್ಯಾಯ ಹಾಗೂ ದೌರ್ಜನ್ಯದ ಬಗ್ಗೆ ಸಭೆಯ ಸಭೆಯಲ್ಲಿದ್ದ ಸಂಘಟನೆಯ ಮುಖಂಡರುಗಳು ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂಬೇಡ್ಕರ್ ಕುರಿತಾದ ಮಹಾನಾಯಕ ಧಾರಾವಾಹಿ ಪ್ರಸಾರವಾಗುವ  ಸಂದರ್ಭದಲ್ಲಿ  ಅಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
 
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ ಆರ್ ಹರೀಶ್, ಪೋಲಿಸ್ ಉಪ ಅಧೀಕ್ಷಕರಾದ ಗೋಪಿ, ಸಮಾಜ ಕಲ್ಯಾಣ ಇಲಾಖೆಯ ದಿಲೀಪ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಕೃಷ್ಣೇಗೌಡ, ತಾಲೂಕು ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯ ಸದಸ್ಯರಾದ ನಿರ್ವಾಣಪ್ಪ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

Previous Post Next Post