ಇಂದು ಮಧ್ಯಾಹ್ನ ನಿಧನರಾದ ಗಾನ ಗಾರುಡಿಗ, ಪದ್ಮವಿಭೂಷಣ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಅವರ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರು,ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಮನೆಯತ್ತ ಧಾವಿಸುತ್ತಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 50 ಸಾವಿರ ಗೀತೆಗಳಿಗೆ ಧ್ವನಿಯಾಗುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಎಸ್. ಬಿ. ಬಾಲಸುಬ್ರಹ್ಮಣ್ಯಂ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಕೊನೆಯುಸಿರೆಳೆದರು.
ಕೊರೋನಾವೈರಸ್ ವಿರುದ್ಧ ಎರಡು ತಿಂಗಳು ಹೋರಾಟ ನಡೆಸಿದ 74 ವರ್ಷದ ಹಿರಿಯ ಗಾಯಕ, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದು, ದೇಶಾದ್ಯಂತ ಅವರ ಅಭಿಮಾನಿಗಳಲ್ಲಿ ದು:ಖದ ಕಾರ್ಮೋಡ ಆವರಿಸಿದೆ.