ಹಾಸನ: ಇತ್ತಿಚಿಗೆ ನಿಧನರಾದ ಸಮಾಜಸೇವಕರಾದ ಆರ್.ಕೆ. ಸ್ವರೂಪ್ ಹೆಸರಿನಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯಿಂದ ನಗರದ ಸಂತೇಪೇಟೆ ವೃತ್ತದ ಬಳಿ ನಗರಸಭೆಯ ವಸ್ತುಪ್ರದರ್ಶನ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಅನ್ನದಾನ ಕಾರ್ಯಕ್ರಮ ನೆರವೇರಿಸಲಾಯಿತು.
ಇದೆ ವೇಳೆ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ. ಶಿವಣ್ಣನವರು, ಸಮಾಜಸೇವಕರಾದ ಆರ್.ಕೆ. ಸ್ವರೂಪ್ ರವರು ದೈವಧೀನರಾಗಿರುವುದರಿಂದ ಅವರ ಜ್ಞಾಪಕರ್ಥವಾಗಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ಸಯ್ಯಾದ್ ಏಜಾಜ್ ನೇತೃತ್ವದಲ್ಲಿ ಅನ್ನದಾನ ಸಂತರ್ಪಣೆ ಮಾಡುತ್ತಿರುವುದು ಉತ್ತಮವಾಗಿದೆ. ಇಂದು ಸ್ವರೂಪ್ ನಮ್ಮ ಕಣ್ಣ ಮುಂದೆ ಇಲ್ಲದಿದ್ದರೇ ಅವರ ಸೇವೆಗಳು, ಆದರ್ಶಗಳು ನಮ್ಮ ಮುಂದೆ ಇನ್ನು ಜೀವಂತವಾಗಿದೆ ಎಂದರು. ಇಂದು ಇಡೀ ಹಾಸನ ಜಿಲ್ಲೆಯೆ ಅವರನ್ನು ಕೊಂಡಾಡುತ್ತಿದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಅಶೋಕ್ ಕುಮಾರ್ ಮಾತನಾಡಿ, ಆರ್.ಕೆ. ಸ್ವರೂಪ್ ರವರ ಕಾಲಾವಧಿಯಲ್ಲಿ ಜಿಲ್ಲೆ ಒಳಗೆ ಎಲ್ಲಾರ ಮನ ಗೆದ್ದಿದ್ದರು. ಹಾಸನದಲ್ಲಿ ಯಾವ ಕಾರ್ಯಕ್ರಮ ನಡೆದರೂ ಅಲ್ಲಿ ಸಮಾಜ ಸೇವಕರಾದ ಸ್ವರೂಪರ ಧ್ವನಿ ಇರುತಿತ್ತು. ಇಂದು ನಮ್ಮ ಕಣ್ಣ ಮುಂದೆ ಇಲ್ಲದಿರುವುದು ನೋವು ತಂದಿದೆ. ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಅನ್ನದಾನ ಮಾಡುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಇದೆ ವೇಳೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಸಯ್ಯಾದ್ ಏಜಾಜ್, ವಕೀಲರಾದ ಅಶೋಕ್ ಕುಮಾರ್, ಅಮಿನತ್, ಹೆಚ್.ಎ. ವಿಜಯಕುಮಾರ್, ಸಾಧೀಕ್ ಆಲಿಖಾನ್, ಸುರೇಶ್, ವೇಧಾವತಿ, ಆಯಿಷಾ, ಶಶಿಕಲಾ, ಲಿಖಿತ್, ಜಮೀರ್ ಪಾಷಾ, ವೀಣಾ, ಅನುರಾಧ ಇತರರು ಪಾಲ್ಗೊಂಡಿದ್ದರು.
Tags
ಹಾಸನ